Site icon BosstvKannada

ಮೈಸೂರು ಅರಮನೆ ಮುಂಭಾಗ ನೈಟ್ರೋಜನ್ ಗ್ಯಾಸ್ ಬ್ಲಾಸ್ಟ್: ಮೂವರ ಸ್ಥಿತಿ ಗಂಭೀರ, ಓರ್ವ ಬಲಿ

ಮೈಸೂರು: ನಗರದಲ್ಲಿನ ಅರಮನೆ (Mysuru Palace) ಮುಂಭಾಗ ನೈಟ್ರೋಜನ್ ಗ್ಯಾಸ್ ಬ್ಲಾಸ್ಟ್ (Nitrogen Gas Blast) ಆದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಅರಮನೆಯ ಜಯ ಮಾರ್ತಾಂಡ ಗೇಟ್ ಹತ್ತಿರ ಈ ಘಟನೆ ನಡೆದಿದೆ. ಬಲೂನ್‌ಗೆ ಗ್ಯಾಸ್ ತುಂಬುವ ವೇಳೆ ಬ್ಲಾಸ್ಟ್ ಆಗಿದೆ. ಬ್ಲಾಸ್ಟ್ ತೀವ್ರತೆಗೆ ವ್ಯಕ್ತಿಯ ದೇಹ ಛಿದ್ರ ಛಿದ್ರಗೊಂಡಿದೆ. ಅಲ್ಲದೇ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Exit mobile version