ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಸಂಘರ್ಷ ಮುಗಿಯದ ಕಥೆಯಾಗಿದೆ. ಅವರಿಬ್ಬರು ಎಷ್ಟೇ ಅಲ್ಲಗಳೆದ್ರೂ ಅವರ ಬಹಿರಂಗ ಹೇಳಿಕೆಗಳು ಮತ್ತಷ್ಟು ವಿವಾದಗಳನ್ನು ಸೃಷ್ಟಿಮಾಡ್ತಿವೆ.. ಈಗಾಗಲೇ ನಾನೇ ಸಿಎಂ ಅಂದಿರುವ ಸಿದ್ದು ಹೇಳಿಕೆ ರಾಜ್ಯದಲ್ಲಿ ದೊಡ್ಡ ಕೋಲಾಹಲಕ್ಕೆ ಎಡೆ ಮಾಡಿಕೊಟ್ಟಿದೆ.. ಅದ್ರ ಬೆನ್ನಲ್ಲೇ ಸಿದ್ರಾಮಯ್ಯ ಮೈಸೂರಿನಲ್ಲಿ ಕೊಟ್ಟ ಹೇಳಿಕೆ ಡಿಕೆಶಿಯನ್ನು ಮತ್ತಷ್ಟು ಕೆರಳಿಸಿದೆ.. ತೆರೆಮರೆಯಲ್ಲೇ ಶಸ್ತ್ರಾಭ್ಯಾಸ ನಡೆಸಿದ್ದಾರೆ.. ಸೈಲೆಂಟ್ ಆಗಿದ್ದುಕೊಂಡೇ ಸಿದ್ದು ವಿರುದ್ಧ ಸಮರ ಸಾರಿದ್ದಾರೆ ಅನ್ನೋ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಹೊಸ ಜ್ವಾಲೆಗೆ ಜನ್ಮ ಕೊಟ್ಟಿದೆ..
ಕಾಂಗ್ರೆಸ್‌ನಲ್ಲಿನ ಬಣ ಸಂಘರ್ಷದಲ್ಲಿ ಸಿದ್ದು ಬಣದ್ದೇ ಮೇಲುಗೈ ಆದಂತೆ ಕಾಣಿಸ್ತಿದೆ.. ಯಾವುದೇ ಬಹಿರಂಗ ಹೇಳಿಕೆಗಳನ್ನ ನೀಡದೆ ಹೈಕಮಾಂಡ್‌ಗೆ ಹೆದರುತ್ತಿದ್ದ ಎರಡೂ ಬಣದವರೂ ಇದೀಗ ನೇರಾನೇರಾ ವಾಕ್ಸಮರಕ್ಕೆ ಇಳಿದಂತೆ ಭಾಸವಾಗ್ತಿದೆ.. ಸಿದ್ದು 5 ವರ್ಷ ನಾನೇ ಸಿಎಂ ಅಂತ ಹೇಳಿದಾಗ ಡಿಕೆಶಿಗೆ ಬಿಸಿ ತುಪ್ಪ ನುಂಗಿದಂತಾಗಿತ್ತು.. ಸಿದ್ದು ಹೇಳಿಕೆಗೆ ತಿರುಗುಬಾಣ ಕೊಡಲಾಗದೇ.. ಸುಮ್ಮನಿರಲಾಗದೇ ಪರದಾಡಿದ್ರು. ಇದೀಗ ಮತ್ತೆ ಮೈಸೂರಿಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಡಿಕೆಶಿಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ.. ಮೇಲ್ನೋಟಕ್ಕೆ ವಾಸ್ತವನ್ನು ಮಾತನಾಡಿದ್ರೂ ಒಳ ಅರ್ಥದಲ್ಲಿ ಸಿದ್ದು ತಮ್ಮ ವೈಮನಸ್ಸನ್ನು ಎತ್ತಿ ತೋರಿಸಿದ್ದಾರೆ ಅನ್ನೋ ಮಾಹಿತಿ ಭಾರೀ ವಿವಾದ ಸೃಷ್ಟಿಸಿದೆ..
ಮನೆಗೆ ಹೋದವ್ರ ಹೆಸರು ಯಾಕೆ ಹೇಳಲಿ..?
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಎಲ್ಲರ ಹೆಸರಗಳನ್ನು ಪ್ರಸ್ತಾಪಿಸುವಾಗ ಡಿಕೆಶಿ ಹೆಸರನ್ನು ಬಿಟಿದ್ರು.. ಅಲ್ಲಿದ್ದವರು ಅದನ್ನ ನೆನಪಿಸಿದಾಗ ಮನೆಗೆ ಹೋದ್ರವ ಬಗ್ಗೆ ನಾನ್ಯಾಕೆ ಮಾತನಾಡಲಿ ಅಂತ ಸಿಎಂ ನೀಡಿರುವ ಹೇಳಿಕೆ ಬಂಡೆಗೆ ಮತ್ತೆ ಬಿಸಿ ಮುಟ್ಟಿಸಿದೆ.. ಹೀಗಾಗಿ ಡಿಕೆಶಿ ದೆಹಲಿಯಲ್ಲಿ ತಮ್ಮ ಬ್ಯಾಟ್ ಬೀಸಿದ್ದಾರೆ.. ಸಿದ್ದು ವಿರುದ್ಧ ತಮ್ಮ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ.. ಇದಕ್ಕೂ ಮೊದಲು ಸಿದ್ದು ಕೂಡ ವರಿಷ್ಠರ ಮುಂದೆ ತಮ್ಮ ಪ್ರತಾಪದ ಬಗ್ಗೆ ಮನವರಿಕೆ ಮಾಡಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ..
5 ವರ್ಷ ನಾನೇ ಸಿಎಂ, ಟಗರು ಝೇಂಕಾರ..!
ಇನ್ನೂ ಸಿದ್ದರಾಮಯ್ಯ ವರಿಷ್ಠರ ಮುಂದೆ ನಾನೇ 5 ವರ್ಷ ಸಿಎಂ ಆಗಿ ಮುಂದುವರಿಯಬೇಕು ಅಂತ ಬೇಡಿಕೆ ಇಟ್ಟಿರೋದು ತಿಳಿದೇ ಇದೆ.. ಪಕ್ಷದಲ್ಲಿ ನನಗೆ ಹೆಚ್ಚು ಶಾಸಕರ ಬೆಂಬಲವಿರೋ ಕಾರಣ ನನ್ನ ನಾಯಕತ್ವ ಮುಖ್ಯ.. ಜೊತೆಗೆ ಡಿಕೆಶಿಗೆ ಹೆಚ್ಚು ಶಾಸಕರ ಬೆಂಬಲವಿಲ್ಲದ ಕಾರಣ ನನ್ನ ಬದಲು ಅವರನ್ನು ಸಿಎಂ ಮಾಡೋಕಾಗಲ್ಲ.. ಹೀಗಾಗಿ ನನ್ನ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಬೇಕು ಅಂತ ಒತ್ತಡ ಹೇರಿದ್ದಾರೆ ಎನ್ನಲಾಗಿದೆ..
ಬಂಡೆ ಮಾಸ್ಟರ್‌ಸ್ಟ್ರೋಕ್..!
ಇತ್ತ ಡಿಕೆಶಿ ಸಿದ್ದು ವಿರುದ್ಧ ತಿರುಗಿಬಿದ್ದಿದ್ದು, ಸಿದ್ದು ಬಿಟ್ರೆ ನಾನೇ ಪವರ್‌ಫುಲ್ ಅನ್ನೋ ಸಂದೇಶವನ್ನು ವರಿಷ್ಠ ಮುಂದಿಟ್ಟಿದ್ದಾರೆ ಎನ್ನಲಾಗಿದೆ.. ಅಲ್ಲದೇ ತನ್ನ ಅಧ್ಯಕ್ಷತೆಯಲ್ಲಿ ಹಿಂದಿನ ಚುನಾವಣೆ ಗೆದ್ದಿದೆ.. ಸಿದ್ದರಾಮಯ್ಯರಂತೆ ನನಗೂ ಹೆಚ್ಚು ಶಾಸಕರ ಬೆಂಬಲವಿದೆ.. ಪಕ್ಷಕ್ಕಿಂತ ಸಿದ್ದರಾಮಯ್ಯ ದೊಡ್ಡವರು ಅಂತ ಪೂಜಿಸೋದು ಒಳ್ಳೆಯದಲ್ಲ ಅಂತ ಟಾಂಗ್ ಕೊಟ್ಟಿದ್ದಾರಂತೆ.. ಇದರ ಜೊತೆಗೆ ಮೈಸೂರಿನಲ್ಲಿ ತಮಗಾದ ಅವಮಾನವನ್ನೂ ಉಲ್ಲೇಖಿಸಿದ್ದಾರೆ ಅಂತ ಹೇಳಲಾಗ್ತಿದೆ..
ಒಟ್ನಲ್ಲಿ ಸಿದ್ದು-ಡಿಕೆಶಿ ನಡುವಿನ ಸಂಘರ್ಷ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇವರಿಬ್ಬರು ಮತ್ತೆ ದೆಹಲಿಗೆ ಹಾರುತ್ತಿದ್ದಾರೆ.. ವರಿಷ್ಠರ ಮುಂದೆ ಅತ್ಯಂತ ಮಹತ್ವದ ಮೀಟಿಂಗ್ ನಡೆಲಿದ್ದಾರೆ ಎನ್ನಲಾಗಿದೆ.. ಈ ಸಭೆ ಕಾಂಗ್ರೆಸ್ ಪಕ್ಷದ ದಿಕ್ಕನ್ನೇ ಬದಲಾಯಿಸಲಿದೆ ಅನ್ನೋ ಚರ್ಚೆಗಳು ಶುರುವಾಗ್ತಿವೆ.. ಎಲ್ಲರೂ ಕಾತುರದಿಂದ ಕಾಯ್ತಿದ್ದ ಕಾಂಗ್ರೆಸ್ ಕ್ರಾಂತಿ ಈ ಸಭೆಯಿಂದಲೇ ಶುರುವಾಗಲಿದೆ ಅನ್ನೋ ಸ್ಫೋಟಕ ಮಾಹಿತಿಯೊಂದು ಹರಿದಾಡ್ತಿದೆ.. ಹೀಗಾಗಿ ಕಾಂಗ್ರೆಸ್‌ನ ಅಸಲಿ ಸಂಚಲನ ಹೇಗಿರಲಿದೆ ಅನ್ನೋದನ್ನು ಕಾದು ನೋಡಬೇಕಿದೆ..

