Site icon BosstvKannada

ರವಿಕುಮಾರ್ ಸದನದಲ್ಲಿ ಅಲ್ಲ, ನಿಮ್ಮಾನ್ಸ್‌ನಲ್ಲಿ ಇರಬೇಕು: ಪ್ರಿಯಾಂಕ್ ಖರ್ಗೆ 

ರವಿಕುಮಾರ್ ಸದನದಲ್ಲಿ ಅಲ್ಲ. ನಿಮ್ಮಾನ್ಸ್‌ನಲ್ಲಿ ಇರಬೇಕು. ಅವರು ಅಶ್ಲೀಲವಾಗಿ ಮಾತನಾಡಿದ್ದಕ್ಕೆ ವಿಡಿಯೋ ಸಾಕ್ಷಿಯಿದೆ. ಈಗ ರವಿಕುಮಾರ್ ನೇಣು ಹಾಕಿಕೊಳ್ಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಮಧ್ಯಮಗಳೊಂದಿಗೆ ಮಾತನಾಡಿದ ಅವರು, ಎನ್.ರವಿಕುಮಾರ್ ಮೂಲತಃ ಬಿಜೆಪಿಯವರು ಅಲ್ಲ. ಅವರು ಆರ್‌ಎಸ್‌ಎಸ್ ಶಾಖೆಯಿಂದ ಬಂದವರು. ತಮ್ಮ ಬಾಯಿ ಚಪಲಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರವಿಕುಮಾರ್ ಅವರಿಗೆ ಮುಂಚೆಯಿಂದ ಬಾಯಿ ಚಪಲವಿದೆ. ಕಲಬುರಗಿಯಲ್ಲೂ ಜಿಲ್ಲಾಧಿಕಾರಿಗಳ ವಿರುದ್ಧ ಬಾಯಿಗೆ ಬಂದ ಹಾಗೇ ಮಾತಾಡಿದ್ದಾರೆ. ಅದಕ್ಕೆ ಕೋರ್ಟ್ ಸಹ ಛೀಮಾರಿ ಹಾಕಿದೆ. ಈಗ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಬಗ್ಗೆ ಕೆಟ್ಟ ಮಾತನಾಡುವ ಮೂಲಕ ತಮ್ಮ ಕೊಳಕು ಬುದ್ಧಿ, ಕೊಳಕು ಮನಸ್ಸನ್ನು ರವಿಕುಮಾರ್ ತೋರಿದ್ದಾರೆ. ರವಿಕುಮಾರ್ ಸದನದಲ್ಲಿ ಅಲ್ಲ. ನಿಮ್ಮಾನ್ಸ್ನಲ್ಲಿ ಇರಬೇಕು ಎಂದು ಲೇವಡಿ ಮಾಡಿದ್ದಾರೆ.

ಮುಖ್ಯ ಕಾರ್ಯದರ್ಶಿಗಳ ಬಗ್ಗೆ ಮಾತನಾಡಿ ಕೊಳಲು ಮನಸ್ಸು ಪ್ರದರ್ಶನ ಮಾಡಿದ ರವಿಕುಮಾರ್ ಆ ರೀತಿ ಅಶ್ಲೀಲ ಮಾತನಾಡಿಲ್ಲ. ಅಶ್ಲೀಲ ಹೇಳಿಕೆ ನೀಡಿದರೆ ನೇಣು ಹಾಕಿಕೊಳ್ಳುತ್ತೇನೆ ಎಂದು ಬೇರೆ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದು ಅವರಿಗೆ ನಾಚಿಕೆ ಆಗಬೇಕು. ವಿಧಾನಸೌಧದ ಎದುರಿಗೆ ಮಾತನಾಡಿದ ವಿಡಿಯೋವೇ ಸಾಕ್ಷಿಯಾಗಿದೆ. ಹಗ್ಗ ಕೊಡಿ ರವಿಕುಮಾರ್ ನೇಣು ಹಾಕಿಕೊಳ್ಳಲಿ ಎಂದು ಗುಡುಗಿದ್ದಾರೆ.

Exit mobile version