ಅಂತಾರಷ್ಟ್ರೀಯ ಮಾರಕ ದಾಂಡಿಗ, ಅನೇಕ ಬೌಲರ್‌ಗಳ ಬೆವರಿಳಿಸಿದ್ದ ಕೆರಿಬಿಯನ್ ಕಿಂಗ್ ನಿಕೋಲಸ್ ಪೂರನ್ (Nicholas Pooran)ಅಂತಾರಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೊಷಿಸಿದ್ದಾರೆ. 2016 ರಿಂದ 2024ರವರೆಗೆ ವೆಸ್ಟ್ ಇಂಡೀಸ್ ಪರ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿ ಮಿಂಚಿದ್ದ 29 ವರ್ಷದ ಪೂರನ್ ನಿವೃತ್ತಿ ಅಭಿಮಾನಗಳಿಗೆ ಬೇಸರ ತಂದಿದೆ.
ಕೇವಲ ಅಂತಾರಷ್ಟ್ರೀಯ ಅಷ್ಟೇ ಅಲ್ಲದೆ IPL ನಲ್ಲೂ ಭಾರಿ ಪ್ರದರ್ಶನ ನೀಡಿ ಭಾರತೀಯ ಅಭಿಮಾನಿಗಳನ್ನು ಸಹ ಹೊಂದಿದ್ದರು. ವೆಸ್ಟ್ ಇಂಡೀಸ್ ಪರ 61 ಏಕದಿನ ಪಂದ್ಯ ಆಡಿದ್ದು 1,983 ರನ್ ಬಾರಿಸಿದ್ದರು ಹಾಗೂ 106 ಟಿ20 ಪಂದ್ಯವನ್ನಾಡಿದ್ದ ಪೂರನ್ 97 ಇನ್ನಿಂಗ್ಸ್‌ನಲ್ಲಿ 136.39 ಸ್ಟೈಕ್ ರೇಟ್ ನೊಂದಿಗೆ 2,275 ಬಾರಿಸಿದ್ದರು.
ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವಾಗ ಪೂರನ್ ನಿವೃತ್ತಿ ವೆಸ್ಟ್ ಇಂಡೀಸ್‌ಗೆ ಆಘಾತ ಉಂಟುಮಾಡಿದೆ. ಸಾಕಷ್ಟು ಚಿಂತನೆ ಮತ್ತು ಆತ್ಮಾವಲೋಕನದ ನಂತರ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ.
Read Also : ರಾಜ್ಯದಲ್ಲಿ ಜೂ.13ರಿಂದ ಭಾರಿ ಮಳೆ, ಈ ಜಿಲ್ಲೆಗಳಲ್ಲಿ ಹೈ ಅಲರ್ಟ್!
ವೆಸ್ಟ್ ಇಂಡೀಸ್ ತಂಡದ ನಾಯಕತ್ವ ವಹಿಸುವುದು ನನ್ನ ಸೌಭಾಗ್ಯವಾಗಿತ್ತು. ಆ ನೆನಪು ಯಾವತ್ತೂ ನನ್ನ ಹೃದಯಕ್ಕೆ ಶಾಶ್ವತವಾಗಿರುತ್ತದೆ ಎಂಬ ಭಾವುಕ ನುಡಿಯನ್ನ ಪೂರನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

