ಬಿಗ್‌ಬಾಸ್ ಮೊದಲ ದಿನವೇ ಬಿಗ್ ಟ್ವಿಸ್ಟ್!, ಬಿಗ್‌ಬಾಸ್ ಮಾತಿಗೆ ಎಲ್ಲಾ ಸ್ಪರ್ಧಿಗಳು ಏನ್ ಮಾಡಿದ್ರು ಗೊತ್ತಾ?, ಇನ್ನು ಬಂದು ಒಂದು ದಿನನೂ ಆಗಿಲ್ಲ, ಆಗಲ್ಲೇ ಬಿಗ್‌ಬಾಸ್ ಮನೆಯಲ್ಲಿ ಅಲ್ಲೋಲ ಕಲ್ಲೋಲ. ದೊಡ್ಮನೆ ಒಳಗೆ ಹೋದ 19 ಜನಕ್ಕೆ ಮೊದಲ ದಿನವೇ ಶಾಕ್ ಆಗಿದೆ. ನಾನು ನಿಮ್ಮನ್ನ ಸ್ವಾಗತ ಮಾಡೋಕೆ ಬಂದಿಲ್ಲ. ನಿಮ್ಮಲ್ಲಿರೋ 19 ಜನರಲ್ಲಿ ಒಬ್ಬರನ್ನ ಮನೆಗೆ ಕಳಿಸಲು ಬಂದಿದ್ದೇನೆ. ಆ ಒಬ್ಬರು ಯಾರು ಅನ್ನೋದನ್ನ ನೀವೇ ಪರಸ್ಪರ ಚರ್ಚೆ ಮಾಡಿ ಹೊರಗೆ ಕಳಿಸಿ ಅಂತಲೇ ಬಿಗ್ ಬಾಸ್ ಹೇಳಿದ್ದಾರೆ. ಹಾಗಾಗಿಯೇ ಸ್ಪರ್ಧಿಗಳಲ್ಲಿ ಟೆಕ್ಷನ್ ಕ್ರಿಯೇಟ್ ಆಗಿದ್ದು, ಮೊದಲ ದಿನವೇ ಮನೆಗೆ ಹೋಗೋದು ಯಾರು? ಅನ್ನೊ ಸಸ್ಪೆನ್ಸ್ ಕ್ರಿಯೇಟ್ ಆಗಿದೆ. ಕಳೆದ 11 ಸೀಸನ್‌ಗಳಲ್ಲಿ ಇಲ್ಲಿವರೆಗೂ ಇಷ್ಟೊಂದು ಜನ ಮನೆ ಒಳಗೆ ಹೋಗಿರಲಿಲ್ಲ. ಈ ಸಲ ಬೇರೇನೆ ಇರುತ್ತದೆ ಅಂತ ಬಿಗ್ ಬಾಸ್ ಹೋಸ್ಟ್ ಸುದೀಪ್ ಪ್ರೋಮೋದಲ್ಲಿಯೇ ಮೊದಲೇ ಹೇಳಿದ್ದಾರೆ. ಅದಕ್ಕೆನೆ 19 ಜನ ಮನೆ ಒಳಗೆ ಹೋಗಿ ಆಶ್ಚರ್ಯ ಮೂಡಿಸಿದ್ದಾರೆ. ಆದರೆ, ಜಂಟಿಯಾಗಿ ಒಂದಷ್ಟು ಜನ ಒಳಗೆ ಹೋಗಿದ್ದಾರೆ. ಒಂಟಿ ಆಗಿ ಇನ್ನೂ ಕೆಲವು ಸ್ಪರ್ಧಿಗಳು ಮನೆಗೆ ಪ್ರವೇಶ ಮಾಡಿದ್ದಾರೆ. ಆದರೆ, ಕೊನೆಯಲ್ಲಿ ಉಳಿದ ಮೂರು ಜನ ಒಂಟಿನೂ ಇಲ್ಲ. ಜಂಟಿನೂ ಇಲ್ಲ ಅನ್ನುವ ಹಾಗೆ ದೊಡ್ಮೆನೆಗೆ ಕಾಲಿಟ್ಟಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಮೊದಲ ದಿನವೇ ಯಾರ್ ಹೋಗ್ತಾರೆ ಅನ್ನೋ ಪ್ರಶ್ನೆ ಇದೆ. ಸದ್ಯ ಬಿಗ್ ಸ್ಪರ್ಧಿಗಳಾದ ಗಾಯಕ ಮಾಳು ನಿಪನಾಳ, ಸ್ಪಂದನಾ ಹಾಗೂ ಚಿಕ್ಕ ಹುಡುಗಿ ರಕ್ಷಿತಾ ಶೆಟ್ಟಿ ಮೇಲೆ ಕಣ್ಣ ಇಟ್ಟಿದ್ದಾರೆ. ಈ ಮೂವರಲ್ಲಿ ಒಬ್ಬರು ಮನೆಗೆ ಹೋಗ್ತಾರಾ? ಅಥವಾ ಜಂಟಿ ಇಲ್ವೆ ಒಂಟಿ ಆಗಿರೋರಲ್ಲಿಯೇ ಯಾರಾದ್ರು ಮನೆಗೆ ಹೋಗ್ತಾರಾ ಅನ್ನೋ ಪ್ರಶ್ನೆ ಎದ್ದಿದೆ.
ಬಿಗ್‌ಬಾಸ್ ಮನೆಯಿಂದ ರಕ್ಷಿತಾ ಶೆಟ್ಟಿ ಔಟ್!? : ಬಿಗ್ ಸ್ಪರ್ಧಿಗಳಿಗೆ ಟಕ್ಕರ್ ಕೊಟ್ಟ ಬಿಗ್‌ಬಾಸ್!

