ಅದ್ಭುತ ದೃಶ್ಯಕಾವ್ಯದ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದು ಬಾಹುಬಲಿ ಸಿನಿಮಾ.. ಅದರಲ್ಲೂ ಬಾಹುಬಲಿ ಬೆನ್ನಿಗೆ ಕಟ್ಟಪ್ಪ ಇರಿದಿದ್ದು ಎಲ್ಲ ಪ್ರೇಕ್ಷರನ್ನ ಬೆರಗಾಗಿಸಿತ್ತು. ಆದ್ರೀಗ ಅದೇ ರೀತಿ, ಅದೇ ಸೀನ್ ಕನ್ನಡ ಬಿಗ್‌ಬಾಸ್‌ನಲ್ಲಿ ನಡೆದಿದೆ. ಕುಚಿಕು ಗೆಳೆಯನಂತಿದ್ದ ಗಿಲ್ಲಿ ಬೆನ್ನಿಗೆ ರಘು ಚೂರಿ ಹಾಕಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದೆ.
ಹೌದು.. ಬಾಹುಬಲಿ ಸಿನಿಮಾ ಯಾರಿಗ್ ಗೊತ್ತಿಲ್ಲ ಹೇಳಿ. ಅದ್ರಲ್ಲೂ ಕಟ್ಟಪ್ಪ ಹಾಗೂ ಬಾಹುಬಲಿಯ ಒಡನಾಟ ಜೊತೆಗೆ ಸಿನಿಮಾ ಕ್ಲೈಮ್ಯಾಕ್ಸ್ ಅದ್ಭುತವಾಗಿತ್ತು. ಇದೇ ಥರದ ಒಂದು ಘಟನೆ ಬಿಗ್‌ಬಾಸ್ ಶೋನ ಗಿಲ್ಲಿ ಮತ್ತು ರಘು ಮಧ್ಯೆ ನಡೆದಿದೆ. ಇಷ್ಟು ದಿನ ಸ್ನೇಹಜೀವಿಗಳಾಗಿದ್ದ ಮ್ಯೂಟೆಂಟ್ ರಘು ಹಾಗೂ ಗಿಲ್ಲಿ ನಟ ಮೊನ್ನೆ ರೆಸಾರ್ಟ್ ಟಾಸ್ಕ್ ಆದಾಗಿನಿಂದ ಒಬ್ಬರ ಮೇಲೊಬ್ರು ಕತ್ತಿ ಮಸೆಯುತ್ತಿರುವಂತೆ ಕಾಣ್ತಿದೆ. ಗಿಲ್ಲಿ ರಘು ಗಡ್ಡಕ್ಕೆ ಕೈಹಾಕಿ ಕಿಚಾಯಿಸೋದು, ರಘು ಮೈ ಮೇಲೆ ಬೀಳೋದು, ಹಾಗೆ ಗಿಲ್ಲಿ ಮೇಲೆ ರಘು ಅವರ ಹುಸಿಮುನಿಸು ಇವೆಲ್ಲಾ ಜನ್ರನ್ನ ಸಖತ್ ಎಂಟರ್‌ಟೇನ್ ಮಾಡ್ತಾ ಇತ್ತು. ಆದ್ರೆ, ಇತ್ತೀಚೆಗೆ ಇವರಿಬ್ರೂ ಹಾವು ಮುಂಗುಸಿ ಥರ ಆಡ್ತಿದ್ದಾರೆ. ರಘು ಏನ್ ಹೇಳಿದ್ರೂ ಗಿಲ್ಲಿ ಅದನ್ನ ತೊಗೋಳೋಕೆ ರೆಡಿ ಇಲ್ಲ. ಹಾಗೆ ಗಿಲ್ಲಿ ಬಾಯಿ ತೆಗೆದ್ರೆ ರಘು ಪಿತ್ತ ನೆತ್ತಿಗೇರ್ತಿದೆ. ಇದೀಗ ನಾಮಿನೇಷನ್‌ವರೆಗೂ ಬಂದು ನಿಂತಿದೆ.

ನಿನ್ನೆ ಬಿಗ್‌ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಒಂದು ಚಟುವಟಿಕೆ ಮೂಲಕ ಮನೆಮಂದಿ ನಾಮಿನೇಟ್ ಮಾಡ್ಬೇಕಾಗಿತ್ತು. ಬೆನ್ನಿಗೆ ವೃತ್ತಾಕಾರದ ಬೆಂಡನ್ನು ಪ್ರತಿಯೊಬ್ಬರಿಗೆ ಕಟ್ಟಲಾಗಿತ್ತು. ಆ ಬೆಂಡಿಗೆ ಚಾಕು ಹಾಕುವ ಮೂಲಕ ನಾಮಿನೇಟ್ ಮಾಡ್ಬೇಕು. ರಘು ಅವರು ಚಾಕುವನ್ನು ಗಿಲ್ಲಿಗೆ ಹಾಕಿ ನಾಮಿನೇಟ್ ಮಾಡಿದರು. ಗಿಲ್ಲಿಯನ್ನು ರಘು ನಾಮಿನೇಟ್ ಮಾಡುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ರಘು ನಾಮಿನೇಟ್ ಮಾಡಿದ್ದನ್ನು ಅನೇಕರು ಕಟ್ಟಪ್ಪ, ಬಾಹುಬಲಿಗೆ ಚಾಕು ಹಾಕಿದ್ದಕ್ಕೆ ಹೋಲಿಕೆ ಮಾಡಿದ್ದಾರೆ. ಯಾವ ರೀತಿ ಬಾಹುಬಲಿ ಕ್ಲೈಮ್ಯಾಕ್ಸ್‌ನಲ್ಲಿ ಕಟ್ಟಪ್ಪ ಬಾಹುಬಲಿಗೆ ಕತ್ತಿ ಚುಚ್ತಾರೆ ಅದೇ ರೀತಿ ರಘು, ಗಿಲ್ಲಿಗೆ ಹಾಕಿದ್ದಾರೆ ಅಂತಾ ಎರಡೂ ಫೋಟೋಗಳನ್ನ ಕ್ಲಬ್ ಮಾಡಿ ಟ್ರೋಲ್ ಮಾಡಲಾಗ್ತಿದೆ.
ಅದೇನೇ ಇರ್ಲಿ, ಇವರಿಬ್ಬರ ಗೆಳೆತನ, ತುಂಟಾಟ ವೀಕ್ಷಕರನ್ನ ಸಖತ್ ಎಂಟರ್‌ಟೇನ್ ಮಾಡ್ತಾ ಇತ್ತು. ಬಟ್ ಇನ್ಮುಂದೆ ಇಬ್ಬರ ಬಾಂಡಿಂಗ್ ಹೇಗಿರುತ್ತೆ ಅಂತಾ ಕಾದುನೋಡ್ಬೇಕಿದೆ. ಅದಲ್ಲದೇ ಇವತ್ತಿನ ಎಪಿಸೋಡ್‌ನಲ್ಲಿ ಗಿಲ್ಲಿ ಯಾರನ್ನ ನಾಮಿನೇಟ್ ಮಾಡ್ಬಹುದು ಎಂಬ ಕುತೂಹಲವಿದೆ.