BosstvKannada

ಸಿನಿಮಾದಿಂದ ರಶ್ಮಿಕಾರನ್ನ ದೂರ ಇಡಲು ರಕ್ಷಿತ್‌ ಪ್ರಯತ್ನಿಸಿದ್ರಾ..?

ಬೆಂಗಳೂರು, ಮಾ.11: ಕಿರಿಕ್‌ ಪಾರ್ಟಿ ಕನ್ನಡದಲ್ಲಿ ಸಖತ್‌ ಕ್ರೇಜ್‌ ಹುಟ್ಟು ಹಾಕಿದ್ದ ಸಿನಿಮಾ. ರಕ್ಷಿತ್‌ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರ ಲೈಫ್‌ನಲ್ಲೂ ಈ ಸಿನಿಮಾ ದೊಡ್ಡ ಟರ್ನಿಂಗ್‌ ಪಾಯಿಂಟ್‌. ತೆರೆ ಮೇಲೆ ಪ್ರೇಕ್ಷಕರ ಫೇವರಿಟ್‌ ಆಗಿದ್ದ ಈ ಜೋಡಿ ನಿಜ ಜೀವನದಲ್ಲಿ ಮದುವೆ ಆಗಲು ರೆಡಿ ಆಗಿದ್ರು. ಸಿನಿಮಾದಲ್ಲಿ ಒಂದಾಗದ ಕರ್ಣ-ಸಾನ್ವಿ ರಿಯಲ್‌ ಆಗಿ ಒಂದಾಗ್ತಿದ್ದಾರೆ ಅಂತ ಕನ್ನಡಿಗರು ಸಖತ್‌ ಖುಷಿಯಲ್ಲಿದ್ರು. ಆದರೆ, ಎಂಗೇಜ್‌ ಆದ ಒಂದೇ ವರ್ಷಕ್ಕೆ ಇಬ್ಬರು ದೂರ ಆಗಿದ್ರು. ಈ ಘಟನೆಯಿಂದ ರಶ್ಮಿಕಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ರು. ಸಾಕಷ್ಟು ಟ್ರೋಲ್‌ಗಳನ್ನ ಎದುರಿಸಿದ್ರು, ಅವರ ವ್ಯಕ್ತಿತ್ವಕ್ಕೆ ಅಗ್ನಿ ಪರೀಕ್ಷೆ ಎದುರಾಗಿತ್ತು. ಇದೀಗ ಅವರು ವಿಜಯ್‌ ದೇವರಕೊಂಡ ಜೊತೆ ಮದುವೆ ಆಗಿ ಖುಷಿಯಲ್ಲಿರೋವಾಗ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಬರೋಬ್ಬರಿ 8 ವರ್ಷಗಳ ಬಳಿಕ ರಕ್ಷಿತ್‌-ರಶ್ಮಿಕಾ ಬ್ರೇಕಪ್ ಆಗಲು ಅಸಲಿ ಕಾರಣ ಏನು ಅನ್ನೋದು ತುಂಬಾ ವೈರಲ್‌ ಆಗ್ತಿದೆ. ಈ ಆಡಿಯೋ ಮತ್ತಷ್ಟು ಅವಾಂತರಗಳನ್ನೂ ಸೃಷ್ಟಿ ಮಾಡಬಹುದು.

ಹೌದು, ರಕ್ಷಿತ್‌ ಶೆಟ್ಟಿ ಜೊತೆ ಮದುವೆ ಮುರಿದು ಬಿದ್ದಮೇಲೆ, ತುಂಬಾ ನೆಗೆಟಿವ್‌ ಆಗಿದ್ದು ರಶ್ಮಿಕಾ. ತಾವು ಬೆಳೆಯಬೇಕು ಅಂತ ರಕ್ಷಿತ್‌ಗೆ ಕೈಕೊಟ್ರು. ಅವಕಾಶವಾದಿ, ಮೋಸಗಾತಿ ಅಂತೆಲ್ಲಾ ಸೋಷಿಯಲ್‌ ಮಿಡಿಯಾದಲ್ಲಿ ಟ್ರೋಲ್‌ ಮಾಡಲಾಗ್ತಿತ್ತು. ಅಷ್ಟೇ ಯಾಕೆ ಕನ್ನಡದಲ್ಲಿ ಅವರಿಗೆ ಅವಕಾಶ ಕೊಡಬಾರದು ಅಂತಲೂ ಕೆಲವೊಂದು ವರ್ಗ ಮಾತಾಡಿಕೊಳ್ತಿತ್ತು. ಎಷ್ಟರ ಮಟ್ಟಿಗೆ ಅಂದ್ರೆ ಕರ್ನಾಟಕದ ಕ್ರಶ್‌ ಆಗಿದ್ದ ರಶ್ಮಿಕಾರನ್ನ ಕನ್ನಡಿಗರೇ ದ್ವೇಷಿಸುವ ಮಟ್ಟಕ್ಕೆ ಹೋಗಿತ್ತು. ಆದರೆ ರಶ್ಮಿಕಾ ಎಲ್ಲೂ ಕೂಡ ಇದರ ಬಗ್ಗೆ ಮಾತನಾಡಿರಲಿಲ್ಲ. ತಮ್ಮ ಮೇಲೆ ಅಪವಾದಗಳು ಹರಿದುಬರ್ತಿದ್ರೂ ಇನ್ನೊಬ್ಬರ ಮೇಲೆ ಗೂಬೆ ಕೂರಿಸಲಿಲ್ಲ. ಎಲ್ಲವನ್ನೂ ಮೆಟ್ಟಿನಿಂತು ನ್ಯಾಷನಲ್‌ ಕ್ರಶ್‌ ಆಗಿ, ದೇಶದಲ್ಲೇ ಸಖತ್‌ ಹೆಸರು ಮಾಡಿದ್ರು.. ಮದುವೆ ಕೂಡ ಆದ್ರು. ಆದ್ರೆ ಈಗ ಅವರ ತಾಯಿಯದ್ದು ಎನ್ನಲಾದ ಆಡಿಯೋ ತುಂಬಾ ವೈರಲ್‌ ಆಗ್ತಿದೆ. ಅವರ ತಾಯಿ ಸುಮನ್‌ ಮಂದಣ್ಣ ಹಿರಿಯ ಪತ್ರಕರ್ತರೊಬ್ಬರ ಜೊತೆ ಮಾತನಾಡುವಾಗ ರಕ್ಷಿತ್‌ ಶೆಟ್ಟಿ ವಿರುದ್ಧ ಸ್ಫೋಟಕ ಆರೋಪ ಮಾಡಿದ್ದಾರೆ.. ರಶ್ಮಿಕಾ ಜೊತೆ ಎಷ್ಟೆಲ್ಲಾ ಕಿರಿಕ್‌ ಮಾಡಿದ್ರು ಅಂತ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

https://youtu.be/FfB5kVBFsGI?si=TSciINO3MOEhsbLG

2017ರಲ್ಲಿ ಎಂಗೇಜ್‌ ಆಗಿದ್ದ ಈ ಜೋಡಿ ಸಂಬಂಧ 2018ರಲ್ಲಿ ಬ್ರೇಕ್‌ ಆಗಿತ್ತು. ಆದ್ರೆ ಎಲ್ಲರ ಕಣ್ಣು ರಶ್ಮಿಕಾ ಮೇಲಿತ್ತು. ಇದೀಗ ಎಲ್ಲದಕ್ಕೂ ರಕ್ಷಿತ್‌ ಶೆಟ್ಟಿನೇ ಕಾರಣ ಅಂತ ರಶ್ಮಿಕಾ ತಾಯಿ ಅಸಲಿ ಕಾರಣ ಬಿಚ್ಚಿಟ್ಟಿದ್ದಾರೆ. 20ನೇ ವರ್ಷಕ್ಕೆ ನಾಯಕಿಯಾಗಿದ್ದ ರಶ್ಮಿಕಾ 21ನೇ ವರ್ಷಕ್ಕೆ ಮದುವೆ ಆಗಲು ರೆಡಿಯಾಗಿದ್ದ ಸಂದರ್ಭವನ್ನು ನೆನಪಿಸಿಕೊಂಡ ಅವರು 35 ವರ್ಷದ ಹುಡುಗನಿಗೆ 21 ವರ್ಷದ ಹುಡುಗಿಯನ್ನ ಕೊಟ್ಟಿದ್ದೇ ನನ್ನ ದೊಡ್ಡಗುಣ.. ಆದರೆ ಅದಕ್ಕೆ ರಕ್ಷಿತ್‌ ಅರ್ಹನಾಗಿರಲಿಲ್ಲ ಅನ್ನೋ ರೀತಿ ಈ ಆಡಿಯೋದಲ್ಲಿ ನೋವು ತೋಡಿಕೊಂಡಿದ್ದಾರೆ. ರಶ್ಮಿಕಾರನ್ನ ಚಿತ್ರರಂಗಕ್ಕೆ ಪರಿಚಯಿಸಿದ್ದು ರಕ್ಷಿತ್‌ ಆದ್ರೂನೂ ಪ್ರೀತಿಯಲ್ಲಿ ಅವನು ತುಂಬಾ POSSESSIVE ಆಗಿದ್ದ. ಎಲ್ಲಿ ಹೋಗಬೇಕು, ಯಾರ ಜೊತೆ ಇರ್ಬೇಕು ಅಂತೆಲ್ಲಾ ಅವನೇ ನಿರ್ಧರಿಸಿ ತುಂಬಾ ಕಂಟ್ರೋಲ್‌ ಮಾಡ್ತಿದ್ದ. ಕೂತರೂ ತಪ್ಪು, ನಿಂತರೂ ತಪ್ಪು ಅಂತ ಡಿಕ್ಟೇಟರ್‌ ರೀತಿ ವರ್ತಿಸುತ್ತಿದ್ದ ಅಂತ ರಕ್ಷಿತ್‌ ಶೆಟ್ಟಿ ಹೆಸರು ಹೇಳದೇ ದೂರಿದ್ದಾರೆ ಅಂತಾ ಹೇಳಲಾಗ್ತಿದೆ. ಇನ್ನೂ ರಶ್ಮಿಕಾ ಅಭಿನಯಿಸಿರುವ ದಿ ಗರ್ಲ್‌ ಫ್ರೆಂಡ್‌ ಸಿನಿಮಾದಲ್ಲಿ ಕೂಡ ಇದೇ ರೀತಿ ಕಥೆ ಇತ್ತು. ಆ ಸಿನಿಮಾ ಬಗ್ಗೆ ಮಾತನಾಡುವಾಗ ನಿಜ ಜೀವನದಲ್ಲೂ ನಾನು ಇಂಥ ಪರಿಸ್ಥಿತಿ ಎದುರಿಸಿದ್ದೆ ಅಂತ ರಶ್ಮಿಕಾ ಹೇಳಿಕೊಂಡಿರೋದು ಈ ವದಂತಿಗಳಿಗೆ ಪುಷ್ಟಿ ನೀಡಿದೆ.

ಅಷ್ಟೇ ಅಲ್ಲ, ಗೀತಾ ಗೋವಿಂದಂ ಸಿನಿಮಾ ರಿಲೀಸ್‌ ಸಮಯದಲ್ಲೂ ರಶ್ಮಿಕಾಗೆ ರಕ್ಷಿತ್‌ ತುಂಬಾ ಕಾಟ ಕೊಟ್ಟಿದ್ರಂತೆ. ಅದರ ಕಿಸ್ಸಿಂಗ್‌ ಸೀನ್‌ ವೈರಲ್‌ ಆದಾಗ ಟಾಕ್ಸಿಕ್‌ ಆಗಿ ಬಿಹೇವ್‌ ಮಾಡಿದ್ರಂತೆ. ರಶ್ಮಿಕಾ ತನ್ನ ತಾಯಿಯ ಬಳಿ PERMISSION ಕೇಳಿಯೇ ಆ ದೃಶ್ಯಕ್ಕೆ ಒಪ್ಪಿಕೊಂಡಿದ್ರು. ಆದ್ರೆ ನಡೆದಿದ್ದೇ ಬೇರೆ. ರಶ್ಮಿಕಾಗೆ ಇನ್ಮುಂದೆ ಸಿನಿಮಾ ಮಾಡಬಾರದು ಅಂತ ರಕ್ಷಿತ್‌ ಒತ್ತಡ ಹಾಕಿದ್ರಂತೆ. ಗೀತಾ ಗೋವಿಂದಂ ರಿಲೀಸ್‌ ಆಗುವ ಹಿಂದಿನ ದಿನ ಕೂಡ ರಕ್ಷಿತ್‌ ಹಾಗೂ ಅವರ ಮ್ಯಾನೇಜರ್ ರಶ್ಮಿಕಾಗೆ ಮಧ್ಯರಾತ್ರಿ ಕಾಲ್‌ ಮಾಡಿ ಭೇಟಿಯಾಗಲು ಪೀಡಿಸಿದ್ದರಂತೆ, ಹೈದರಾಬಾದ್‌ಗೆ ಕಾರು ಕಳಿಸಿ ವಾಪಸ್‌ ಬರಲು ಹೇಳಿದ್ದರಂತೆ, ಇನ್ನು ಮುಂದೆ ಯಾವ ಸಿನಿಮಾನೂ ಮಾಡಲ್ಲ ಎಂದು ಟ್ವೀಟ್‌ ಮಾಡು ಅಂತ ರಶ್ಮಿಕಾಗೆ ಒತ್ತಾಯಿಸಿದ್ರಂತೆ. ಆ ಸಮಯದಲ್ಲಿ ರಶ್ಮಿಕಾರನ್ನ ಮದುವೆಯಾಗಿ ಅವರನ್ನ ಸಿನಿಮಾದಿಂದ ದೂರ ಇರಿಸಲು ರಕ್ಷಿತ್‌ ಹಾಗೂ ಅವರ ಗ್ಯಾಂಗ್‌ ಪ್ಲ್ಯಾನ್‌ ಮಾಡಿತ್ತು ಅಂತ ರಶ್ಮಿಕಾ ತಾಯಿ ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ರಶ್ಮಿಕಾ ಸ್ಟಾರ್‌ ನಟರ ಜೊತೆ ನಟಿಸೋದು ರಕ್ಷಿತ್‌ ಶೆಟ್ಟಿಗೆ ಸಹಿಸೋಕೆ ಆಗ್ತಿರ್ಲಿಲ್ಲ ಅಂತಲೂ ಹೇಳ್ಕೊಂಡಿದ್ದಾರೆ.

ಇತ್ತೀಚೆಗೆ ರಕ್ಷಿತ್‌ ಶೆಟ್ಟಿ ಸೋಷಿಯಲ್‌ ಮಿಡಿಯಾದಲ್ಲಿ ನಾಯಿ ಫೋಟೋ ಹಾಕ್ಕೊಂಡಿದ್ದಕ್ಕೆ, ಕೆಲವೊಂದಿಷ್ಟು ಮಂದಿ ರಶ್ಮಿಕಾಗೆ ಟ್ರೋಲ್‌ ಮಾಡಿದ್ರು. ಆದರೆ, ರಶ್ಮಿಕಾ ತಾಯಿಯದ್ದು ಎನ್ನಲಾದ ಆಡಿಯೋ ಎಲ್ಲಾ ಆರೋಪಗಳಿಗೆ ಫುಲ್‌ಸ್ಟಾಪ್‌ ಇಟ್ಟಿದೆ. ಸಿನಿಮಾದಲ್ಲಿ ಸಿಂಪಲ್‌ ಸ್ಟಾರ್‌ ಆಗಿರುವ ರಕ್ಷಿತ್‌ ಶೆಟ್ಟಿ ರಶ್ಮಿಕಾ ಲೈಫ್‌ನಲ್ಲಿ ಪಕ್ಕಾ ಕಿರಿಕ್‌ ಬಾಯ್‌ ಆಗಿದ್ರು ಅನ್ನೋದನ್ನ ಎತ್ತಿ ಹಿಡಿದಿದೆ. ಆದರೆ ಯಾವುದು ಸತ್ಯ? ಯಾವುದು ಸುಳ್ಳು? ಅಸಲಿ ಕಹಾನಿ ಏನು? ಅನ್ನೋದಕ್ಕೆ ರಕ್ಷಿತ್‌ ಶೆಟ್ಟಿ ಹಾಗೂ ರಶ್ಮಿಕಾ ಸ್ಪಷ್ಟನೆ ಕೊಡಬೇಕಿದೆ.

Exit mobile version