ಗಡಿಯಲ್ಲಿ ಬರೀ ಕೆಣಕೋದು. ಕಾಲು ಕೆದರಿ ಜಗಳ ತೆಗೆಯೋದು. ಸಹಿಸೋವರೆಗೂ ಸಹಿಸಿದ ಭಾರತ ಈಗ ತಕ್ಕ ಶಾಸ್ತಿಯನ್ನೇ ಮಾಡುತ್ತಿದೆ.. ಕೆಣಕಿದ ಪಾಕಿಸ್ತಾನದೊಳಕ್ಕೆ ನುಗ್ಗಿ ಹೊಡೆಯುತ್ತಿದೆ. ಅದೂ ಬರೀ ಇಂಡಿಯನ್ ಆರ್ಮಿ ಮಾತ್ರವಲ್ಲ.. ವಾಯು ಸೇನೆ ಜೊತೆಗೆ ನೌಕಾಪಡೆಯೂ ಅಖಾಡಕ್ಕೆ ಧುಮುಕಿದ್ದು, ಪಾಕಿಸ್ತಾನ ಪತರಗುಟ್ಟಿ ಹೋಗಿದೆ.
ಪಾಕಿಸ್ತಾನದೊಳಗೆ ನುಗ್ಗಿ ಭಾರತೀಯ ಸೇನೆ ಭಯಾನಕ ದಾಳಿ ಮಾಡುತ್ತಿವೆ. ವಾಯುಸೇನೆ, ನೌಕಾಪಡೆ ಜಂಟಿಯಾಗಿ ಕಾರ್ಯಾಚರಣೆ ಮಾಡ್ತಿದ್ದು, ಬ್ಯಾಕ್ ಟು ಬ್ಯಾಕ್ ಹೊಡೆತ ಕೊಡ್ತಿವೆ. ಅದ್ರಲ್ಲೂ ಈಗ ನೌಕಾಪಡೆಯ ಶಸ್ತ್ರ ಸಜ್ಜಿತ ಐಎನ್‌ಎಸ್ ವಿಕ್ರಾಂತ್ ಹಡಗು ಅಖಾಡಕ್ಕೆ ನುಗ್ಗಿದೆ. ವಿಶ್ವದ 10ನೇ ಅತಿದೊಡ್ಡ ಹಡಗು ಎನ್ನಿಸಿಕೊಂಡಿರುವ ಐಎನ್‌ಎಸ್ ವಿಕ್ರಾಂತ, ಕರಾಚಿಯ ಬಂದರಿಗೆ ನುಗ್ಗಿ ಧ್ವಂಸಗೊಳಿಸಿದೆ. ಅಲ್ಲಿದ್ದ ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯನ್ನು ಹೊಡೆದುರುಳಿಸಿದೆ. ಇನ್ನೊಂದು ಅಚ್ಚರಿ ಅಂದ್ರೆ ಐಎನ್‌ಎಸ್ ವಿಕ್ರಾಂತ ಹಡಗು, ಕಳೆದ ವಾರವೇ ಯುದ್ಧಕ್ಕೆ ಸನ್ನದ್ಧವಾಗಿ ಹೊರಟಿತ್ತು. ಸಧ್ಯ ಭಾರತದ ನೌಕಾಪಡೆಯಲ್ಲಿ ಈವರೆಗೆ ಮೂರು ಯುದ್ಧನೌಕೆಗಳು ನಿಯೋಜನೆಯಾಗಿವೆ. ಐಎನ್‌ಎಸ್ ವಿಕ್ರಾಂತ್, ಐಎನ್‌ಎಸ್ ವಿರಾಟ್ ಮತ್ತು ಐಎನ್‌ಎಸ್ ವಿಕ್ರಮಾದಿತ್ಯ ಹೈ ಅಲರ್ಟ್ ಆಗಿದ್ದು. ಪಾಕಿಸ್ತಾನ ಸೇನೆ ವಿಲವಿಲ ಒದ್ದಾಡುತ್ತಿದೆ..
ಇನ್ನೊಂದು ಶಾಕಿಂಗ್ ವಿಚಾರ ಅಂದ್ರೆ 1971 ರ ಬಳಿಕ ಕರಾಚಿ ಮೇಲೆ ಭಾರತ ದಾಳಿ ಮಾಡಿದೆ. ಐಎನ್‌ಎಸ್ ವಿಕ್ರಾಂತ ಎಂಬ ಬಲಿಷ್ಠ ಹಡಗಿನ ಮೂಲಕ ಕರಾಚಿ ಬಂದರನ್ನು ಭಾರತೀಯ ನೌಕಾಪಡೆ ನಾಶಪಡಿಸಿದೆ. ಬಂದರಿನಲ್ಲಿ ಎಲ್ಲಿ ನೋಡಿದರು ಬೆಂಕಿಯೇ ಕಾಣುವಂತೆ ಆಗಿದೆ. ಐಎನ್‌ಎಸ್ ವಿಕ್ರಾಂತ್ ಮಾರಕ ದಾಳಿಗೆ ಪ್ರಸ್ತುತ ಕರಾಚಿ ಬಂದರು ಎಲ್ಲ ಸಂಪೂರ್ಣವಾಗಿ ನಾಶವಾಗಿದೆ ಎಂದು ಹೇಳಲಾಗುತ್ತಿದೆ..
ಇನ್ನು, ಐಎನ್‌ಎಸ್ ವಿಕ್ರಾಂತ್ ಭಾರತದ ಕಡಲ ಇತಿಹಾಸದಲ್ಲಿ ಇದುವರೆಗೆ ನಿರ್ಮಿಸಲಾದ ಅತಿದೊಡ್ಡ ಹಡಗು. ಇದು ವಿಶ್ವದ 10ನೇ ಅತಿದೊಡ್ಡ ಹಡಗು. ಇದು ಅತ್ಯಾಧುನಿಕ ಯಾಂತ್ರೀಕೃತಗೊಂಡ ವೈಶಿಷ್ಟ್ಯಗಳನ್ನು ಹೊಂದಿದೆ. ಸುಮಾರು 2,200 ಕಂಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ.
Also Read: Operation Sindoor 2.0 : ಭಾರತೀಯ ಸೈನಿಕರ ಆರ್ಭಟಕ್ಕೆ ಕರಾಚಿ ನಗರ ಧ್ವಂಸ!
ಮಹಿಳಾ ಅಧಿಕಾರಿಗಳು ಮತ್ತು ನಾವಿಕರು ಸೇರಿದಂತೆ ಸುಮಾರು 1,600 ಸಿಬ್ಬಂದಿಗೆ ವ್ಯವಸ್ಥೆ ಇದೆ. ಈ ನೌಕೆಯಲ್ಲಿ MiG-29K ಫೈಟರ್ ಜೆಟ್‌ಗಳು, Kamov-31 ಹೆಲಿಕಾಪ್ಟರ್‌ಗಳು, MH-60R ಬಹು-ಪಾತ್ರ ಹೆಲಿಕಾಪ್ಟರ್‌ಗಳು ಮತ್ತು ಸ್ಥಳೀಯವಾಗಿ ತಯಾರಿಸಿದ ಸುಧಾರಿತ ಲಘು ಹೆಲಿಕಾಪ್ಟರ್‌ಗಳು ಮತ್ತು ಲಘು ಯುದ್ಧ ವಿಮಾನ ಸೇರಿದಂತೆ ವೈವಿಧ್ಯಮಯ ವಾಯು ವಿಭಾಗ ನಿರ್ವಹಿಸಲು ಹಡಗಿನಲ್ಲಿ ವ್ಯವಸ್ಥೆ ಇದೆ.
ಹೀಗಾಗಿ, ಇದೇ ಕಾರಣಕ್ಕೆ ಐಎನ್‌ಎಸ್ ವಿಕ್ರಾಂತ ಹಡಗನ್ನು ಭಾರತದ ಅತಿದೊಡ್ಡ ಸ್ವದೇಶಿ ನಿರ್ಮಿತ ಹಡಗು ಅಂಥಾ ಹೇಳಲಾಗ್ತಿದೆ. ಇದೀಗ ಈ ಹಡಗಿನ ಮೂಲಕವೇ ಕರಾಚಿ ಬಂದರನ್ನ ಭಾರತದ ಸೇನಾಪಡೆ ಧ್ವಂಸಗೊಳಿಸಿ ಆಘಾತ ನೀಡಿದ್ದಂತೂ ಸುಳ್ಳಲ್ಲ.
