Site icon BosstvKannada

PKL 2025 : ಪ್ರೊ ಕಬಡ್ಡಿ ಲೀಗ್‌ ಟೂರ್ನಿಯ ವೇಳಾಪಟ್ಟಿ ಪ್ರಕಟ : ಮುಂದಿನ ತಿಂಗಳೇ ಆರಂಭ!

ಬಹುನಿರೀಕ್ಷಿತ 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಿದೆ. ಆಗಸ್ಟ್‌ 29 ರಂದು ಶುಕ್ರವಾರ ಈ ಟೂರ್ನಿಯು ಆರಂಭವಾಗಲಿದ್ದು, ಪ್ರಶಸ್ತಿಗಾಗಿ ಒಟ್ಟು 12 ತಂಡಗಳು ಈ ಟೂರ್ನಿಯಲ್ಲಿ ಕಾದಾಟ ನಡೆಸಲಿವೆ. ಹಾಲಿ ಚಾಂಪಿಯನ್‌ ಹರಿಯಾಣ ತಂಡ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿದೆ.

ಈ ಟೂರ್ನಿಯ ನಿಮಿತ್ತ ಈಗಾಗಲೇ ಮೆಗಾ ಹರಾಜಿ ಮುಗಿದಿದ್ದು, ಆಟಗಾರರು ದುಬಾರಿ ಮೊತ್ತವನ್ನು ಪಡೆಯುವ ಮೂಲಕ ಆಯಾ ತಂಡಗಳಿಗೆ ಸೇರ್ಪಡೆಯಾಗಿದ್ದಾರೆ. ಇದನ್ನು ಗಮನಿಸಿದರೆ, ಈ ಬಾರಿ ಟೂರ್ನಿಯು ಇನ್ನಷ್ಟು ರೋಚಕತೆಯಿಂದ ಕೂಡಿರಲಿದೆ ಎಂದು ಹೇಳಬಹುದು.

ಪಿಕೆಎಲ್ ಸೀಸನ್ 12ರ ಆರಂಭದ ದಿನಾಂಕವನ್ನು ಅನಾವರಣಗೊಳಿಸಲು ನಾವು ರೋಮಾಂಚನಗೊಂಡಿದ್ದೇವೆ. 10 ಆಟಗಾರರು ಒಂದು ಕೋಟಿ ರೂ. ಗಡಿಯನ್ನು ದಾಟಿ ದಾಖಲೆಯನ್ನು ಬರೆದಿದ್ದಾರೆ. ಈ ಹರಾಜಿನ ನಂತರ ನಮ್ಮ ಅತ್ಯಂತ ಸ್ಪರ್ಧಾತ್ಮಕ ಋತುವಿಗೆ ನಾವು ಅಡಿಪಾಯ ಹಾಕಿದ್ದೇವೆ.

ಅಭಿಮಾನಿಗಳಿಗೆ ಕಬಡ್ಡಿ ಮತ್ತೊಂದು ರೋಮಾಂಚಕ ಅಧ್ಯಾಯವನ್ನು ತರಲು ನಾವು ಎದುರು ನೋಡುತ್ತಿದ್ದೇವೆ. ಟೂರ್ನಿಯಲ್ಲಿ ಪಂದ್ಯಗಳ ದಿನಾಂಕ ಹಾಗೂ ಸ್ಥಳಗಳು ಸೇರಿದಂತೆ ಸಂಪೂರ್ಣ ವೇಳಾಪಟ್ಟಿಯನ್ನು ಅತಿ ಶೀಘ್ರದಲ್ಲಿ ಪ್ರಕಟಿಸಲಾಗುತ್ತದೆ ಎಂದು ಪ್ರೊ ಕಬಡ್ಡಿಯ ಬ್ಯುಸಿನೆಸ್‌ ಹೆಡ್‌ ಅನುಪಮ್‌ ಗೋಸ್ವಾಮಿ ತಿಳಿಸಿದ್ದಾರೆ.

Exit mobile version