ಕರ್ನಾಟಕ ಪರಿಶಿಷ್ಟ ಜಾತಿ ಅಲೆಮಾರಿ ಅಭಿವೃದ್ಧಿ ವೇದಿಕೆಯು ಶಿವಾನಂದ ವೃತ್ತದ ಬಳಿಯಿರುವ ಗಾಂಧಿ ಭವನದಲ್ಲಿ ಅಲೆಮಾರಿ ಮುಖಂಡರ ಸಭೆ ನಡೀತು. ಈ ಸಭೆಯಲ್ಲಿ ಚರ್ಚೆ ನಡೆಸೋದರ ಬದಲಾಗಿ ಕೈ-ಕೈ ಮಿಲಾಯಿಸೋ ಹಂತಕ್ಕೆ ಗಲಾಟೆ ನಡೆದಿದೆ. ಸಭೆಯಲ್ಲಿ ಬಿಜೆಪಿ ವಕ್ತಾರ ಲೋಹಿತ್ ಬಿ.ಆರ್‌ನಿಗೆ ಅವಕಾಶ ನೀಡಿದ್ದ ಎಚ್ ಆಂಜನೇಯ ವಿರುದ್ದ ಪರಿಶಿಷ್ಟ ಜಾತಿ ಮುಖಂಡರು ಘೋಷಣೆ ಕೂಗಿದ್ದಾರೆ. ಇದರಿಂದ ಪರಿಶಿಷ್ಟ ಜಾತಿ ಅಲೆಮಾರಿ ಮುಖಂಡರು ಕೆರಳಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ಮಾಡಿದ್ದಾರೆ.

ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಎಚ್ ಆಂಜನೇಯ, ಯಾರು ಬಿಜೆಪಿಯವರು ಗಲಾಟೆ ಮಾಡಿದಲ್ಲ ಎಂದರು. ಅಲೆಮಾರಿ ಜನರು ಗುಡಿಸಲಿನಲ್ಲಿ ವಾಸಿಸುತ್ತಾರೆ. ಅವರೂ SCಗಳೇ. ಹೀಗಾಗಿ ವಿಶೇಷವಾಗಿ ಇವರನ್ನು ಪರಿಗಣಿಸಬೇಕು. ಈ ಬಗ್ಗೆ ಸರ್ಕಾರದ ಗಮನಕ್ಕೂ ತರುತ್ತೆವೆ. ಕೊರಚ, ಕೊರಮ ಸಮುದಾಯವನ್ನು ಬಿಟ್ಟಿದ್ದಾರೆ ಎಂದು ಸಭೆಯಲ್ಲಿ ಆಕ್ಷೇಪ ಎತ್ತಿದ್ರು. 49 ಜಾತಿ ಅಲ್ಲ. ಎರಡು ಸಮುದಾಯವನ್ನು ಬಿಟ್ಟಿದ್ದಾರೆ ಎಂದು ಅವರ ವಾದ. ಹೀಗಾಗಿ ಕೊರಚ ಕೊರಮರನ್ನು ಸೇರಿಸಿ ಅಂತ ಒತ್ತಾಯ ಮಾಡಿದ್ರು. ಅವರು ಅಲೆಮಾರಿಗಳ ಸಭೆ ಕರೆಯೋದಾಗಿ ಹೇಳಿದ್ರು. ನಾನು ಸಭೆಗೆ ಬರೋದಾಗಿ ಹೇಳಿದ್ದೆನೆ. ಎಲ್ಲರನ್ನು ಕೂರಿಸಿ ಮಾತಾಡೋಣ ಅಂದಿದ್ದೇನೆ ಎಂದು ಹೇಳಿದರು.

ಎಸ್ಸಿ ಸಮೀಕ್ಷೆಯಲ್ಲಿ ಗೊಂದಲ ವಿಚಾರ
ಮೇ 5 ರಿಂದ ಸಮೀಕ್ಷೆ ನಡೆಯುತ್ತಿದೆ. ಹೊರಗಡೆ ಸಮೀಕ್ಷೆ ಸರಿಯಾಗಿ ಆಗಿದೆ. ಬೆಂಗಳೂರಿನಲ್ಲಿ ಸರ್ಕಾರಿ ಶಿಕ್ಷಕರು ಕಡಿಮೆ. ಇಲ್ಲಿ ಸ್ವಲ್ಪ ಗೊಂದಲ ಆಗಿದೆ. ದೊಡ್ಡ ದೊಡ್ಡ ಮಹಲುಗಳು ಇದೆ. ಬೆಂಗಳೂರಿನಲ್ಲಿ 100% ಸಮೀಕ್ಷೆ ಸಾಧ್ಯವಿಲ್ಲ. ಹಿಂದೆಯೂ ಕಾಂತರಾಜು ಸಮೀಕ್ಷೆ ಆಗಿದ್ದು 90 % ಅಷ್ಟೇ. ಇಡೀ ಭಾರತದಲ್ಲಿ ಮೊದಲ ಬಾರಿಗೆ ಮೊಬೈಲ್ ಬಳಸಿ ಸಮೀಕ್ಷೆ ಆಗಿದೆ. ಒಂದು ಸಮೀಕ್ಷೆಗೆ ಸಮಯವೂ ಸಾಕಷ್ಟು ತೆಗೆದುಕೊಳ್ಳುತ್ತದೆ. ಸಮೀಕ್ಷೆ ಆಗಲಿ, ಬಿಡುಗಡೆ ಆಗಲಿ ಏನು ಅಂತ ಗೊತ್ತಾಗುತ್ತದೆ ಎಂದು ಹೇಳಿದರು.

Share.
Leave A Reply