Site icon BosstvKannada

Pakistan Prime Minister Shehbaz Sharif : ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್‌ಗೆ ಪುಕಪುಕ!

Pakistan Prime Minister Shehbaz Sharif

ಪಹಲ್ಗಾಮ್‌ ಉಗ್ರರ ದಾಳಿ(pahalgam terror attack)ಗೆ ಭಾರತದ ಪ್ರತೀಕಾರ ಮುಂದುವರೆದಿದ್ದು, ಪಾಕ್‌ ತತ್ತರಿಸಿ ಹೋಗಿದೆ. ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್ (Pakistan Prime Minister Shehbaz Sharif )ನಿವಾಸದ ಸಮೀಪದಲ್ಲೇ ಸ್ಫೋಟ ಸಂಭವಿಸಿದ್ದು, ಪ್ರಾಣ ಭಯದಲ್ಲಿ ಅವರು ಬಂಕರ್‌ ಸೇರಿಕೊಂಡಿದ್ದಾರೆ ಎಂಬ ಶಾಕಿಂಗ್‌ ನ್ಯೂಸ್‌ ಕೇಳಿಬಂದಿದೆ. ಭಾರತ ಮತ್ತು ಪಾಕ್‌ ನಡುವೆ ಯುದ್ಧ ಇನ್ನೂ ಸರಿಯಾಗಿ ಶುರುವಾಗಿಲ್ಲ.. ಇದರ ನಡುವೆ ಇಸ್ಲಾಮಾಬಾದ್‌ನಲ್ಲಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ನಿವಾಸದ ಬಳಿ ಭಾರಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.

ಸುಮಾರು 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಅನಿರೀಕ್ಷಿತ ಘಟನೆ ನಡೆದಿದೆ. ಷರೀಫ್ ಅವರನ್ನು ಅವರ ವೈಯಕ್ತಿಕ ಸಿಬ್ಬಂದಿ ತಕ್ಷಣವೇ ಸುರಕ್ಷಿತ ಬಂಕರ್‌ಗೆ ಕರೆದೊಯ್ದರು ಎಂದು ತಿಳಿದು ಬಂದಿದೆ. ಶೀಘ್ರದಲ್ಲೇ ಇದನ್ನು ಅಧಿಕೃತವಾಗಿ ದೃಢಪಡಿಸಲಿವೆ. ಮತ್ತೊಂದೆಡೆ, ಭಾರತೀಯ ಸೇನೆಯು ಬೆಳಗಿನ ಜಾವಕ್ಕೂ ಮುನ್ನ ಪಾಕಿಸ್ತಾನವನ್ನು ಹತ್ತಿಕ್ಕಲು ಸಿದ್ಧವಾಗಿದೆ ಎಂದು ಭಾರತೀಯ ರಕ್ಷಣಾ ಮೂಲಗಳು ಬಹಿರಂಗಪಡಿಸಿವೆ.

ಇನ್ನು ಭಾರತದ ತಿರುಗೇಟಿಗೆ ಪಾಕಿಸ್ತಾನದಲ್ಲಿ ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತದ ಭಯಾನಕ ದಾಳಿಗೆ ಪಾಕಿಸ್ತಾನದ ಹಲವು ನಗರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕರಾಚಿಯಲ್ಲಿ ಐಎನ್‌ಎಸ್‌ ವಿಕ್ರಾಂತ್ ಆರ್ಭಟಕ್ಕೆ ಅಲ್ಲೋಲ, ಕಲ್ಲೋಲವೇ ಸೃಷ್ಟಿಯಾಗಿದೆ.

Also Read: Operation Sindoor 2.0 : ಭಾರತೀಯ ಸೇನಾ ದಾಳಿಗೆ ತತ್ತರಿಸಿದ ʼಪಾಕ್‌ʼ

ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ಪಾಕ್‌ನ ಬಹುತೇಕ ನಗರಗಳು ತತ್ತರಿಸಿ ಹೋಗಿವೆ.ಇದರಿಂದ ದೇಶದ ಹಲವು ನಗರಗಳು ಕತ್ತಲಲ್ಲಿ ಸಿಲುಕಿವೆ. ಕೆಲವು ನಗರಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ.ರಸ್ತೆಗಳಿಗೆ ಬಾರದಂತೆ ಪಾಕ್‌ ನಾಗರಿಕರಿಗೆ ಅಲ್ಲಿನ ಸ್ಥಳೀಯ ಆಡಳಿತ ಸೂಚನೆ ನೀಡಿದೆ ಎನ್ನಲಾಗಿದೆ.

Exit mobile version