ಬಿಹಾರ ವಿಧಾನಸಭೆ ಚುನಾವಣೆ ಹೊಸ ಕ್ರಾಂತಿ ಕಹಳೆ ಮೊಳಗಿಸಿದೆ. ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಆರ್ಭಟಕ್ಕೆ ಮಹಾಘಟಬಂಧನ್ ಪಡೆ ಮಕಾಡೆ ಮಲಗಿದೆ. ಮೊದಲ ಬಾರಿಗೆ ಸಿಎಂ ಆಗುವ ನಿರೀಕ್ಷೆಯಲ್ಲಿದ್ದ ಲಾಲೂ ಪುತ್ರ ತೇಜಸ್ವಿ ಯಾದವ್‌ಗೆ ಸೋಲಿನ ಆಘಾತ ನೀಡಿರುವ ನಿತೀಶ್‌ಕುಮಾರ್, ಮತ್ತೊಮ್ಮೆ ಬಿಹಾರದ ಗದ್ದುಗೆ ಏರಲು ರೆಡಿಯಾಗಿ ನಿಂತಿದ್ದಾರೆ. ಈಗಾಗ್ಲೇ 20 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿರುವ ನಿತೀಶ್, ಮತ್ತೆ ಮುಂದಿನ 5 ವರ್ಷ ರಾಜ್ಯಭಾರ ನಡೆಸಲು ಸಜ್ಜಾಗಿದ್ದಾರೆ. ಆದ್ರೆ, ನಿತೀಶ್‌ಕುಮಾರ್ ಸಾಗಿ ಬಂದ ಸಿಎಂ ಹುದ್ದೆಯ ಪಯಣವೇ ರೋಚಕವಾದುದು. ಅದನ್ನು ಡಿಟೇಲ್ ಆಗಿ ಹೇಳ್ತೀವಿ. ಅದಕ್ಕೂ ಮೊದಲು ಬಾಸ್ ಟಿವಿ ಕನ್ನಡ ಚಾನೆಲ್‌ನನ್ನ ಸಬ್‌ಸ್ಕ್ರೈಬ್ ಮಾಡಿ.

ಬಿಹಾರದಲ್ಲಿ ಜೆಡಿಯು, ಬಿಜೆಪಿ ನೇತೃತ್ವದ ಮೈತ್ರಿಕೂಟ ಹಿಂದೆಂದೂ ಕಾಣದ ಭರ್ಜರಿ ಗೆಲುವು ಕಂಡಿದೆ. 243 ಸದಸ್ಯರ ಸಂಖ್ಯಾ ಬಲ ಹೊಂದಿರುವ ಬಿಹಾರ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 122 ಸದಸ್ಯರ ಅಗತ್ಯವಿದೆ. ಇದೀಗ ಸ್ಪಷ್ಟ ಬಹುಮತವನ್ನೂ ದಾಟಿ ಹಿಂದೆಂದಿಗಿಂತಲೂ ಹೆಚ್ಚಿನ ಸೀಟು ಗೆದ್ದ ಎನ್‌ಡಿಎ ಅಧಿಕಾರದ ಗೂಟ ನೆಟ್ಟಿದೆ. ಕಳೆದ ಎಲೆಕ್ಷನ್‌ನಲ್ಲಿ 75 ಸೀಟು ಗೆದ್ದಿದ್ದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿ ಪಕ್ಷ ಈ ಬಾರಿ ನಿರೀಕ್ಷೆ ತಲುಪುವಲ್ಲಿ ಎಡವಿದ್ದು, ತೇಜಸ್ವಿ ಯಾದವ್ ಸಿಎಂ ಆಗುವ ಕನಸು ಭಗ್ನಗೊಂಡಿದೆ. ಅದೇ ರೀತಿ ಕಳೆದ ಎಲೆಕ್ಷನ್‌ನಲ್ಲಿ 43 ಸೀಟು ಗೆದ್ದಿದ್ದ ಸಿಎಂ ನಿತೀಶ್‌ಕುಮಾರ್ ಸಾರಥ್ಯದ ಜೆಡಿಯು ಈ ಬಾರಿ ನಿರೀಕ್ಷೆಗೂ ಮೀರಿ ಹೆಚ್ಚಿನ ಸೀಟು ಗೆದ್ದು ಬೀಗಿದೆ. ಈ ಮೂಲಕ 10ನೇ ಬಾರಿಗೆ ಮುಖ್ಯಮಂತ್ರಿ ಪಟ್ಟಕ್ಕೇರಲು ನಿತೀಶ್‌ಕುಮಾರ್ ರೆಡಿಯಾಗಿದ್ದಾರೆ. ಆದರೆ, ನಿತೀಶ್‌ಕುಮಾರ್ 20 ವರ್ಷದ ಸಿಎಂ ಆಡಳಿತ ಒಂದು ಅದ್ಭುತ ಪಯಣ.. ಅದನ್ನು ಡಿಟೇಲ್ ಆಗಿ ಹೇಳ್ತೀವಿ ನೋಡಿ..
ನಿತೀಶ್‌ಕುಮಾರ್ ಮೊಟ್ಟ ಮೊದಲ ಬಾರಿಗೆ ಸಿಎಂ ಆಗಿದ್ದು 2000ನೇ ಇಸ್ವಿಯಲ್ಲಿ. ಸಮತಾ ಪಕ್ಷದಿಂದ ಮಾರ್ಚ್ 3, 2000ದಂದು ಸಿಎಂ ಆಗಿದ್ದ ನಿತೀಶ್‌ಕುಮಾರ್, ಕೇವಲ 7 ದಿನಗಳ ಕಾಲ ಆಡಳಿತ ನಡೆಸಿ ಮಾರ್ಚ್ 10ರಂದು ಪದತ್ಯಾಗ ಮಾಡಿದ್ದರು. ಇದಾದ ಬಳಿಕ ಜೆಡಿಯು ಪಕ್ಷದಿಂದ 2005ರಿಂದ ಸಿಎಂ ಆಗಿದ್ದ ನಿತೀಶ್‌ಕುಮಾರ್ ಸುದೀರ್ಘವಾದ ಆಡಳಿತ ನಡೆಸಿದ್ದರು. ನವೆಂಬರ್ 24, 2005ರಂದು ಎರಡನೇ ಬಾರಿಗೆ ಸಿಎಂ ಆಗಿದ್ದ ನಿತೀಶ್‌ಕುಮಾರ್ 8 ವರ್ಷ, 177 ದಿನಗಳ ಕಾಲದ ಅಧಿಕಾರ ನಡೆಸಿ ಹೊಸ ಸಂಚಲನ ಸೃಷ್ಟಿಸಿದ್ದರು. ಇದಾದ ನಂತರ 2015ರಿಂದ ಇಲ್ಲಿವರೆಗೂ ನಿತೀಶ್‌ಕುಮಾರ್ ಅವರೇ ಮುಖ್ಯಮಂತ್ರಿ ಆಗಿದ್ದಾರೆ. 2015ರಲ್ಲಿ ಮಹಾಘಟಬಂಧನ್ ಸೇರುವ ಮೂಲಕ ಪಕ್ಷ ಬದಲಾಯಿಸಿ ಮತ್ತೆ ಸಿಎಂ ಆದರು. ಆದರೆ ಈ ಮೈತ್ರಿ ಹೆಚ್ಚು ಕಾಲ ಉಳಿಯಲಿಲ್ಲ. ಮತ್ತೆ ಎನ್‌ಡಿಎಗೆ ಮರಳಿ ಸಿಎಂ ಆದರು. 2020ರಲ್ಲಿ ಮತ್ತೆ ಚುನಾವಣೆಯಲ್ಲಿ ಗೆದ್ದಿದ್ದ ನಿತೀಶ್ ಸಿಎಂ ಆಗಿದ್ದರು.
ಇದೀಗ ಭರ್ಜರಿ ಗೆಲುವಿನೊಂದಿಗೆ ಸಿಎಂ ಆಗಲಿರುವ ನಿತೀಶ್‌ಕುಮಾರ್ ಹೊಸ ಇತಿಹಾಸ ರಚಿಸಲಿದ್ದಾರೆ. 20 ವರ್ಷ ಆಡಳಿತ ನಡೆಸಿರುವ ನಿತೀಶ್, 10ನೇ ಬಾರಿಗೆ ಬಿಹಾರದ ಸಿಎಂ ಆಗಿ ಪದಗ್ರಹಣ ಮಾಡಲು ಸಜ್ಜಾಗಿದ್ದಾರೆ. ಆದ್ರೆ, ಪ್ರತಿ ಬಾರಿಯೂ ನಿತೀಶ್ ಮುಖ್ಯಮಂತ್ರಿ ಆದಾಗ ಶಾಸಕರಾಗಿಲ್ಲ ಅನ್ನೋದು ಗಮನಾರ್ಹ ಸಂಗತಿ.
ನಿತೀಶ್‌ರ ರಾಜಕೀಯ ಪಯಣದ ಇಂಟರೆಸ್ಟಿಂಗ್ ಸಂಗತಿ ಎಂದು ಅದು ವಿಧಾನಸಭೆಗೆ ಆಯ್ಕೆಯಾಗದೇ ಇರೋದು. ಹೌದು. ವಿಧಾನ ಪರಿಷತ್ತಿಗೆ ಆಯ್ಕೆಯಾಗಿ, ಮುಖ್ಯಮಂತ್ರಿಯಾಗಿ ನಿತೀಶ್ ದರ್ಬಾರ್ ನಡೆಸುತ್ತಿದ್ದಾರೆ. 30 ವರ್ಷದಿಂದ ಅಂದರೆ, 1995ರಿಂದ ಅವರು ನೇರವಾಗಿ ವಿಧಾನಸಭೆಗೆ ಆಯ್ಕೆಯಾಗಿಲ್ಲ ಎನ್ನುವುದು ವಿಶೇಷ. 5 ಬಾರಿ ಲೋಕಸಭಾ ಸದಸ್ಯರಾಗಿದ್ದ ನಿತೀಶ್, 2004ರ ಲೋಕಸಭಾ ಚುನಾವಣೆ ಗೆದ್ದರೂ, ಬಿಹಾರದ ರಾಜಕಾರಣಕ್ಕಾಗಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮತ್ತೆ ವಿಧಾನಪರಿಷತ್ ಸದಸ್ಯತ್ವವನ್ನೇ ಆಯ್ಕೆ ಮಾಡಿಕೊಂಡ, ನಿತೀಶ್ 21 ವರ್ಷದಿಂದ ಪರಿಷತ್ ಸದಸ್ಯರಾಗಿಯೇ ಮುಂದುವರಿದಿದ್ದಾರೆ. 2004ರಲ್ಲಿ ನಳಂದಾದಲ್ಲಿ ಗೆದ್ದರೂ, ಭಾರ್ಹ್ ಲೋಕಸಭಾ ಕ್ಷೇತ್ರದಲ್ಲಿ ಸೋತ ಹಿನ್ನೆಲೆಯಲ್ಲಿ, ಚುನಾವಣಾ ಕಣದಲ್ಲಿ ಮುಂದೆ ಸ್ಪರ್ಧಿಸಬಾರದು ಅನ್ನೋ ನಿರ್ಧಾರಕ್ಕೆ ಬಂದರು. ಹೀಗಾಗಿ, ಪ್ರತಿಬಾರಿ ಸಿಎಂ ಆದಾಗಲೂ ನಿತೀಶ್, ಎಂಎಲ್‌ಸಿಯಾಗಿಯೇ ಉಳಿಯುತ್ತಿದ್ದಾರೆ. ಅದೇ ರೀತಿ ಈ ಬಾರಿಯೂ ಎಲೆಕ್ಷನ್‌ನಲ್ಲಿ ಸ್ಪರ್ಧಿಸದ ನಿತೀಶ್, ಪರಿಷತ್ ಸದಸ್ಯರಾಗಿಯೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.