Site icon BosstvKannada

Operation Sindoor : ವಿದೇಶಾಂಗ ಸಚಿವರಿಗೆ ಸರಿಸಾಟಿ ಯಾರಿಲ್ಲ..!

ವಿಶ್ವದಲ್ಲೇ ಆಪರೇಷನ್‌ ಸಿಂದೂರ್‌ ಭರ್ಜರಿ ಸೌಂಡು ಮಾಡ್ತಿದೆ. ಪಾಕಿಸ್ತಾನದ ಕುತಂತ್ರಗಳಿಗೆ ಭಾರತ ನೀಡುತ್ತಿರುವ ತಕ್ಕ ಉತ್ತರಕ್ಕೆ ಹಲವಾರು ದೇಶಗಳು ಬೆಂಬಲ ನೀಡ್ತಿವೆ. ಭಾರತದ ಬೆನ್ನಿಗೆ ನಿಂತಿವೆ. ಉಗ್ರರ ವಿರುದ್ಧ ಹೋರಾಡಲು, ಅವರನ್ನ ಪೋಷಿಸುತ್ತಿರುವ ಪಾಕಿಸ್ತಾನವನ್ನು ಮಣ್ಣುಮುಕ್ಕಿಸಲು ಸದಾ ಭಾರತದೊಟ್ಟಿಗೆ ಇರ್ತೀವಿ ಅಂತ ವಿದೇಶಗಳು ಹೇಳ್‌ಬೇಕಂದ್ರೆ ಭಾರತ ಅವುಗಳ ಜೊತೆ ಇಟ್ಟಿರುವ ನಂಬಿಕೆ, ವಿಶ್ವಾಸವೇ ಕಾರಣ.

ದಶಕದ ಹಿಂದೆ ಭಾರತ ಶಕ್ತಿ ನೋಡಿ ಟೀಕಿಸುತ್ತಿದ್ದ ದೇಶಗಳೆಲ್ಲಾ ಈಗ ಸಲಾಮ್‌ ಹೊಡಿತಿವೆ. ಇದಕ್ಕೆ ಮುಖ್ಯ ಕಾರಣನೇ ಮೋದಿಯ ಬಲಗೈ ಬಂಟ. ವಿದೇಶಾಂಗ ಸಚಿವ ಜೈಶಂಕರ್‌. ಅಮೆರಿಕಾ, ರಷ್ಯಾ, ಫ್ರಾನ್ಸ್‌, ಉಕ್ರೇನ್‌ ಹೀಗೆ ಎಲ್ಲಾ ದೇಶಗಳೊಟ್ಟಿಗೂ ಉತ್ತಮ ಸಂವಹನ ನಡೆಸಿ, ಭಾರತದ ವ್ಯವಹಾರಿಕ ಸಂಬಂಧವನ್ನ ಮತ್ತಷ್ಟು ಗಟ್ಟಿ ಮಾಡಿದ್ದೇ ಇದೇ ಜೈಶಂಕರ್‌.

ಪಾಕಿಸ್ತಾನದೊಟ್ಟಿಗೆ ಉದ್ವಿಗ್ನತೆ ಶುರುವಾದಾಗ್ಲಿಂದ ಹಿಡಿದು ಆಪರೇಷನ್‌ ಸಿಂದೂರ್‌ ತನಕ ಜೈಶಂಕರ್‌ನ ಕಾರ್ಯವೈಖರಿ ಅವಿಸ್ಮರಣೀಯ. ಪಾಕಿಸ್ತಾನ ಪದೇ ಪದೇ ಕೀಟಲೆ ಮಾಡಿದಾಗಲೂ ವಾಕ್ಸಮರ ನಡೆಸಿ ಪಾಕಿಸ್ತಾನವನ್ನ ಬೆಂಡೆತ್ತಿದ್ದ ಜೈಶಂಕರ್‌ ಉಗ್ರರ ವಿರುದ್ಧ ಸಮರ ಸಾರುವ ಮುನ್ನ ರಷ್ಯಾ, ಇಸ್ರೇಲ್‌ನಂತಹ ರಾಷ್ಟ್ರಗಳ ಬೆಂಬಲ ಪಡೆದಿದ್ದು ಸುಳ್ಳಲ್ಲ.

Also Read: Operation Sindoor 2.0 : ಭಾರತೀಯ ಸೈನಿಕರ ಆರ್ಭಟಕ್ಕೆ ಕರಾಚಿ ನಗರ ಧ್ವಂಸ!

ಹಲವು ರಾಷ್ಟ್ರಗಳ ಬೆಂಬಲವನ್ನ ಖಚಿತಪಡಿಸಿಕೊಂಡ ಬಳಿಕವೇ ಭಾರತ ಆಪರೇಷನ್‌ ಸಿಂದೂರ್‌ ನಡೆಸಿದ್ದು. ಇದ್ರಲ್ಲಿ ಜೈಶಂಕರ್‌ನ ಪಾತ್ರ ಬಹಳ ಮಹತ್ವವಾದದ್ದು. ಸುಮಾರು ಹತ್ತು ದೇಶಗಳ ಬಳಿ ಜೈ ಶಂಕರ್‌ ಮಾತುಕತೆ ನಡೆಸಿದ್ದಾರೆ. ಪಾಕ್‌ಗೆ ತಕ್ಕ ಉತ್ತರ ಕೊಟ್ಟೇ ಕೊಡ್ತೀವಿ ಅಂತ ಹೇಳಿದ್ದ ಜೈಶಂಕರ್‌ ನುಡಿದಂತೆ ನಡೆದಿದ್ದಾರೆ. ಈಗಲೂ ಸಹಾ ಅಮೆರಿಕಾ , ರಷ್ಯಾದಂತಹ ದೇಶಗಳ ಜೊತೆ ಜೈಶಂಕರ್‌ ನಿರಂತರ ಸಂವಹನ ನಡೆಸುತ್ತಲೇ ಇದ್ದಾರೆ.

Exit mobile version