Site icon BosstvKannada

Operation Sindoor : ಉಗ್ರರ ಹುಡುಕಿ ಹೊಡೆದಿದ್ದೇಗೆ ಭಾರತೀಯ ಸೇನೆ?

ಉಗ್ರರನ್ನು ಹುಡುಕಿ ಹೊಡೆಯುತ್ತೇವೆ.. ಅಮಾಯಕರ ರಕ್ತ ಹರಿಸಿದ ಉಗ್ರ ಪಿಪಾಸುಗಳನ್ನು ಒಬ್ಬರನ್ನೂ ಬಿಡಲ್ಲ.. ಎಲ್ಲೇ ಅಡಗಿದ್ದರೂ ಹುಡುಕಿ ಹೊಡೆಯುತ್ತೇವೆ ಅಂತಾ ಪಹಲ್ಗಾಮ್‌ ದಾಳಿ( Pahalgam Attack) ನಡೆದ ಬೆನ್ನಲ್ಲೇ ಪ್ರಧಾನಿ ಮೋದಿ(PM Modi) ವಾಗ್ದಾನ ನೀಡಿದ್ದರು.. ಆದ್ರೀಗ ಆ ಮಾತಿನಂತೆ( Operation Sindoor )ಉಗ್ರರ ಸಂಹಾರ ಆಗಿದೆ.. ಅಮಾಯಕರ ರಕ್ತ ಹೀರಿದ ಉಗ್ರ ಕ್ರಿಮಿಗಳನ್ನು ಹುಡುಕಿ ಹುಡುಕಿ ಕೊಂದಿದೆ..

ಅಷ್ಟಕ್ಕೂ ಭಾರತೀಯ ಸೇನೆ (Indian Army) ನಡೆಸಿದ ದಾಳಿಯ ಸ್ಥಳಗಳು ಯಾವುವು? ಹೇಗಿತ್ತು ಆ ರೋಚಕ ಸಿಂಧೂರ ಆಪರೇಷನ್‌ ( Operation Sindoor) ಅನ್ನೋದಾದ್ರೆ , ಮಾರ್ಚ್‌ 22ರಂದು ಕಾಶ್ಮೀರದ (Kashmir)ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ಮಾಡಿ 26 ಜನರ ರಕ್ತ ಹರಿಸಿದ ಉಗ್ರರನ್ನು ಈಗ ಭಾರತೀಯ ಸೇನೆ ಹೊಡೆದುರುಳಿಸಿದೆ.. ರಾತ್ರೋರಾತ್ರಿ ಪಿಒಕೆಗೆ ನುಗ್ಗಿ ಭಯೋತ್ಪಾದಕರ ಹುಟ್ಟಡಗಿಸಿದೆ..

ಹೌದು.. ಇಂದು ಬೆಳಗಿನ ಜಾವ 1.44ರ ಸುಮಾರಿಗೆ ಭಾರತೀಯ ಸೇನೆ ಉಗ್ರರ ನೆಲೆಗಳಿಗೆ ನುಗ್ಗಿ ದಾಳಿ ಮಾಡಿದೆ.. ಭಾರತದ ದಾಳಿಗೆ 70ಕ್ಕೂ ಹೆಚ್ಚು ಉಗ್ರರು ಮಟ್ಯಾಶ್‌ ಆಗಿದ್ದು, ಅಮಾಯಕರ ಹತ್ಯೆಗೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ.. ಹಾಗಾದ್ರೆ, ಭಾರತೀಯ ಸೇನೆ ಟಾರ್ಗೆಟ್‌ ಮಾಡಿದ 9 ಸ್ಥಳಗಳು ಯಾವುವು? ಅಲ್ಲಿ ಯಾವ್ಯಾವ ಸಂಘಟನೆಗಳ ಉಗ್ರರು ನೆಲೆಸಿದ್ದರು ಅದರ ಮಾಹಿತಿ ಈ ಕೆಳಗೆ ವಿವರಿಸಲಾಗಿದೆ.

Also Read : ಆಪರೇಷನ್‌ ಸಿಂಧೂರದಲ್ಲಿ ಮಸೂದ್ ಅಜರ್ ಸಾವು?

ಒಟ್ಟು 9 ಸ್ಥಳಗಳ ಟಾರ್ಗೆಟ್..‌ ಉಗ್ರ ನೆಲೆಗಳ ಮೇಲೆ ದಾಳಿ!
ದಾಳಿ -1 : ಮರ್ಕಜ್‌ ಸುಬಾನಲ್ಲಾ, ಬಹವಾಲ್‌ಪುರ (ಜೈಷ್‌ ಎ ಮೊಹಮ್ಮದ್‌ ಸಂಘಟನೆ ನೆಲೆಗಳು, ಇಲ್ಲಿ ಉಗ್ರರಿಗೆ ತರಬೇತಿ ಶಿಬಿರಗಳು ನಡೆಯುತ್ತಿದ್ವು)
ದಾಳಿ -2 : ಮರ್ಕಜ್‌ ತೈಬಾ, ಮುರ್ದಿಕೆ (ಲಷ್ಕರ್‌ ಇ ತೊಯ್ಬಾ ಸಂಘಟನೆ ನೆಲೆಗಳು, 200 ಎಕರೆಯ ಕಾಂಪೌಂಡ್‌ ನಿರ್ಮಿಸಿದ್ದ ಉಗ್ರರು, ಉಗ್ರರ ದಾಳಿಯ ಪ್ಲ್ಯಾನ್‌ಗಳು ಇಲ್ಲೇ ರೂಪುಗೊಳ್ಳುತ್ತಿದ್ವು )
ದಾಳಿ -3 : ಸೈದ್ನಾ ಬಿಲಾಲ್ ಕ್ಯಾಂಪ್ಸ್ ಮುಜಫ್ಫರ್‌ಬಾದ್‌ (JeM & LeT ಉಗ್ರರ ನೆಲೆಗಳು ಧ್ವಂಸ, ಒಳನುಸುಳುವಿಕೆ ತರಬೇತಿ, ಟ್ರೇನಿಂಗ್‌ ಸೌಕರ್ಯಗಳು ಇಲ್ಲಿದ್ವು)
ದಾಳಿ -4‌ : ಶವೈ ನಲ್ಲಾ ಕ್ಯಾಂಪ್ಸ್‌, ಮುಜಫ್ಫರ್‌ಬಾದ್‌, JeM & LeT ಉಗ್ರರ ನೆಲೆಗಳು ಧ್ವಂಸ, ಒಳನುಸುಳುವಿಕೆ ತರಬೇತಿ, ಟ್ರೇನಿಂಗ್‌ ಸೌಕರ್ಯಗಳು ಇಲ್ಲಿದ್ವು )
ದಾಳಿ -5‌ :ಮರ್ಕಜ್‌ ಅಹ್ಲೆ ಹಾದಿಥ್, ಬರ್ನಾಲಾ (LeT ಭಯೋತ್ಪಾಕರು ಇಲ್ಲಿ ನೆಲೆಸಿದ್ರು , ಬೆಂಬಲ & ಪ್ರಾದೇಶಿಕ ಲಾಜಿಸ್ಟಿಕ್ಸ್ ಕೇಂದ್ರವಾಗಿ ಕೆಲಸ)
ದಾಳಿ -6 : ತೆಹ್ರಾ ಕಟ್ಟಡ, ಸರ್ಜಾಲ್‌ (JeM ಸಂಘಟನೆ ಭಯೋತ್ಪಾದಕರ ಅಡಗುತಾಣ ಹೊಸದಾಗಿ ಸೇರಿದ ಉಗ್ರರಿಗೆ ಪ್ರಾಥಮಿಕ ತರಬೇತಿ)
ದಾಳಿ -7 : ಮೆಹ್‌ಮೂನಾ ಜೋಯಾ, ಸಿಯಾಲ್‌ಕೋಟ್ (ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆ ಅಡಗುತಾಣ ಭಯೋತ್ಪಾದಕರಿಗೆ ಟ್ರೇನಿಂಗ್‌ ನೀಡಲಾಗ್ತಿತ್ತು)
ದಾಳಿ -8 : ಮರ್ಕಜ್‌ ಅಬ್ಬಾಸ್‌, ಕೊಟ್ಲಿ ( JeM ಸಂಘಟನೆ ಭಯೋತ್ಪಾದಕರ ವಾಸಸ್ಥಾನ, ಸೂಸೈಡ್‌ ಬಾಂಬರ್‌ಗಳಿಗೆ ತರಬೇತಿ ನೀಡಲಾಗ್ತಿತ್ತು, ಪಿಒಕೆಯಲ್ಲಿರುವ ಉಗ್ರರಿಗೆ ಶಸ್ತ್ರಾಸ್ತ್ರಗಳ ಸಾಗಾಟ)
ದಾಳಿ -9 : ಮಸ್ಕರ್‌ ರಹೀಲ್‌ ನಿವಾಸ ಸಾಹೀಬ್‌ ನಿವಾಸ, ಕೋಟ್ಲಿ (ಹಿಜ್ಬುಲ್ಲಾ ಮುಜಾಹಿದ್ದೀನ್‌ ಸಂಘಟನೆಯ ಅಡಗುತಾಣ)

9 ಕಡೆಗಳಲ್ಲಿ ದಾಳಿ ಮಾಡಿರುವ ಭಾರತೀಯ ಸೇನೆ 70ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿದೆ.. ಭಾರತದ ವೈಮಾನಿಕ ದಾಳಿಗೆ ಉಗ್ರರು ಮಲಗಿದ್ದಲ್ಲೇ ಸುಟ್ಟು ಭಸ್ಮವಾಗಿದ್ದಾರೆ.. ಇದು ಭಾರತದ 26 ಅಮಾಯಕರ ಹತ್ಯೆಗೆ ಪ್ರತೀಕಾರ.. ಹೆಣ್ಮಕ್ಕಳ ಸಿಂಧೂರ ಕಿತ್ಕೊಂಡ ಪ್ರತೀಕಾರದ ಹೆಸರಲ್ಲೇ ಅಂದರೆ ಆಪರೇಷನ್‌ ಸಿಂಧೂರ ಹೆಸರಲ್ಲಿ ಉಗ್ರರ ಉಸಿರು ನಿಲ್ಲಿಸಿದ್ದು, ಭಾರತೀಯ ಸೇನೆಯ ಕಾರ್ಯಕ್ಕೆ ಭಾರತೀಯರು ಸಲಾಮ್‌ ಹೇಳ್ತಿದ್ದಾರೆ.

Exit mobile version