Site icon BosstvKannada

900 ಕಿ.ಮೀ ದೂರದಿಂದ ಬಿಟ್ಟರೂ ಗೂಡು ಸೇರಿದ ಪಾರಿವಾಳ


ಚಿತ್ರದುರ್ಗ: ಪಾರಿವಾಳವೊಂದು ಬರೋಬ್ಬರಿ 900 ಕಿ.ಮೀ ದೂರಕ್ಕೆ ಒಯ್ದು ಬಿಟ್ಟರೂ ಮರಳಿ ಗೂಡು ಸೇರಿದೆ.
ಶಬರಿಮಲೆಯಲ್ಲಿ (Sabarimala) ಹಾರಿಬಿಟ್ಟ ಪಾರಿವಾಳವೊಂದು (Pigeon) 900 ಕಿಲೋ ಮೀಟರ್ ಕ್ರಮಿಸಿ ಗೂಡು ಸೇರಿದೆ. ಇದು ಚಿತ್ರದುರ್ಗ (Chitradurga) ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ತಳವಾರಹಟ್ಟಿಯಲ್ಲಿ (Thalavarahatti) ನಡೆದಿದೆ.

ಗ್ರಾಮದ ರಾಜು ಎಂಬ ವ್ಯಕ್ತಿ ಸಾಕಿದ್ದ ‘ಮದಕರಿ’ ಎಂಬ ಪಾರಿವಾಳವನ್ನು ಶಬರಿಮಲೆಗೆ ತೆರಳುವ ಮಾಲಾಧಾರಿಗೆ ನೀಡಿದ್ದರು. ಶಬರಿಮಲೆಯಿಂದ ಪಾರಿವಾಳವನ್ನು ಹಾರಿಬಿಡಲು ಹೇಳಿದ್ದರು. ಹೀಗಾಗಿ ಮಾಲಾಧಾರಿ ಡಿ. 31ರಂದು ಶಬರಿಮಲೆಯಲ್ಲಿ ಹಾರಿ ಬಿಟ್ಟಿದ್ದರು. ಜ. 21ರಂದು ಪಾರಿವಾಳ ಮರಳಿ ತಳವಾರಹಟ್ಟಿಗೆ ಬಂದು ತನ್ನ ಗೂಡು ಸೇರಿದೆ.

900 ಕಿಲೋ ಮೀಟರ್ ಕ್ರಮಿಸಿರುವ ಪಾರಿವಾಳ 21 ದಿನಗಳ ನಂತರ ತನ್ನ ಗೂಡು ಸೇರಿದೆ. ಈಗ ಪಾರಿವಾಳದ ನೆನಪಿನ ಶಕ್ತಿ, ಬಳಿಕ ಮರಳಿ ಗೂಡು ಸೇರಿದೆ. ಹೀಗಾಗಿ ಪಾರಿವಾಳದ ದಿಕ್ಕು ಪತ್ತೆ ಹಾಗು ನೆನಪಿನ ಶಕ್ತಿ ಬಗ್ಗೆ ಗ್ರಾಮಸ್ಥರಲ್ಲಿ ಭಾರೀ ಅಚ್ಚರಿ ಮೂಡಿದೆ.

Exit mobile version