Site icon BosstvKannada

ರಶ್ಮಿಕಾ, ವಿಜಯ್ ಮದುವೆ ಡೇಟ್ ಫಿಕ್ಸ್!! ಯಾವಾಗ ಮದುವೆ?

ನಟಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ (vijay devarakonda rashmika mandanna) ಮದುವೆ (Marriage) ಬಗ್ಗೆ ಅಭಿಮಾನಿಗಳು ಕಾತುರತಿಂದ ಕಾಯುತ್ತಿದ್ದಾರೆ. ಈ ಕಾತುರತೆಗೆ ಈಗ ಉತ್ತರ ಸಿಕ್ಕಿದ್ದು, ಕೆಲವೇ ದಿನಗಳಲ್ಲಿ ಈ ಜೋಡಿ ಹಸೆಮಣೆ ಏರಲಿದೆ.

ಈ ಜೋಡಿ ಅಕ್ಟೋಬರ್ ನಲ್ಲಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಈಗ ಮುಂದಿನ ವರ್ಷದ ಫೆಬ್ರವರಿ 26ರಂದು ವಿವಾಹವಾಗಲಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಭರದ ಸಿದ್ಧತೆ ಕೂಡ ನಡೆಯುತ್ತಿದೆ ಎನ್ನಲಾಗಿದೆ.

ಗೀತಾ ಗೋವಿಂದಂ ಜೋಡಿ ಶೀಘ್ರದಲ್ಲೇ ನಿಜ ಜೀವನದಲ್ಲಿಯೂ ಸತಿ ಪತಿ ಆಗಲಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಈಗಾಗಲೇ ಐತಿಹಾಸಿಕ ಅರಮನೆಯನ್ನು ಬುಕ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರಶ್ಮಿಕಾ ಮತ್ತು ವಿಜಯ್ ಅವರ ನಿಶ್ಚಿತಾರ್ಥವು ತುಂಬಾ ಸರಳವಾಗಿ ಮತ್ತು ಯಾರಿಗೂ ತಿಳಿಯದಂತೆ ನಡೆಯಿತು. ನಿಶ್ಚಿತಾರ್ಥದಂತೆಯೇ, ವಿವಾಹವು ಸಹ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಬಹಳ ಖಾಸಗಿಯಾಗಿರುತ್ತದೆ. ಹೈದರಾಬಾದ್‌ಗೆ ಹಿಂದಿರುಗಿದ ನಂತರ ಅವರು ಸ್ನೇಹಿತರು, ಸಂಬಂಧಿಗಳಿಗಾಗಿ ಆರತಕ್ಷತೆಯನ್ನು ಆಯೋಜಿಸಬಹುದು ಎನ್ನಲಾಗುತ್ತಿದೆ.

“ನನ್ನ ಸಂಗಾತಿ ನನಗೆ ಸಂಬಂಧವಿಲ್ಲದ ನೋವಿನಿಂದ ಚೇತರಿಸಿಕೊಳ್ಳಲು ಸಹಾಯ ಮಾಡಿದರು” ಎಂದು ರಶ್ಮಿಕಾ ಇತ್ತೀಚೆಗೆ ಪ್ರತಿಕ್ರಿಯಿಸಿದ್ದಾರೆ. ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಚಿತ್ರಗಳ ಮೂಲಕ ಈ ಜೋಡಿ ಪ್ರೇಕ್ಷಕರಿಗೆ ಹತ್ತಿರವಾಯಿತು. ಇತ್ತೀಚೆಗೆ ನ್ಯೂಯಾರ್ಕ್‌ನಲ್ಲಿ ನಡೆದ ಇಂಡಿಯಾ ಡೇ ಪೆರೇಡ್‌ನಲ್ಲಿಯೂ ಇಬ್ಬರೂ ಭಾಗವಹಿಸಿದ್ದರು.

Exit mobile version