Site icon BosstvKannada

ಹನಿಮೂನ್ ಗೆಂದು ಶ್ರೀಲಂಕಾಕ್ಕೆ ಹೋಗಿ ಅರ್ಧಕ್ಕೆ ವಾಪಾಸಾಗಿ ನವವಧು ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಹನಿಮೂನ್ ಗೆಂದು ಶ್ರೀಲಂಕಾಕ್ಕೆ ಹೋದವರು ಅರ್ಧಕ್ಕೆ ವಾಪಾಸಾಗಿ, ನವವಧು ಆತ್ಮಹತ್ಯೆ ಯತ್ನಿಸಿರುವ ಘಟನೆ ನಡೆದಿದೆ.

ಪ್ಯಾಲೆಸ್‌ ಗ್ರೌಂಡ್‌ ನಲ್ಲಿ (Palace Ground) ರಿಸೆಪ್ಷನ್ ಮಾಡಿಕೊಂಡು ಶ್ರೀಲಂಕಾಕ್ಕೆ (Srilanka) ಹನಿಮೂನ್ ಹೋಗಿದ್ದರು. ಆದರೆ, ಹನಿಮೂನ್ ನಿಂದ ಅರ್ಧಕ್ಕೆ ಮರಳಿ ಬಂದಿದ್ದಾರೆ. ಈಗ ಮದುವೆಯಾದ ಎರಡೇ ತಿಂಗಳಿಗೆ ನನವಧು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ (Bengaluru) ರಾಮಮೂರ್ತಿ ನಗರದಲ್ಲಿ (Ramamurthy Nagar) ಈ ಘಟನೆ ನಡೆದಿದೆ. 26 ವರ್ಷದ ವಧು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಈ ದಂಪತಿ ಕಳೆದ ಹತ್ತು ದಿನಗಳ ಹಿಂದೆ ಶ್ರೀಲಂಕಾಗೆ ಹನಿಮೂನ್‌ಗೆಂದು ಹೋಗಿದ್ದರು. ಪತಿ ಮನೆಯಲ್ಲೇ ವಧು ಆತ್ಮಹತ್ಯೆಗೆ ಯತ್ನಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಧುವಿನ ಕುಟುಂಬಸ್ಥರು ವರನ ಕುಟುಂಬಸ್ಥರ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಿರುಕುಳದ ಪ್ರಕರಣ ದಾಖಲಾಗಿದೆ.

Exit mobile version