Rakesh Poojary Passes Away: ಕಾಮಿಡಿ ಆಕ್ಟರ್ ರಾಕೇಶ್ ಪೂಜಾರಿ ನಿಧನ ಹೊಂದಿದ ಹಿನ್ನಲೆ ಸ್ಯಾಂಡಲ್‌ವುಡ್‌ನ ಅನೇಕರು ಕಂಬನಿ ಮಿಡಿದಿದ್ದಾರೆ. ಹಲವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಸಿನಿ ಜಗತ್ತಿಗೆ ಕಾಲಿಟ್ಟಿದ್ದ ರಾಕೇಶ್ ಬಹು ಬೇಗನೆ ತಮ್ಮ ಬದುಕಿನ ಓಟವನ್ನ ಮುಗಿಸಿದ್ದಾರೆ.
ಕೇವಲ 33 ವರ್ಷದವರಾಗಿದ್ದ ರಾಕೇಶ್ ಮನೆಯ ಏಕ ಮಾತ್ರ ಆಧಾರ ಸ್ತಂಭವಾಗಿದ್ದರು. ಆದರೆ ಅವರ ಈ ಅಕಾಲಿಕ ನಿಧನ ಅವರ ಅಮ್ಮ ಮತ್ತು ತಂಗಿಯನ್ನು ಅನಾಥರನ್ನಾಗಿ ಮಾಡಿದೆ. ಅವರ ಸಾವಿನ ಸುದ್ದಿ ತಿಳಿದ ತಕ್ಷಣ ನಟಿ ರಕ್ಷಿತಾ ಪ್ರೇಮ್ ಬೇಸರ ವ್ಯಕ್ತಪಡಿಸಿ ಸಂತಾಪ ಸೂಚಿಸಿದ್ದಾರೆ.
Also Read: ಕಾಮಿಡಿ ಕಿಲಾಡಿಯ Rakesh Poojary ನಿಧನ: ಕಂಬನಿ ಮಿಡಿದ ಚಿತ್ರರಂಗ
ಕಾಮಿಡಿ ಕಿಲಾಡಿ ಸೀಸನ್ 3 ಮೂಲಕ TV ಜಗತ್ತಿಗೆ ಪಾದಾರ್ಪಣೆ ಮಾಡಿದ್ದ ರಾಕೇಶ್ ತಮ್ಮ ನಟನಾ ಚಾತುರ್ಯದಿಂದಲೇ ಎಲ್ಲರ ಮನಗೆದ್ದಿದ್ದರು. ಈ ಕಾರ್ಯಕ್ರಮದಿಂದ ಪರಿಚಯವಾಗಿದ್ದ ರಾಕೇಶ್ ನಟಿ ರಕ್ಷಿತಾರಿಗೆ ಅತ್ಯಂತ ಪ್ರೀತಿಪಾತ್ರಾಗಿದ್ದರು.

ರಕ್ಷಿತಾ ಪ್ರೇಮ್ ರಾಕೇಶ್ ನಿಧನದ ಕುರಿತು ಹಂಚಿಕೊಂಡಿರುವ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. ನಗುಮುಖದ ರಾಕೇಶ್, ನನ್ನ ನೆಚ್ಚಿನ ವ್ಯಕ್ತಿ. ಮೃದು ಸ್ವಭಾವದ ವ್ಯಕ್ತಿತ್ವ ನಿನ್ನದು, ಮಿಸ್ ಯೂ ಮಗನೇ. ನಾನು ಇನ್ನೂ ಎಂದಿಂಗೂ ರಾಕೇಶ್ ಅವರನ್ನು ಮಾತನಾಡಿಸಲು ಸಾಧ್ಯವಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಕಷ್ಟವಾಗ್ತಿದೆ. ಕಾಮಿಡಿ ಕಿಲಾಡಿಗಳು ನನ್ನ ಹೃದಯಕ್ಕೆ ಹತ್ತಿರವಿರುವ ಕಾರ್ಯಕ್ರಮ. ಅದರಲ್ಲಿ ರಾಕೇಶ್ ಕೂಡ ಒಬ್ಬರು. ರಾಕೇಶ್ ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತಾರೆ. ನಿಮ್ಮನ್ನು ಹಾಗೂ ನಿಮ್ಮ ನಗುವನ್ನು ನಾವು ಯಾವಾಗಲೂ ಮಿಸ್ ಮಾಡಿಕೊಳ್ಳುತ್ತೇವೆ. ಒಳ್ಳೆಯ ವ್ಯಕ್ತಿ, ಟ್ಯಾಲೆಂಟೆಡ್ ಕಲಾವಿದನಾಗಿದ್ರು. ನೀವೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತವಾಗಿರುತ್ತೀರಾ. ನಿನ್ನ ನಗು ಮತ್ತು ನಿನ್ನ ಸುತ್ತ ಇರುವವರನ್ನು ನಗುಸುತ್ತಿದ್ದ ರೀತಿ. ಥ್ಯಾಂಕ್ಯೂ ರಾಕೇಶ್ ಎಂದು ಬರೆದುಕೊಂಡಿದ್ದಾರೆ. ರಾಕೇಶ್ ಪೂಜಾರಿ ನಿಧನ, ಕನ್ನಡಿಗರ ನಗುವಿಗೆ ದೊಡ್ಡ ಬ್ರೇಕ್ ಬಿದ್ದಂತಾಗಿದೆ.