Protein Imbalance: ಪ್ರೋಟೀನ್ ನಮ್ ದೇಹದಲ್ಲಿ ಬಿಲ್ಡಿಂಗ್ ಬ್ಲಾಕ್ ರೀತಿ ಕೆಲ್ಸ ಮಾಡುತ್ತೆ. ಮೂಳೆಗಳು, ಕೂದಲು, ಉಗುರು ಇವುಗಳ ಬೆಳವಣಿಗೆಗೆ ಪ್ರೋಟೀನ್ ಬಹಳ ಮುಖ್ಯ. ಇದಲ್ಲದೇ ಚಯಾಪಚಯ ಪ್ರಕ್ರಿಯೆಯನ್ನು ಉತ್ತೇಜಿಸಲು ಪ್ರೋಟೀನ್ ಬೇಕೇಬೇಕು. ಮೊಟ್ಟೆ, ಮಾಂಸ, ಬೇಳೆಕಾಳುಗಳು, ಡ್ರೈಫ್ರೂಟ್ಸ್ ಪನೀರ್, ಮೊಸರು, ಇವುಗಳಲ್ಲಿ ಪ್ರೋಟೀನ್ ಹೇರಳವಾಗಿದೆ.
ಆದ್ರೆ, ನಮ್ಮ ದೇಶ್‌ದಲ್ಲಿ ಪ್ರೋಟೀನ್ ಕೊರತೆ ತುಂಬಾನೆ ಕಾಣಿಸಿಕೊಳ್ತಿದೆ. ಪ್ರೋಟೀನ್ ಕೊರತೆಯ ಆರಂಭಿಕ ಲಕ್ಷಣಗಳು ಚರ್ಮ ಹಾಗೂ ಕೂದಲಿನ ಮೇಲೆ ಕಾಣಿಸಿಕೊಳ್ಳುತ್ವೆ. ಕೂದಲು ಒಣಗೋದು, ಸ್ಪ್ಲಿಟ್ ಎಂಡ್ಸ್ ಆಗೋದು, ಚರ್ಮ ಒಣಗೋದು, ಚರ್ಮದ ಸಿಪ್ಪೆ ಸುಲಿದಂತಾಗೋದು ಪ್ರಮುಖ ಲಕ್ಷಣಗಳಾಗಿವೆ.
ಇದರ ಜೊತೆಗೆ, ಸ್ನಾಯು ದೌರ್ಬಲ್ಯ, ಆಯಾಸ, ಲೋ ಎನರ್ಜಿ, ಉಗುರುಗಳು ಮುರಿಯೋದು, ದೇಹದಲ್ಲಿ ಊತ ಕಾಣಿಸಿಕೊಳ್ಳೋದು ಸಹ ಪ್ರೋಟೀನ್ ಕೊರತೆಯ ಲಕ್ಷಣಗಳಾಗಿವೆ. ಪ್ರೋಟೀನ್ ಕೊರತೆಯನ್ನ ನೀಗಿಸಲು ಪ್ರೋಟೀನ್‌ಭರಿತ ಆಹಾರಗಳನ್ನು ಸೇವಿಸಿ. ಪ್ರೋಟೀನ್ ಸಪ್ಲಿಮೆಂಟ್ಸ್ ಕೂಡ ಸಿಗುತ್ತೆ.
Also Read: ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ Vishal – 15 ವರ್ಷಗಳ ಸ್ನೇಹಕ್ಕೀಗ ಮದುವೆಯ ಬೆಸುಗೆ
ವೈದ್ಯರ ಸಲಹೆ ಮೇರೆಗೆ ಅದನ್ನ ಕೂಡ ತಗೋಬೋದು. ಇನ್ನು ಬ್ಲಡ್ ಟೆಸ್ಟ್ ಮೂಲಕ ಪ್ರೋಟೀನ್ ಕೊರತೆ ಇದ್ಯಾ ಇಲ್ವಾ ಅಂತಾ ಖಚಿತಪಡಿಸಿಕೊಳ್ಬಹುದು. ಇದೇ ರೀತಿಯ ಇನ್ನಷ್ಟು ಹೆಲ್ತ್ ಟಿಪ್ಸ್ ಬೇಕು ಅನ್ನೋದಾದ್ರೆ ಕಾಮೆಂಟ್ ಮೂಲಕ ತಿಳಿಸಿ.

