BosstvKannada

ಕ್ಯೂಪಿಎಲ್‌ ಸೀಸನ್‌ 2 ಜರ್ಸಿ, ಟ್ರೋಪಿ ಅನಾವರಣ : ಅಂಜುಬಾಬಿ ಜಾರ್ಜ್‌ ಶ್ಲಾಘನೆ

ಸ್ಯಾಂಡಲ್‌ವುಡ್‌ನ ಅತಿದೊಡ್ಡ ಮನರಂಜನಾ ಹಬ್ಬ ಬಹು ನಿರೀಕ್ಷಿತ ಕ್ವೀನ್ಸ್‌ ಪ್ರೀಮಿಯರ್‌ ಲೀಗ್‌(QPL) ಎರಡನೇ ಆವೃತ್ತಿಗೆ ಕೌಂಟ್‌ಡೌನ್‌ ಶುರುವಾಗಿದೆ. ಈಗಾಗ್ಲೇ ತಂಡಗಳ ಹರಾಜು, ಆಟಗಾರ್ತಿಯರ ಹರಾಜು ಪ್ರಕ್ರಿಯೆ ನಡೆದಿದೆ. ಅಕ್ಟೋಬರ್‌ 25ರಂದು ಕ್ಯೂಪಿಎಲ್ ಸೀಸನ್‌ 2 ಕ್ರೀಡೋತ್ಸವದ ಮೆಗಾ ಬಿಡ್ಡಿಂಗ್‌ ಯಶಸ್ವಿಯಾಗಿ ನಡೆದಿದೆ.

ಕ್ಯೂಪಿಎಲ್‌ ಎರಡನೇ ಸೀಸನ್‌ನ ಜರ್ಸಿ, ಟ್ರೋಫಿ ಅನಾವರಣ ಮಾಡಲಾಗಿದ್ದು, ಒಲಿಂಪಿಕ್ಸ್‌ ಪದಕ ವಿಜೇತೆ ಅಂಜುಬಾಬಿ ಜಾರ್ಜ್‌, FIBA ASIA & ಕರ್ನಾಟಕ ಒಲಿಂಪಿಕ್ಸ್‌ ಅಸೋಸಿಯೇಷನ್‌ ಅಧ್ಯಕ್ಷರಾದ ಡಾ.ಕೆ. ಗೋವಿಂದರಾಜ್‌, ಕ್ಯೂಪಿಎಲ್‌ ಸಂಸ್ಥಾಪಕರಾದ ಮಹೇಶ್‌ಗೌಡ ಹಾಗೂ ಜನಪ್ರಿಯ ನಟ ಮತ್ತು ಸಹ ಸಂಸ್ಥಾಪಕರಾದ ಪ್ರಮೋದ್‌ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ರು.

ಕಳೆದ ವರ್ಷ ಯಶಸ್ವಿಯಾಗಿ ನಡೆದ ಮೊದಲ ಆವೃತ್ತಿಗೆ ಸಿಕ್ಕ ಭರ್ಜರಿ ಪ್ರತಿಕ್ರಿಯೆ ನಂತರ ಈ ಸಲದ ಆವೃತ್ತಿಯಲ್ಲಿ 12 ಹೊಸ ಕ್ರೀಡೆಗಳನ್ನು ಸೇರಿಸಿಕೊಳ್ಳಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ 10 ತಂಡಗಳಿದ್ದು, ಅಕ್ಟೋಬರ್‌ 25ರಂದು ನಡೆದ ಬಿಡ್‌ನಲ್ಲಿ ಪ್ರತಿಷ್ಠಿತ ಉದ್ಯಮಿಗಳು ತಂಡಗಳನ್ನು ಖರೀದಿಸಿದ್ದಾರೆ. ಅದೇ ದಿನದಂದು ಆಟಗಾರ್ತಿಯರ ಹರಾಜು ಪ್ರಕ್ರಿಯೆಯೂ ಯಶಸ್ವಿಯಾಗಿ ನಡೆದಿದೆ. ಈ ಟೂರ್ನಿಯಲ್ಲಿ ಸೆಲೆಬ್ರಿಟಿಗಳು, ಆಂಕರ್ಸ್‌, ರಿಪೋರ್ಟರ್ಸ್‌, ಮಾಡೆಲ್‌ಗಳು ಮಿಂಚಲಿದ್ದು, ಈಗಾಗಲೇ ಟ್ರೋಪಿ ಗೆಲ್ಲಲು ಅಭ್ಯಾಸ ಶುರು ಮಾಡಿದ್ದಾರೆ. ಇನ್ನು, ಜನಪ್ರಿಯ ನಟಿ ಹಾಗೂ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಕ್ಯೂಪಿಎಲ್‌ 2.Oನ ಬ್ರಾಂಡ್‌ ಅಂಬಾಸಿಡರ್‌ ಆಗಿದ್ದಾರೆ.

ಅಕ್ಟೋಬರ್‌ 25ರ ಬಿಡ್ಡಿಂಗ್‌ನಲ್ಲಿ QPL ಟೈಟಲ್‌ ಸ್ಪಾನ್ಸರ್‌ ಆಗಿರುವ ಕೆಎನ್‌ಎಸ್‌ ಇನ್‌ಫ್ರಾಸ್ಟ್ರಕ್ಚರ್‌‌ ಎಂಡಿ ಕೆ.ಎನ್.‌ ಸುರೇಂದ್ರ ಹಾಗೂ ಸ್ಯಾಂಡಲ್‌ವುಡ್‌ ನಟಿಯರಾದ ಶಾನ್ವಿ ಶ್ರೀವತ್ಸವ, ಆಶಾ ಭಟ್‌, ಧನ್ಯಾ ರಾಮ್‌ಕುಮಾರ್‌, ನಿಧಿ ಸುಬ್ಬಯ್ಯ, ರಚನಾ ಇಂದರ್‌, ನೇಹಾ ಸಕ್ಸೇನಾ, ಭಾವನಾ ರಾವ್‌, ಸಪ್ತಮಿಗೌಡ ಸೇರಿದಂತೆ ಹಲವು ಸ್ಟಾರ್ಸ್‌ ಭಾಗಿಯಾಗಿದ್ರು.

Exit mobile version