ಕಾಂತಾರ ಸಿನಿಮಾ ಸಖತ್ ಹಿಟ್ ಆಗಿ ಇಡೀ ದೇಶವೇ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡಿವಂತೆ ಮಾಡಿದ ಸಿನಿಮಾ.. ಆದರೆ ಈಗ ಈ ಚಿತ್ರಕ್ಕೆ ಒಂದಲ್ಲೊಂದು ತೊಂದರೆ ತಾಪತ್ರಯಗಳು ಎದುರಾಗುತ್ತಿದೆ. ಕಾಂತಾರ ಪ್ರೀಕ್ವೆಲ್ ಚಿತ್ರೀಕರಣದಲ್ಲಿರುವ ತಂಡಕ್ಕೆ ಸಿನೆಮಾ ಶೂಟಿಂಗ್ನ ವೇಳೆಯಲ್ಲೇ ಅನೇಕ ಅಡ್ಡಿಗಳು ಎದುರಾಗುತ್ತಿವೆ.
ಈಗ ರಾಕೇಶ್ ಸಾವು ಸಹ ಕಾಂತಾರದ ಕುತ್ತಿಗೆಗೆ ಥಳುಕು ಹಾಕಿಕೊಂಡಿದೆ. ಕಾಂತಾರ ಚಿತ್ರ ತಂಡದವರಿಗೆ ತೊಂದರೆ ಆಗುತ್ತಿರುವುದು ಇದೇ ಮೊದಲೇನಲ್ಲ.. ಕಳೆದ ನವೆಂಬರ್ನಲ್ಲಿ ಶೂಟಿಂಗ್ ಮುಗಿಸಿ ಕೊಲ್ಲೂರಿಗೆ ಹೊರಟಿದ್ದ 20 ಜ್ಯೂನಿಯರ್ ಕಲಾವಿದರಿದ್ದ ಬಸ್ ಅಪಘಾತವಾಗಿತ್ತು. ನಂತರ ಸಕಲೇಶಪುರದಲ್ಲಿ ಅರಣ್ಯದಲ್ಲಿ ಸ್ಫೋಟಕ ಬಳಕೆಯಿಂದ ಅರಣ್ಯ ನಾಶ ಮಾಡಲಾಗಿದೆ ಎಂಬ ಆರೋಪ ತಂಡದ ತೆಲೆಗಂಟಿತ್ತು.
ಇದರ ನಂತರ ಕಾಂತಾರ ಚಿತ್ರದ ಸಹಕಲಾವಿದ ಈಜಲು ಹೋಗಿ ಮೃತಪಟ್ಟಿದ್ದ.. ಇದೀಗ ರಾಕೇಶ್ ಪೂಜಾರಿ ನಿಧನ ಕಾಂತಾರದ ಸುತ್ತ ಅನುಮಾನದ ಹುತ್ತ ಸೃಷ್ಟಿಸಿದೆ. ಕಾಂತಾರ 1 ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಕೇಶ್, ಹಿಂದಿನ ತಿಂಗಳು ನಡೆದ ಕಾಂತಾರ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು. ಆದರೆ ಈಗ ಅವರ ದಿಢೀರ್ ಹೃದಯಾಘಾತ ಎಲ್ಲರಿಗೂ ನೋವುಂಟು ಮಾಡಿದೆ. ಅದೇ ರೀತಿ ಈಗ ಕಾಂತಾರ ತಂಡ ರಾಕೇಶ್ ಸಾವಿಗೂ ಕಾಂತಾರ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ ಅಂತಾ ಚಿತ್ರತಂಡ ಸ್ಪಷ್ಟಪಡಿಸಿದೆ.

