ಪ್ರಧಾನಿ ನರೇಂದ್ರ ಮೋದಿ (PM Narendra Modi) ದೇಶದ ರಾಜಕಾರಣದಲ್ಲಿ ಮೋಸ್ಟ್ ಪವರ್‌ಫುಲ್ ಲೀಡರ್. ದೇಶವನ್ನು ಸತತ 3ನೇ ಬಾರಿಗೆ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.. ಆದ್ರೀಗ ಮೋದಿ ಆಡಳಿತ ಅಂತ್ಯದ ಅವಧಿ ಅತಿಹೆಚ್ಚು ಚರ್ಚೆಯಾಗುತ್ತಿದೆ.. ಯಾಕಂದ್ರೆ, ಮೋದಿಗೆ ಸೆಪ್ಟೆಂಬರ್ 17 ಬಂತಂದ್ರೆ 75 ವರ್ಷ.. ಒಂದು ವೇಳೆ ಮೋದಿ ನಿವೃತ್ತಿ ಪಡೆದ್ರೆ ಮುಂದಿನ ಸಾರಥಿ ಯಾರು? ಮೋದಿಯಷ್ಟೇ ಸಮರ್ಥವಾಗಿ ದೇಶವನ್ನು ಮುನ್ನಡೆಸಬಲ್ಲ ಸಾಮರ್ಥ್ಯ ಯಾರಿಗಿದೆ? ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಬಿಜೆಪಿಯ (BJP) ಹೈಕಮಾಂಡ್ ಪಡಸಾಲೆಯಲ್ಲಿ ಅತಿದೊಡ್ಡ ನಿರ್ಧಾರವೊಂದು ಜನ್ಮತಳೆದಿದೆ.

ಪ್ರಧಾನಿ ಮೋದಿಯ ಉತ್ತರಾಧಿಕಾರಿ ಯಾರು?
ಇತ್ತೀಚೆಗಷ್ಟೆ ಮೋದಿ ಅತಿ ಹೆಚ್ಚು ಅವಧಿಯ ಕಾಲ ಪಿಎಂ ಆಗಿ ಆಳ್ವಿಕೆ ನಡೆಸಿ ಮಾಜಿ ಪಿಎಂ ದಿವಂಗತ ಇಂದಿರಾ ಗಾಂಧಿ (Indira Gandhi) ದಾಖಲೆಯನ್ನ ಬ್ರೇಕ್ ಮಾಡಿದ್ರು.. ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ನೆಹರು ಅಗ್ರ ಸ್ಥಾನದಲ್ಲಿದ್ರೆ ಮೋದಿ ಎರಡನೇ ಸ್ಥಾನದಲ್ಲಿದ್ದಾರೆ.. ಬಿಜೆಪಿಯ ಅಗ್ರಗಣ್ಯ ನಾಯಕರಾಗಿರುವ ಮೋದಿ, ಈಗ ಅಧಿಕಾರ ಅಂತ್ಯದ ಹಾದಿಯಲ್ಲಿದ್ದಾರಾ ಅನ್ನೋ ಚರ್ಚೆ ಶುರುವಾಗಿದೆ.. ಹಾಗಾದ್ರೆ, ಮೋದಿಯ ಮನಮೆಚ್ಚಿದ ನಾಯಕ ಯಾರು? ಮೋದಿ ಉತ್ತರಾಧಿಕಾರಿ ಆಗುವ ಕೆಪಾಸಿಟಿ ಯಾರಿಗಿದೆ? ಅನ್ನೋ ಪ್ರಶ್ನೆಗಳಿಗೆ ಈಗಿನಿಂದಲೇ ಹಿಂಟ್ ಸಿಗುತ್ತಿದೆ.. ಅದಕ್ಕೆ ಸಾಕ್ಷಿಯೇ ಪ್ರಧಾನಿ ಮೋದಿ ಸಮ್ಮುಖದಲ್ಲಿ ಜರುಗಿದ ಘಟನೆ..
ಮೋದಿ ನಂತರದ ಪ್ರಬಲ ನಾಯಕ ಯಾರು ಅನ್ನೋ ಸಂದೇಶವನ್ನು ಸ್ವತಃ ಮೋದಿಯವರೇ ರವಾನಿಸುತ್ತಿದ್ದಾರೆ.. ಅದು ಬೇರೆ ಯಾರೂ ಅಲ್ಲ.. ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah). ಈಗಾಗ್ಲೇ ಅಮಿತ್ ಶಾ ದೇಶದಲ್ಲಿ ಅತಿಹೆಚ್ಚು ವರ್ಷಗಳ ಕಾಲ ಗೃಹ ಸಚಿವರಾಗಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ.. ಈ ಮೂಲಕ ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ(LK Advani) ದಾಖಲೆಯನ್ನು ಮುರಿದಿದ್ದಾರೆ.. ಇದೇ ಸಂದರ್ಭದಲ್ಲಿ ಅಮಿತ್ ಶಾ ಶ್ಲಾಘಿಸಿದ ಮೋದಿ ಹಾಡಿ ಹೊಗಳಿದ್ದಾರೆ. ಅವರ ಕಾರ್ಯವೈಖರಿ ಬಗ್ಗೆ ಎನ್‌ಡಿಎ (NDA)ಸಂಸದೀಯ ಪಕ್ಷದ ಸಭೆಯಲ್ಲಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..
ಅಮಿತ್ ಶಾ ಬಗ್ಗೆ ಮೋದಿ ಹಲವು ಶ್ಲಾಘನೆಯ ಮಾತುಗಳನ್ನ ಆಡಿದ್ದಾರೆ.. ಅಮಿತ್ ಶಾ ತಮ್ಮ ಅಡಳಿತದಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.. ಜಮ್ಮು ಕಾಶ್ಮೀರದ 370ನೇ ವಿಧಿ ರದ್ದು, ಪೌರತ್ವ ತಿದ್ದುಪಡಿ ಕಾಯ್ದೆ, ನಕ್ಸಲಿಸಂನ ಶಮನ, ಆಂತರಿಕ ಭದ್ರತೆ, ಗಡಿ ಸಂಬಂಧಿಸಿದ ದಂಗೆಗಳನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದೀರಿ ಅಂತ ಮೋದಿ ಹೊಗಳಿದ್ದಾರೆ.. ಇದೇ ಸಮಯದಲ್ಲಿ ಇದು ಕೇವಲ ಆರಂಭವಷ್ಟೆ.. ಬಹಳಷ್ಟು ದೂರ ನಾವು ಸಾಗಬೇಕಿದೆ ಅಂತ ಹೇಳಿಕೆ ನೀಡಿರೋದು ಇದೀಗ ಚರ್ಚೆಗೆ ಗ್ರಾಸವಾಗಿದೆ.. ಅಲ್ಲಿ ನಾವು ಅಂದ್ರೆ ಮೋದಿ-ಅಮಿತ್ ಶಾ ಇರ್ಬೋದು.. ಅಮಿತ್ ಶಾಗೆ ಇನ್ನೂ ಕೇವಲ 60 ವರ್ಷ.. ಹೀಗಾಗಿಯೇ ಇನ್ನಷ್ಟು ದೂರ ಸಾಗಬೇಕಿದೆ ಅಂತ ಮೋದಿ ಹೇಳಿದ್ದಾರೆ. ತಮ್ಮ ಬಳಿಕ ಅವರನ್ನೇ ಪ್ರಧಾನಿಯನ್ನಾಗಿ ಪರಿಗಣಿಸುವಂತೆ ಸುಳಿವು ಕೊಟ್ಟಿದ್ದಾರೆ ಅಂತ ವಿಶ್ಲೇಷಿಸಲಾಗ್ತಿದೆ..
RSS ನಿಯಮ ಪಾಲಿಸುತ್ತಾರಾ ಪ್ರಧಾನಿ ಮೋದಿ..?
ಇನ್ನೊಂದು ವಿಚಾರ ಅಂದ್ರೆ ಅದು ಆರ್‌ಎಸ್‌ಎಸ್ (RSS) ನಿಯಮ. RSS ನಾಯಕರೇ ಹೇಳುವ ಪ್ರಕಾರ, 75 ವರ್ಷದ ದಾಟಿದ ನಾಯಕರು ರಾಜಕೀಯದಿಂದ ವಿಶ್ರಾಂತಿ ಪಡೆಯಬೇಕು.. ಯುವ ನಾಯಕರಿಗೆ ಅವಕಾಶ ಕೊಡಬೇಕು ಅನ್ನೋ ನಿಯಮ ಇದೆ.. ಹೀಗಾಗಿ, ಸೆಪ್ಟೆಂಬರ್ 17ಕ್ಕೆ ಮೋದಿಗೆ 75 ವರ್ಷ ಕಂಪ್ಲೀಟ್ ಆಗುತ್ತೆ.. ಹೀಗಾಗಿ, ಆರ್‌ಎಸ್‌ಎಸ್ ನಿಯಮಕ್ಕೆ ತಲೆಬಾಗಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದರೆ, ಮುಂದಿನ ಪ್ರಧಾನಿ ಯಾರು ಅನ್ನೋ ಪ್ರಶ್ನೆಗಳಿಗೆಲ್ಲಾ ಸ್ವತಃ ಮೋದಿಯವರೇ ಈಗಿನಿಂದಲೇ ಹಿಂಟ್ ಕೊಡುತ್ತಿದ್ದಾರೆ ಅಂತಾ ಹೇಳಲಾಗುತ್ತಿದೆ.
ಈಗಾಗ್ಲೇ ಸಂಸದೀಯ ಸಭೆಯಲ್ಲಿ ಮೋದಿ ಹೇಳಿಕೆ.. ಊಹಾಪೋಹಗಳನ್ನು ನಾವು ತೆಗೆದುಹಾಕೋ ಹಾಗಿಲ್ಲ. ಯಾಕಂದ್ರೆ ತೆರೆಯಲ್ಲಿ ಮೋದಿ ಎಷ್ಟೇ ಶಕ್ತಿಶಾಲಿಯಾಗಿ ಕಂಡ್ರೂ ಅವರಿಗೆ ಪವರ್ ಸಪ್ಲೈ ಮಾಡೋದೇ ಅಮಿತ್ ಶಾ.. 3 ಅವಧಿಯಲ್ಲೂ ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಇದೇ ಚುನಾವಣಾ ಚಾಣಕ್ಯ ಕಾರಣ.. ಯಾವ್ದೇ ಮಹತ್ವದ ಯೋಜನೆಗಳ ಹಿಂದೆ ಇವರ ಗೇಮ್‌ಪ್ಲ್ಯಾನ್ ಇದ್ದೇ ಇದೆ.. ಇತ್ತೀಚೆಗೆ ಸಂಸತ್ತಿನಲ್ಲೂ ಆಪರೇಷನ್ ಸಿಂದೂರ್(operation sindoor), ಆಪರೇಷನ್ ಮಹದೇವ್ ಬಗೆಗೆ ಝೇಂಕರಿಸಿದ್ರು.. ಅವರ ಭಾಷಣಾ ಶೈಲಿಗೆ ಮೋದಿಯೇ ಫಿದಾ ಆಗಿದ್ರು.. ಹೀಗಿರುವಾಗ ಇಂತಹ ಸ್ಟ್ರಾಂಗ್ ಲೀಡರ್‌ನ ಸೈಡ್‌ಲೈನ್ ಮಾಡಿ ಯೋಗಿ ಆದಿತ್ಯನಾಥ್(yogi adityanath) ಪ್ರಧಾನಿ ಹುದ್ದೆಗೇರೋದು ಸುಲಭವಲ್ಲ.. ಅವರಿಗೆ ಎಷ್ಟೇ ಜನಪ್ರಿಯತೆ ಇದ್ರೂ ರಾಜಕಾರಣದಲ್ಲಿ ಅಮಿತ್ ಶಾಗೆ ಇರುವಷ್ಟು ಅನುಭವ ಇಲ್ಲ.. ಜೊತೆಗೆ ಕಳೆದ ಲೋಕಸಭೆ ಚುನಾವಣೆ ವೇಳೆ ಅತ್ಯಧಿಕ 80 ಸೀಟ್‌ಗಳನ್ನು ಹೊಂದಿದ್ದ ಉತ್ತರ ಪ್ರದೇಶದಲ್ಲೇ ಬಿಜೆಪಿ ಮುಗ್ಗರಿಸಿತ್ತು.. ಅದರ ಹೊಣೆ ನೇರವಾಗಿ ಸಿಎಂ ಯೋಗಿ ಮೇಲೆ ಬಿದ್ದಿತ್ತು.. 80ಕ್ಕೆ 80 ಸೀಟ್‌ಗಳನ್ನು ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದ ಯೋಗಿಗೆ ದೊಡ್ಡ ಮಟ್ಟದ ಹಿನ್ನಡೆಯಾಗಿತ್ತು.. ಅದಾದ ಮೇಲೆ ಯೋಗಿಯ ರಾಜಕೀಯ ವರ್ಚಸ್ಸು ಕೂಡ ಕಡಿಮೆಯಾಗಿದೆ. ಅಲ್ಲದೇ, ಬೇಕಂತಲೇ ಯೋಗಿ ಶಕ್ತಿಯನ್ನು ಹತ್ತಿಕ್ಕಲಾಗಿದೆ ಅಂತಲೂ ಚರ್ಚೆಯಾಗುತ್ತಿದೆ.
RSS ಟು ಹೋಮ್ ಮಿನಿಸ್ಟರ್ ಅಮಿತ್ ಶಾ ಬೆಳೆದಿದ್ದೇ ರೋಚಕ..!
ಕೇವಲ ಯೋಗಿ ಮಾತ್ರವಲ್ಲದೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡ ಪಿಎಂ ರೇಸ್‌ನಲ್ಲಿದ್ರು.. ಆದ್ರೆ ಆಕ್ರಮಣಾಕಾರಿ ಮನೋಭಾವದಲ್ಲಿ ಅವರು ಅಮಿತ್ ಶಾರಷ್ಟು ಶಕ್ತಿಶಾಲಿತನ ತೋರುತ್ತಿಲ್ಲ.. ಹೀಗಾಗಿ, ಅಮಿತ್ ಶಾ ಮುಂದೆ ಯಾರೂ ಇಲ್ಲ ಅನ್ನೋದನ್ನು ತೋರಿಸುತ್ತದೆ. ಸಾರ್ವಜನಿಕ ವಲಯದಲ್ಲಿ RSSನಿಂದ ತಮ್ಮ ಯಾತ್ರೆ ಆರಂಭಿಸಿದ್ದ ಅಮಿತ್ ಶಾ ಬಳಿಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸದಸ್ಯರಾಗಿ ಸಕ್ರಿಯರಾಗಿ ಪಾಲ್ಗೊಂಡಿದ್ರು. ನಂತರ ಅಹಮದಾಬಾದ್ ನಗರ ಘಟಕದ ಕಾರ್ಯದರ್ಶಿ, ಗುಜರಾತ್‌ನಲ್ಲಿ ಬಿಜೆಪಿಯ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷ, ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಖಜಾಂಚಿ ಹೀಗೆ ಸಾಕಷ್ಟು ವಲಯಗಳಲ್ಲಿ ಪಳಗಿ ಪವರ್‌ಫುಲ್ ಹೋಮ್ ಮಿನಿಸ್ಟರ್ ಆಗಿದ್ದಾರೆ.. ಹೀಗಾಗಿ ಅವರು ಮುಂದಿನ ಪಿಎಂ ಆದ್ರೂ ಅಚ್ಚರಿಪಡಬೇಕಾಗಿಲ್ಲ ಅಂತ ವಿಶ್ಲೇಷಿಸಲಾಗ್ತಿದೆ. ಸದ್ಯಕ್ಕೆ ಮೋದಿಯೇ ವೈರಿಗಳ ವಿರುದ್ಧ ಆರ್ಭಟಿಸಿ, ಅಭಿವೃದ್ಧಿ ಕಾರ್ಯಗಳಿಂದ ದೇಶವನ್ನ ಉತ್ತುಂಗಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿದ್ದಾರೆ.. ಆದ್ರೆ ಅವರ ಬಳಿಕ ಅವರಂತೆ ದೇಶವನ್ನು ಮುನ್ನಡೆಸೋದು ಯಾರು ಅನ್ನೋದು ಉತ್ತರಿಸಲಾಗದ ಪ್ರಶ್ನೆಯಾಗಿಯೇ ಉಳಿದಿದೆ.. ಮೇಲ್ನೋಟಕ್ಕೆ ಅಮಿತ್ ಶಾ ಮುಂದಿನ ಪ್ರಧಾನಿಯಂತೆ ಕಂಡ್ರೂ.. ಅಚ್ಚರಿ ಅಭ್ಯರ್ಥಿ ಗದ್ದುಗೆ ಏರಿದ್ರೂ ಸಂದೇಹಪಡುವಂತಿಲ್ಲ.. ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಿದೆ.