BosstvKannada

ಭಾವಿ ಮೈದುನನಿಗೆ ಫ್ರೀಯಾಗಿ ಹೆಲ್ಪ್‌ ಮಾಡಿದ Rashmika Mandanna

ವಿಜಯ್‌ ಮತ್ತು Rashmika Mandanna ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗ್ತಾನೆ ಇರ್ತಾರೆ.. ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಡೇಟಿಂಗ್‌ ವಿಚಾರ ಸದ್ಯ ಗುಟ್ಟಗೇನು ಉಳಿದಿಲ್ಲಾ. ಡೇಟ್‌ ಮಾಡ್ತಿದ್ದಾರೆ ಅನ್ನೋ ಗಾಸಿಪ್‌ಗಳು ಗೀತಾ ಗೋವಿಂದಂ ಸಿನಿಮಾದಿಂದಲೂ ಕೇಳಿ ಬರ್ತಾನೆ ಇವೇ. ಹೀಗೆ ಅವರಿಬ್ಬರ ಮಧ್ಯೆ ಏನೋ ನಡೀತಾ ಇದೆ ಅನ್ನೋ ಗಾಸಿಪ್‌ಗಳಿಗೆ ಮತ್ತೆ ರಶ್ಮಿಕಾ ಕ್ಲೂ ಕೊಟ್ಟಿದ್ದಾರೆ.

ವಿಜಯ್‌ ದೇವರಕೊಂಡ ತಮ್ಮ ಆನಂದ್‌ ಅಭಿನಯಿಸುತ್ತಿರುವ ಮುಂದಿನ ಸಿನಿಮಾಗೆ ರಶ್ಮಿಕಾ ಮಂದಣ್ಣ ಫ್ರೀಯಾಗೇ ಚಪ್ಪಾಳೆ ತಟ್ಟಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಚಿಕ್ಕ ಅಥವಾ ದೊಡ್ಡದೇ ಸಿನಿಮಾಗಳ ಪ್ರಮೋಶನ್‌ಗಳಿಗೆ ಹಣ ಪಡೆಯದೇ ಕೆಲಸ ಮಾಡೋದಿಲ್ಲ. ಅದ್ರಲ್ಲೂ ಫ್ರೀಯಾಗಂತೂ ಮಾಡಿಕೊಡೋದು ಕಷ್ಟಸಾಧ್ಯ.. ಒಂದ್‌ ಅಂತೂ ಪಕ್ಕಾ ತಮಗ ಬೇಕಾದವರಿಗೆ ಮಾತ್ರ ಫ್ರೀ ಯಾಗಿ ಮಾಡಿಕೋಡ್ತಾರೆ ಹೊರತು ಸುಖಾ ಸುಮ್ಮನೆ ಉಚಿತ ಸೇವೆ ಮಾಡೋದಿಲ್ಲ.

ಈಗ ರಶ್ಮಿಕಾ ಮಂದಣ್ಣ ವಿಜಯ್‌ ದೇವರಕೊಂಡ ಸಹೋದರ ಆನಂದ್​ಗಾಗಿ ಉಚಿತವಾಗಿ ಕೆಲಸ ಮಾಡಿಕೊಟ್ಟಿದ್ದಾರೆ ಅನ್ನೋ ಗಾಸಿಪ್‌ ಸಿನಿಮಾ ಅಂಗಳದಲ್ಲಿ ಜೋರಾಗೇ ಕೇಳಿ ಬರ್ತಿದೆ. ಬೇಬಿ ಸಿನಿಮಾದಲ್ಲಿ ನಟಿಸಿದ್ದ ಆನಂದ್ ಹಾಗೂ ವೈಷ್ಣವಿ ಚೈತನ್ಯ ಮತ್ತೆ ಲವ್​ಸ್ಟೋರಿ ಕಥೆಯ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಚಿತ್ರಕ್ಕೆ ‘ಪ್ರೊಡಕ್ಷನ್ ನಂಬರ್ 32’ ಎನ್ನುವ ತಾತ್ಕಾಲಿಕ ಟೈಟಲ್ ಇಡಲಾಗಿದೆ. ಈ ಸಿನಿಮಾದ ಮುಹೂರ್ತಕ್ಕೆ ರಶ್ಮಿಕಾ ಆಗಮಿಸಿದ್ದು, ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದಾರೆ.

Also Read: ಗಿಲ್‌ಗೆ ನಾಯಕ ಪಟ್ಟ ಕಟ್ಟಲು Gambhir ಮಸಲತ್ತು..! ಗಂಭೀರ್‌-ಗಿಲ್‌ ಮೀಟಿಂಗ್‌ನಲ್ಲಿ ಆಗಿದ್ದೇನು..?

ಈ ಮೂಲಕ ವಿಜಯ್‌ ದೇವರಕೊಂಡ ಸಹೋದರ ಆನಂದ್ ಹೊಸ ಸಿನಿಮಾ ಸೆಟ್ಟೇರಿದ್ದು, ರಶ್ಮಿಕಾ ವಿಜಯ್‌ ಮಧ್ಯೆ ಸಂಥಿಂಗ್‌ ಸಂಥಿಂಗ್‌ ಅನ್ನೋದು ಪಕ್ಕಾ ಆದಂತಾಗಿದೆ. ಸದ್ಯ ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭರ್ಜರಿ ಚರ್ಚೆಯಾಗ್ತಿದೆ.

Exit mobile version