ಟಾಲಿವುಡ್‌ನ ಖ್ಯಾತ ನಟಿ ಸಮಂತಾ ಸದಾ ಸುದ್ದಿಯಲ್ಲಿರ್ತಾರೆ.. ಮಾಜಿ ಪತಿ ನಾಗ ಚೈತನ್ಯ ಜೊತೆಗಿನ ವೈವಾಹಿಕ ಜೀವನ ಮುರಿದುಬಿದ್ದ ಬಳಿಕ ಏಕಾಂಗಿಯಾಗಿರುವ ಸ್ಯಾಮ್‌ ಇಂಡಿಪೆಂಡೆಂಟ್‌ ಆಗಿ ತಮ್ಮ ಲೈಫ್‌ ಲೀಡ್‌ ಮಾಡ್ತಾ ಎಂಜಾಯ್‌ ಮಾಡ್ತಿದ್ದಾರೆ.. ಆರೋಗ್ಯದಲ್ಲೂ ಸಿಕ್ಕಾಪಟ್ಟೆ ಏರುಪೇರಾಗಿತ್ತು.. ಅದನ್ನೂ ಮೆಟ್ಟಿ ನಿಂತ ಸಮಂತಾ ಸ್ಪೂರ್ತಿದಾಯಕ ಜೀವನ ನಡೆಸ್ತಿದ್ದಾರೆ.. ಆದ್ರೆ ಅವರ ಮದುವೆ ಯಾವಾಗ ಅನ್ನೋ ಸುದ್ದಿ ಮಾತ್ರ ಬಿಟೌನ್‌ನಲ್ಲಿ ಭಾರೀ ಸದ್ದು ಮಾಡಿತ್ತು.. ಇದೀಗ ಅದೆಲ್ಲಕ್ಕೂ ತೆರೆ ಬಿದ್ದಿದೆ.

ಈಗಾಗಲೇ ಬಾಲಿವುಡ್‌ ನಿರ್ದೇಶಕನ ಜೊತೆ ಸಮಂತಾ ಡೇಟ್‌ ಮಾಡ್ತಿದ್ದಾರೆ ಅನ್ನೋ ಸುದ್ದಿ ಭಾರೀ ಸೆನ್ಶೇಷನ್‌ ಕ್ರಿಯೇಟ್‌ ಮಾಡಿದೆ.. ನಿರ್ದೇಶಕ ರಾಜ್ ನಿಧಿಮೋರು ಜೊತೆ ಅಲ್ಲಲ್ಲಿ ಸುತ್ತಾಡಿರೋ ಫೋಟೋಗಳು ಕೂಡ ತುಂಬಾ ವೈರಲ್‌ ಆಗಿವೆ.. ಸಮಂತಾ ಎಲ್ಲೇ ಹೋದ್ರು ರಾಜ್‌ ಅವರ ಹಿಂದೆನೇ ಫಾಲೋ ಮಾಡ್ತಾರೆ ಅಂತಲೂ ಬಿ-ಟೌನ್‌ನಲ್ಲಿ ಮಾತಾಡ್ಕೊಳ್ತಿದ್ದಾರೆ.. ಸಮಂತಾ ಹಾಗೂ ರಾಜ್‌ ಜೊತೆಯಲ್ಲಿ ಕಾಣಿಸಿಕೊಂಡಿರೋ ಫೋಟೋಗಳೇ ಇದಕ್ಕೆ ಸಾಕ್ಷಿ..

ಇದೀಗ ಅವರಿಬ್ಬರ ಮದುವೆ ಸುದ್ದಿ ಮತ್ತಷ್ಟು ಕುತೂಹಲ ಸೃಷ್ಟಿ ಮಾಡಿದೆ.. ಅಷ್ಟೇ ಅಲ್ಲದೇ ಮದುವೆ ದಿನಾಂಕವೂ ನಿಗದಿಯಾಗಿದ್ದು, ತನ್ನ ಮಾಜಿ ಪತಿ ನಾಗ ಚೈತನ್ಯಗೆ ಸಮಂತಾ ಕೌಂಟರ್‌ ಕೊಡಲಿದ್ದಾರೆ ಅನ್ನೋ ರೂಮರ್ಸ್‌ ಹರಿದಾಡ್ತಿದೆ..

ಆಗಸ್ಟ್‌ ತಿಂಗಳಲ್ಲೇ ಇವರ ಮದುವೆಯಾಗಲಿದೆ ಅನ್ನೋ ಸುದ್ದಿ ಇದ್ರೂ ಸಮಂತಾ ಮಾತ್ರ ಅಕ್ಟೋಬರ್‌ನಲ್ಲೇ ಮದುವೆಯಾಗಬೇಕು ಅಂತ ಹಠ ಹಿಡಿದಿದ್ದಾರೆ ಎನ್ನಲಾಗಿದೆ.. ಅದೂ ಕೂಡ ಅಕ್ಟೋಬರ್‌ 6ರಂದೇ ಮದುವೆಯಾಗಬೇಕು ಅಂತ ಹೇಳ್ತಿದ್ದಾರಂತೆ.. ಯಾಕಂದ್ರೆ ಅಕ್ಟೋಬರ್‌ 6ರಂದೇ ಅವರು ತನ್ನ ಮಾಜಿ ಪತಿ ನಾಗ ಚೈತನ್ಯ ಜೊತೆ ಮದುವೆಯಾಗಿದ್ರು. ಆದ್ರೆ ಕಾರಣಾಂತರಗಳಿಂದ ಇವರ ಮದುವೆ ಮುರಿದುಬಿದ್ದಿತ್ತು.. ಇದೀಗ ವಿಚ್ಛೇದನ ಪಡೆದ ನಾಲ್ಕು ವರ್ಷಗಳ ಬಳಿಕ ಮತ್ತೆ ದಾಂಪತ್ಯಕ್ಕೆ ಕಾಲಿಡಲು ಸಮಂತಾ ಸಜ್ಜಾಗಿದ್ದಾರೆ.. ಅದೇ ಮದುವೆ ದಿನಾಂಕವನ್ನ ಆರಿಸಿಕೊಂಡು ನಾಗ ಚೈತನ್ಯಗೆ ಶಾಕ್‌ ಕೊಡಲು ನಿರ್ಧರಿಸಿದ್ದಾರಂತೆ.. ಸರಳವಾಗಿ ಚರ್ಚ್‌ನಲ್ಲಿ ಈ ಇಬ್ಬರು ಮದುವೆಯಾಗ್ತಿದ್ದಾರಂತೆ.. ಸದ್ಯ ಈ ಸುದ್ದಿ ಭಾರೀ ಸೆನ್ಶೇಷನ್‌ ಕ್ರಿಯೇಟ್‌ ಮಾಡಿದೆ..

Share.
Leave A Reply