ಪಾಕಿಸ್ತಾನ ಹಾಗೂ ಪಿಓಕೆಯಲ್ಲಿದ್ದ ಉಗ್ರರನ್ನ ಅಷ್ಟೇ ಟಾರ್ಗೆಟ್ ಮಾಡಿ ಭಾರತ ಆಪರೇಷನ್ ಸಿಂದೂರ್(Operation Sindoor) ನಡೆಸಿತ್ತು. ಭಾರತದ ದಾಳಿಗೆ 100 ಕ್ಕೂ ಹೆಚ್ಚು ಉಗ್ರರು ಪ್ರಾಣ ಬಿಟ್ಟಿದ್ದು ನಿಜ. ಆದ್ರೆ ಇದ್ರಿಂದ ಕಿಡಿ ಕಾರಿರುವ ಪಾಕಿಸ್ತಾನ ಮಾತ್ರ ಭಾರತದ ಮೇಲೆ ದಾಳಿಗೆ ಯತ್ನಿಸಿದೆ. ಭಾರತದ ದಾಳಿ ವೇಳೆ ಯಾವುದೇ ಪಾಕಿಸ್ತಾನದ ಸೈನಿಕರನ್ನ, ಜನರನ್ನ ಟಾರ್ಗೆಟ್ ಮಾಡಲಾಗಿಲ್ಲ ಅಂತ ಸೇನೆ ಸ್ಪಷ್ಟನೆ ಕೊಟ್ಟಿದ್ರೂ ಪಾಕಿಸ್ತಾನ ಕಾಲುಕೆರೆದುಕೊಂಡು ಯುದ್ಧಕ್ಕೆ ನಿಂತಿದೆ. ನಿನ್ನೆ ರಾತ್ರಿ ಭಾರತದ 15 ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಅವಂತಿಪುರ, ಜಮ್ಮು, ಶ್ರೀನಗರ, ಪಟಾನ್‌ಕೋಟ್, ಅಮೃತ್‌ಸರ್, ಕಪುರ್‌ತಲಾ, ಜಲಂಧರ್ ಸೇರಿದಂತೆ 15 ನಗರಗಳ ಮೇಲೆ ಪಾಕಿಸ್ತಾನ ಮಿಸೈಲ್ ದಾಳಿಗೆ ಯತ್ನಿಸಿತ್ತು. ಆದ್ರೆ ಪಾಕ್ ದಾಳಿಯನ್ನ ಮೊದಲೇ ನಿರೀಕ್ಷಿಸಿದ್ದ ಭಾರತ ತನ್ನ ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಮ್ ಆದ S-400 ಸುದರ್ಶನ ಚಕ್ರ ಪ್ರಯೋಗಿಸಿ ಪಾಕಿಸ್ತಾನದ ಮಿಸೈಲ್‌ಗಳನ್ನು ಫಿನೀಶ್ ಮಾಡಿದೆ. ಹೀಗಾಗಿ ಪಾಕಿಸ್ತಾನದ ದಾಳಿ ವಿಫಲವಾಗಿ ಭಾರೀ ಮುಖಭಂಗವಾಗಿದೆ. ಇದ್ರ ಜೊತೆಗೆ ಪಾಕಿಸ್ತಾನದ ಏರ್ ಡಿಫೆನ್ಸ್ ಲಾಂಚರ್‌ಗಳನ್ನ ಭಾರತ ಧ್ವಂಸ ಮಾಡಿದೆ.
Also Read: Lahore Airport Blast : ಲಾಹೋರ್‌ನಲ್ಲಿ ಅಲ್ಲೋಲ-ಕಲ್ಲೋಲ, ಏರ್‌ಪೋರ್ಟ್ ಖಲಾಸ್!
ಇದ್ರ ಜೊತೆಗೆ ಪಾಕಿಸ್ತಾನದ ಲಾಹೋರ್, ರಾವಲ್ಪಿಂಡಿಯ ಕ್ರಿಕೆಟ್ ಸ್ಟೇಡಿಯಂ(Rawalpindi Cricket Stadium) ಮೇಲೆ ಭಾರತ ಡ್ರೋನ್‌ಗಳ ಮಳೆ ಸುರಿಸಿದೆ.. ಸದ್ಯ PSL ಆಡುತ್ತಿದ್ದ ಆಟಗಾರರಿಗೆ ಮೈದಾನ ತೊರೆಯುವಂತೆ ಪಾಕಿಸ್ತಾನ ಸೂಚಿಸಿದೆ. ಒಟ್ಟು ಪಾಕಿಸ್ತಾನದ 25 ಸ್ಥಳಗಳ ಮೇಲೆ ಭಾರತದ 17 ಡ್ರೋನ್‌ಗಳು ದಾಳಿ ಮಾಡಿ ಇಡೀ ಪಾಕಿಸ್ತಾನದ ರಕ್ಷಣಾ ವ್ಯವಸ್ಥೆ (Pakistan’s Failed Retaliation)ಯನ್ನೇ ಧ್ವಂಸ ಮಾಡಿದೆ..

