Site icon BosstvKannada

ರಜನಿಕಾಂತ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಪ್ರಧಾನಿ

ನವದೆಹಲಿ: ನಟ ರಜನಿಕಾಂತ್‌(Rajinikanth) ಇಂದು 75ನೇ ಹುಟ್ಟು ಹಬ್ಬ (BirthDay) ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಶುಭ ಹಾರೈಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದಾರೆ. ರಜನಿಕಾಂತ್‌ ಅವರ ಅಭಿನಯವು ಪೀಳಿಗೆಗಳನ್ನು ಆಕರ್ಷಿಸಿದೆ ಮತ್ತು ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಅವರ ವೈವಿಧ್ಯಮಯ ಪಾತ್ರಗಳು ಒಂದು ಬೆಂಚ್‌ಮಾರ್ಕ್‌ ಸೃಷ್ಟಿಸಿದೆ. ಚಲನಚಿತ್ರ ಜಗತ್ತಿನಲ್ಲಿ ಅವರು 50 ವರ್ಷಗಳನ್ನು ಪೂರೈಸಿದ್ದರಿಂದ ಈ ವರ್ಷ ಗಮನಾರ್ಹವಾಗಿವೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಪ್ರಾರ್ಥಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಲ್ಲದೇ, ನಾಡಿನ ನಾಯಕರು, ಸೆಲೆಬ್ರಿಟಿಗಳು, ಅಭಿಮಾನಿಗಳು ಕೂಡ ರಜನಿಗೆ ವಿಶ್ ಮಾಡಿದ್ದಾರೆ. ತಮಿಳುನಾಡು (Tamilnadu) ಸಿಎಂ ಎಂ.ಕೆ. ಸ್ಟಾಲಿನ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿದ್ದಾರೆ.

Exit mobile version