ಕಾಂಟ್ರವರ್ಸಿಯಿಂದಲೇ ಹೆಚ್ಚು ಪ್ರಚಾರ ಪಡೆದುಕೊಂಡಿದ್ದ ತಮಿಳು ನಟ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ. ಜೂನ್ 5ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಹೀನಾಯ ಸೋಲು ಕಂಡಿತ್ತು. ಪ್ರಚಾರದ ಸಂದರ್ಭದಲ್ಲಿ ಕಮಲ್ ಹಾಸನ್, ಕನ್ನಡ ಭಾಷೆಯ ಬಗ್ಗೆ ಆಡಿದ ಮಾತಿಗೆ ವಿರೋಧ ವ್ಯಕ್ತಪಡಿಸಿ ಕರ್ನಾಟಕದಲ್ಲಿ ಸಿನಿಮಾವನ್ನು ಕೂಡ ನಿಷೇಧಿಸಲಾಗಿತ್ತು.
ಅದರ ಬೆನ್ನಲ್ಲೆ ‘ಥಗ್ ಲೈಫ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಕಂಡಿದ್ದು. ಇದೀಗ ಸದ್ದಿಲ್ಲದೆ ಓಟಿಟಿಗೆ ಬಂದಿದೆ.
ಈ ವರ್ಷ ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಹೀನಾಯವಾಗಿ ಸೋತ ಸ್ಟಾರ್ ಸಿನಿಮಾ ಎಂಬ ಕುಖ್ಯಾತಿಗೆ ‘ಥಗ್ ಲೈಫ್’ ಪಾತ್ರವಾಗಿದ್ದು. ಸದ್ದಿಲ್ಲದೆ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗ್ತಿದೆ. ‘ಥಗ್ ಲೈಫ್’ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗುವ ಮೊದಲೇ ಒಟಿಟಿಗೆ ಮಾರಾಟವಾಗಿತ್ತು. ನೆಟ್ಫ್ಲಿಕ್ಸ್, ಬರೋಬ್ಬರಿ 110 ಕೋಟಿ ಹಣ ಕೊಟ್ಟು ‘ಥಗ್ ಲೈಫ್’ ಸಿನಿಮಾ ಖರೀದಿ ಮಾಡಿತ್ತು. ಆದರೆ
‘ಥಗ್ ಲೈಫ್’ ಬಾಕ್ಸ್ ಆಫೀಸ್ನಲ್ಲಿ ಯಾವಾಗ ಮುಗ್ಗರಿಸಿತ್ತೊ. ಒಟಿಟಿ ಒಪ್ಪಂದವನ್ನ ಬ್ರೇಕ್ ಮಾಡಿದೆ ಎನ್ನಲಾಗಿದೆ..
ಮೂಲ ಒಪ್ಪಂದದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆಯಾದ ಎಂಟು ವಾರಗಳ ಬಳಿಕವಷ್ಟೆ ಸಿನಿಮಾ ಒಟಿಟಿಗೆ ಬರಬೇಕಿತ್ತು. ಆದರೆ ಚಿತ್ರಮಂದಿರದಲ್ಲಿ ಹೀನಾಯ ಸೋಲು ಕಂಡ ಕಾರಣ, ಸಿನಿಮಾವನ್ನು ಬೇಗನೆ ಒಟಿಟಿಗೆ ಬಿಡುಗಡೆ ಮಾಡಲು ನೆಟ್ಫ್ಲಿಕ್ಸ್ ನಿರ್ಮಾಪಕರ ಮೇಲೆ ಒತ್ತಡ ಹೇರಿತ್ತು. ಇಲ್ಲವಾದರೆ ಒಪ್ಪಂದದ ಪ್ರಕಾರ 110 ಕೋಟಿ ಹಣದ ಬದಲಾಗಿ ಕಡಿಮೆ ಹಣ ನೀಡುವುದಾಗಿ ಹೇಳಿತ್ತು.
ಇದೀಗ ಒಟಿಟಿಯ ಒತ್ತಡಕ್ಕೆ ಮಣಿದಿರುವ ‘ಥಗ್ ಲೈಫ್’ ನಿರ್ಮಾಪಕರು, ಎಂಟು ವಾರಕ್ಕೂ ಮುಂಚೆಯೇ ‘ಥಗ್ ಲೈಫ್’ ಸಿನಿಮಾವನ್ನು ಒಟಿಟಿಯಲ್ಲಿ ರಿಲೀಸ್ ಮಾಡಿದ್ದಾರೆ. ‘ಥಗ್ ಲೈಫ್’ ಸಿನಿಮಾವನ್ನು ಎಂಟು ವಾರಕ್ಕೆ ಮುಂಚಿತವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡಿದರೆ, ನಷ್ಟ ತುಂಬಿಕೊಡಬೇಕು ಎಂದು ಮತ್ತೊಂದ್ಕಡೆ ಮಲ್ಟಿಪ್ಲೆಕ್ಸ್ಗಳು ನಿರ್ಮಾಪಕರಿಗೆ ನೊಟೀಸ್ ಕಳಿಸಿದ್ದು. ಅದನ್ನು ಕೂಡ ನಿರ್ಲಕ್ಷಿಸಿ ಇದೀಗ ಅವಧಿಗೆ ಮುಂಚಿತವಾಗಿ ಒಟಿಟಿಗೆ ಬಿಡುಗಡೆ ಮಾಡಿದೆ.
ಅವಧಿಗೆ ಮುಂಚಿತವಾಗಿ ಒಟಿಟಿಗೆ ಬಿಡುಗಡೆ ಮಾಡಿರುವುದರಿಂದ ಥಗ್ ಲೈಫ್ ಮತ್ತೆ ಕಾನೂನು ಸಂಕಷ್ಟ ಎದುರಿಸುವ ಸಾಧ್ಯತೆ ಇದೆ. ಮಣಿರತ್ನಂ ನಿರ್ದೇಶನ ಮಾಡಿದ್ದ ಥಗ್ ಲೈಫ್ ಚಿತ್ರವನ್ನು ಕಮಲ್ ಹಾಸನ್ ನಿರ್ಮಾಣ ಮಾಡಿದ್ದರು ಮತ್ತು ಹೀರೋ ಆಗಿ ಕಾಣಿಸಿಕೊಂಡಿದ್ದರು. 250-300 ಕೋಟಿ ರೂ. ಬಜೆಟ್‌ನ ಈ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ. ಕೂಡ ಗಳಿಕೆ ಮಾಡಿಲ್ಲ ಎನ್ನಲಾಗಿದೆ.

