BosstvKannada

Pushpa:ಪುಷ್ಪಾ 2 ದಾಖಲೆಕಲೆಕ್ಷನ್‌ನಲ್ಲಿ ವೈಲ್ಡ್‌ ಫೈರ್..!

ಅಲ್ಲು ಅರ್ಜುನ್‌(Allu Arjun) ಅಭಿಯನದ ಪುಷ್ಪ 2(Pushpa) ಸಿನಿಮಾ ಕಲೆಕ್ಷನ್‌ನಲ್ಲಿ ಕಿಂಗ್‌ ಆಗಿದೆ.. ಪುಷ್ಪ 2(Pushpa) ಸಿನಿಮಾ ಬಿಡುಗಡೆ ಆದ 32 ದಿನಗಳಲ್ಲೇ ದಾಖಲೆ ಮಾಡಿದೆ.. ಕೊವಿಡ್ ಬಳಿಕ ಬಿಡುಗಡೆ ಆಗಿರುವ ಎಲ್ಲ ಸಿನಿಮಾಗಳ ಬಾಕ್ಸ್ ಆಫೀಸ್​ ದಾಖಲೆಯನ್ನು ಹಿಂದಿಕ್ಕಿರುವ ಪುಷ್ಪ 2 ಸಿನಿಮಾ ಈಗ, ಬಾಹುಬಲಿ 2 (Bahubali)ಸಿನಿಮಾದ ದಾಖಲೆಯನ್ನು ಮುರಿದಿದ್ದು, ಈ ವಿಷಯವನ್ನು ಮೈತ್ರಿ ಮೂವಿ ಮೇಕರ್ಸ್ ಹಂಚಿಕೊಂಡಿದ್ದಾರೆ. 2017 ರಲ್ಲಿ ಬಿಡುಗಡೆ ಆಗಿದ್ದ ‘ಬಾಹುಬಲಿ 2’(Bahubali) ಸಿನಿಮಾ ಭಾರತದಲ್ಲಿಯೇ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 7 ವರ್ಷಗಳ ಹಿಂದೆಯೇ ಈ ಸಿನಿಮಾ 1810 ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಿತ್ತು. ಸ್ವತಃ ಪ್ರಭಾಸ್ ನಟನೆಯ ಸಿನಿಮಾಗಳು, ರಾಜಮೌಳಿಯ ‘ಆರ್​ಆರ್​ಆರ್’ ಸಿನಿಮಾ ಸಹ ಬಾಹುಬಲಿ 2 ಸಿನಿಮಾದ ಗಳಿಕೆಯನ್ನು ಮುರಿಯಲು ಆಗಿರಲಿಲ್ಲ. ಆದರೆ ಈಗ ‘ಪುಷ್ಪ 2’ ಸಿನಿಮಾ ಆ ದಾಖಲೆಯನ್ನು ಮುರಿದಿದೆ. ಪುಷ್ಪ 2 ಸಿನಿಮಾ ಬಿಡುಗಡೆ ಆಗಿ 32ನೇ ದಿನಕ್ಕೆ 1832 ಕೋಟಿ ರೂಪಾಯಿ ಹಣವನ್ನು ಕಲೆಕ್ಷನ್ ಮಾಡಿದೆ. ಆ ಮೂಲಕ ಅತಿ ಹೆಚ್ಚು ಹಣ ಗಳಿಸಿದ ಭಾರತದ 2ನೇ ಸಿನಿಮಾ ಎನಿಸಿಕೊಂಡಿದೆ. ಬಾಹುಬಲಿ ಸಿನಿಮಾವನ್ನು 3ನೇ ಸ್ಥಾನಕ್ಕೆ ತಳ್ಳಿ 2ನೇ ಸ್ಥಾನವನ್ನು ತನ್ನದಾಗಿಸಿಕೊಂಡಿರುವುದು ಮಾತ್ರವೇ ಅಲ್ಲದೆ, ಮೊದಲ ಸ್ಥಾನ ಗಳಿಸುವತ್ತ ದಾಪುಗಾಲು ಹಾಗಿದೆ. ಇನ್ನು, ಭಾರತದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಆಮಿರ್ ಖಾನ್ ನಟನೆಯ ದಂಗಲ್. 2016 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ವಿಶ್ವದಾದ್ಯಂತ 2100 ಕೋಟಿ ರೂಪಾಯಿ ಹಣ ಗಳಿಸಿ ಮೊದಲ ಸ್ಥಾನದಲ್ಲಿದೆ.

Exit mobile version