ಪ್ರಧಾನಿ ಮೋದಿ ಅವರಿಂದ ನಿನ್ನೆಯಷ್ಟೇ ಲೋಕಾರ್ಪಣೆಗೊಂಡಿರುವ ಮೆಟ್ರೋ ಹಳದಿ ಮಾರ್ಗದಲ್ಲಿ ಇಂದಿನಿಂದ ಮೆಟ್ರೋ ಸಂಚಾರ ಪ್ರಾರಂಭವಾಗಿದ್ದು, ಪ್ರಯಾಣಿಕರು ದಿಲ್ ಖುಷ್ ಆಗಿದ್ದಾರೆ. ಟ್ರಾಫಿಕ್ ಕಿರಿಕಿರಿಗೆ ಬೇಸತ್ತ ಜನರು ಸದ್ಯ ರಿಲೀಫ್ ಆಗಿದ್ದಾರೆ. ಯಾಕಂದ್ರೆ ಆರ್ ವಿ ರೋಡ್‌ನಿಂದ ಬೊಮ್ಮ ಸಂದ್ರ ನಡುವೆ ಹೆಚ್ಚಾಗಿ ಟ್ರಾಫಿಕ್ ಉಂಟಾಗುತ್ತಿತ್ತು. ದಿನನಿತ್ಯ ಜನರು 2 ರಿಂದ 3ಗಂಟೆಕ್ಕಿಂತ ಹೆಚ್ಚೂ ಸಮಯ ಬರೀ ಟ್ರಾಫಿಕ್‌ನಲ್ಲೆ ಕಳೆದು ಹೋಗ್ತಿತ್ತು.. ಇದರಿಂದ ಜನ ರೋಸಿ ಹೋಗಿದ್ರು. ಅಲ್ಲದೆ ಸಾಕಷ್ಟು ಟೈಮ್ ಟ್ರಾಫಿಕ್‌ನಲ್ಲೇ ವೇಸ್ಟ್ ಆಗ್ತಿತ್ತು.
ಯಾವಾಗಪ್ಪಾ ಮೆಟ್ರೋ ಸಂಚಾರ ಶುರುವಾಗುತ್ತೆ ಅಂತಾ ಕಾಯ್ತಿರೋ ಜನರಿಗೆ ಆರ್ ವಿ ಟು ಬೊಮ್ಮ ಸಂದ್ರಗೆ ಮೆಟ್ರೊ ಕಾಲ ಬಂದೆ ಬಿಟ್ಟಿದೆ.. ಅದೇಷ್ಟೋ ದಿನದ ಕನಸಿಗೆ ನಿನ್ನೆ ಪ್ರಧಾನಿ ಮೋದಿ ಹಾಗೂ ರಾಜ್ಯ ಸರ್ಕಾರದ ನೇತೃತ್ವದಿಂದ ಕೊನೆಗೂ ಮೆಟ್ರೊ ಶುರುವಾಗಿದೆ. ಇಂದಿನಿಂದ ಶುರುವಾದ ಹಳದಿ ಮಾರ್ಗದ ಮೆಟ್ರೋ ಸಂಚಾರದಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಆರ್ ವಿ ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗಬೆಳಗ್ಗೆ 6.30ರಿಂದ ಮೆಟ್ರೋ ಸಂಚಾರ ಶುರುವಾಗಿದ್ದು, ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 6.30ಕ್ಕೆ ಮೆಟ್ರೋ ಸಂಚಾರ ಆರಂಭವಾಗಲಿದೆ. ಪ್ರತೀ 25 ನಿಮಿಷಕ್ಕೊಮ್ಮೆ ಮೆಟ್ರೋ ಸಂಚಾರವಿರಲಿದೆ. ಪ್ರತಿ ನಿಲ್ದಾಣ ದಲ್ಲಿ ನಿಲುಗಡೆ ಸಹಿತ ಮೊದಲ ನಿಲ್ದಾಣದಿಂದ ಕೊನೆ ನಿಲ್ದಾಣ ತಲುಪಲು 35 ನಿಮಿಷ ಬೇಕಾಗುತ್ತದೆ.
ಯೆಲ್ಲೋ ಲೈನ್‌ನಲ್ಲಿ ಒಟ್ಟು 16 ನಿಲ್ದಾಣಗಳಿವೆ. ಇದರಲ್ಲಿ ಎರಡು ಟರ್ಮಿನಲ್‌ಗಳು ಸೇರಿವೆ. ಡೆಲಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಕೊನೆಯ ರೈಲು ರಾತ್ರಿ 10.42 ಕ್ಕೆ ಸಂಚರಿಸಲಿದೆ. ಆರ್.ವಿ.ರೋಡ್ ಇಂಟರ್‌ಚೇಂಜ್ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 11.55 ಕ್ಕೆ ಕಾರ್ಯಾಚರಣೆ ನಡೆಸಲಿದೆ. ಬೆಳಿಗ್ಗೆ 6.30 ರಿಂದ ಡೆಲ್ಮಾ ಎಲೆಕ್ಟ್ರಾನಿಕ್ನಿಕ್ಸ್‌ನಿಂದ, ಬೊಮ್ಮಸಂದ್ರದಿಂದ ಬೆಳಿಗ್ಗೆ 7.10 ರಿಂದ ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಿಂದ ರೈಲು ಸಂಚಾರ ಮಾಡಲಿದೆ. ರಾತ್ರಿ 10.00 ಗಂಟೆಯ ನಂತರ ರೈಲು ಸಂಚಾರದ ಅವಧಿ ಕಡಿಮೆಯಾಗಿರಲಿದೆ.
ಭಾನುವಾರಗಳಲ್ಲಿ ರೈಲು ಸೇವೆಗಳು ಬೆ. 6.30 ಬದಲಾಗಿ 7.00 ಕ್ಕೆ ಪ್ರಾರಂಭವಾಗಲಿದೆ. ಹಳದಿ ಮಾರ್ಗದ ಟರ್ಮಿನಲ್ ನಿಲ್ದಾಣಗಳ ನಡುವಿನ ಪ್ರಯಾಣದ ದರ 60 ರೂ.ಗಳಾಗಿರುತ್ತವೆ. ಟೋಕನ್‌ಗಳು, ಕಾರ್ಡ್‌ಗಳು, ಬಿಎಂಆರ್‌ಸಿಎಲ್ ಸ್ಮಾರ್ಟ್ ಕಾರ್ಡ್‌ಗಳು, ಟಿಕೆಟ್‌ಗಳು ಎಂದಿನಂತೆಯೇ ಲಭ್ಯವಿರಲಿದೆ.