Site icon BosstvKannada

Pakistan to give Rs 14cr compensation to terrorist Masood Azhar : ಪಾಕಿಸ್ತಾನದ ನೀಚ ಬುದ್ಧಿ, ಉಗ್ರರಿಗೆ ಕೋಟಿ ಕೋಟಿ..!

Pakistan

ನಾಯಿ ಬಾಲ ಡೊಂಕು ಎನ್ನುವಂತೆ ಪಾಕಿಸ್ತಾನಕ್ಕೆ ಕೆಟ್ರೂ ಬುದ್ಧಿ ಬಂದಿಲ್ಲ. ಭಾರತವನ್ನು ಕೆಣಕಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡ್ರೂ ಬುದ್ಧಿ ಕಲಿಯದ ಪಾಪಿ Pakistan ಉಗ್ರರ ಪರವಾಗಿ ಇದೆ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ಇಲ್ಲಿದೆ.. ಪದೇ ಪದೇ ಉಗ್ರರ ಪರವಾಗಿ ಬ್ಯಾಟ್‌ ಬೀಸುವ ಪಾಕ್‌ ಅವರನ್ನ ಪೋಷಿಸುತ್ತಿದೇ ಅನ್ನೋದು ಮತ್ತೆ ಪ್ರೂವ್‌ ಆಗಿದೆ. ಭಾರತ ಆಪರೇಷನ್ ಸಿಂಧೂರ ನಡೆಸಿ 100ಕ್ಕೂ ಹೆಚ್ಚು ಉಗ್ರರನ್ನು ಹೊಡೆದುಹಾಕಿದೆ..

ಆದ್ರೆ ಇದ್ರಿಂದ ಪಾಕಿಸ್ತಾನಕ್ಕೆ ಯಾವುದೇ ನಷ್ಟ ಆಗಿರಲಿಲ್ಲ.. ಆದ್ರೂ ಕೂಡ ಆ ಪಾಪಿ ದೇಶ ಮತ್ತೊಮ್ಮೆ ತನ್ನ ದುಷ್ಟತನವನ್ನ ತೋರಿಸಿದೆ. ಭಾರತದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ ಉಗ್ರರ ಕುಟುಂಬಗಳಿಗೆ Pakistan ತಲಾ 1 ಕೋಟಿ ರೂ. ಪರಿಹಾರ ಘೋಷಣೆ ಮಾಡಿದೆ. ಅದ್ರಲ್ಲೂ ಮೋಸ್ಟ್‌ ವಾಂಟೆಂಡ್‌ ಉಗ್ರ ಮಸೂದ್ ಅಜರ್‌ ಕುಟುಂಬ ಒಂದಕ್ಕೆ 14 ಕೋಟಿ ರೂ. ಪರಿಹಾರ ದೊರಕಿದೆ. ಇದರ ಮೂಲಕ ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್ ಮತ್ತೊಮ್ಮೆ ತಮ್ಮ ಉಗ್ರ ಪ್ರೇಮವನ್ನು ಮೆರೆದಿದ್ದಾರೆ. ಪಾಕಿಸ್ತಾನದ ಉಗ್ರಪ್ರೇಮಕ್ಕೆ ಜಗತ್ತಿನೆಲ್ಲೆಡೆ ಆಕ್ರೋಶ, ಟೀಕೆಗಳು ವ್ಯಕ್ತವಾಗ್ತಿವೆ.

JEM ಹೆಡ್ ಕ್ವಾರ್ಟಸ್‌ ಮೇಲೆ ಭಾರತ ಏರ್‌ಸ್ಟ್ರೈಕ್ ನಡೆಸಿದ್ದರಿಂದ 14 ಮಂದಿ ಸಾವನ್ನಪ್ಪಿದ್ದರು. ಮೋಸ್ಟ್ ವಾಂಟೆಡ್‌ ಉಗ್ರ ಮೌಲಾನಾ ಮಸೂದ್ ಅಜರ್ ಕುಟುಂಬದ 14 ಮಂದಿ ಪ್ರಾಣ ಬಿಟ್ಟಿದ್ದಾರೆ. ಹೀಗಾಗಿ ಮೌಲಾನಾ ಮಸೂದ್ ಅಜರ್‌ಗೆ ಈಗ Pakistan ಸರ್ಕಾರ 14 ಕೋಟಿ ರೂಪಾಯಿ ಪರಿಹಾರ ನೀಡುತ್ತಿದೆ.

Also Read: CM Siddaramaiah Held Disha Meeting : ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಮತ್ತೆ ಮಲತಾಯಿ ಧೋರಣೆ : ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ

ಭವಾಲ್‌ಪುರದ ಜಾಮೀಯಾ ಮಸೀದಿ ಸುಭಾನಾ ಅಲ್ಲಾ ಮೇಲೆ ಭಾರತ ಏರ್ ಸ್ಟ್ರೈಕ್ ಮಾಡಿದ್ದು, ಮಸೀದಿ ಛಿದ್ರ, ಛಿದ್ರವಾಗಿದೆ. ಹೀಗೆ ನಾಶವಾದ ಉಗ್ರರ ನೆಲೆಗಳು, ಮನೆಗಳನ್ನು ಮರು ನಿರ್ಮಾಣ ಮಾಡುವ ಭರವಸೆಯನ್ನು ಪಾಕಿಸ್ತಾನ ಸರ್ಕಾರ ನೀಡಿದೆ ಎನ್ನಲಾಗಿದೆ. ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿರುವ ಭಾರತೀಯ ಸೇನೆ ಈಗ ಉಗ್ರರ ನೆಲೆಗಳನ್ನು ಮತ್ತೆ ಪಾಕಿಸ್ತಾನವೇ ಮರು ನಿರ್ಮಾಣ ಮಾಡುತ್ತಾ ಅನ್ನೋದರ ಬಗ್ಗೆಯೂ ನಿಗಾ ವಹಿಸಿದೆ.

Exit mobile version