ಸೌಥ್ ಆಫ್ರಿಕಾ ಟೆಸ್ಟ್ ತಂಡದ ನಾಯಕ ವಿಯಾನ್ ಮುಲ್ಡರ್ ವಿಶ್ವದಾಖಲೆ ನಿರ್ಮಿಸೋದನ್ನು ಕೈಯಾರೆ ಮಿಸ್ ಮಾಡಿಕೊಂಡಿದ್ದಾರೆ. ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಜಿಂಬಾಬ್ವೆ ಮತ್ತು ಸೌತ್ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ವಿಯಾನ್ ಮುಲ್ಡರ್ ಭರ್ಜರಿ ಆಟವಾಡಿ ತಂಡದ ಮೆಲುಗೈಗೆ ಕಾರಣವಾದರು.

ಜಿಂಬಾಬ್ವೆ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಮುಲ್ಡರ್‌ರ 367ರನ್‌ಗಳ ಸಹಾಯದಿಂದ 5 ವಿಕೆಟ್ ನಷ್ಟಕ್ಕೆ 626 ರನ್ ಕಲೆಹಾಕುವಲ್ಲಿ ಶಕ್ತವಾಯಿತು. ಈ ಗುರಿಯನ್ನ ಬೆನ್ನತ್ತಿದ್ದ ಜಿಂಬಾಬ್ವೆ 170 ರನ್‌ಗೆ ಸರ್ವಪಥನ ಕಂಡಿತು. ಈ ಮಧ್ಯೆ ತಂಡದ ನಾಯಕ ವಿಯಾನ್ ಮುಲ್ಡರ್ ವಿಶ್ವ ದಾಖಲೆಯನ್ನ ಕೈಚಲ್ಲಿದ್ದಾರೆ.
Wiaan Mulder joins elite company after scoring his maiden triple hundred 🙌
— ICC (@ICC) July 7, 2025
More ➡️ https://t.co/EvFis53jyH pic.twitter.com/fco2lWKWC3
ಹೌದು.. 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ ಆರಂಭಿಕ ಆಘಾತ ಕಂಡರೂ ಮುಲ್ಡರ್‌ರ ತ್ರಿಶತಕ, ತಂಡ ಬೃಹತ್ ಮೊತ್ತ ಕಲೆಹಾಕವಲ್ಲಿ ಕಾರಣವಾಯಿತು. ಅಜೇಯ 367 ರನ್ ಬಾರಿಸಿದ ವಿಯಾನ್ 400ರನ್ ಕಲೆಹಾಕಲು ಶಕ್ತರಾಗಿದ್ದರೂ ಸಹ ಬ್ರಿಯಾನ್ ಲಾರಾ ದಾಖಲೆಯನ್ನ ಸರಿಗಟ್ಟುವಲ್ಲಿ ವಿಫಲರಾದರು.
ಬ್ಯಾಟಿಂಗ್ ಮಾಡೋಕೆ ಚಾನ್ಸ್ ಇದ್ದರೂ ಅಜೇಯ 367 ರನ್ ಗಳಿಸಿ ಡಿಕ್ಲೆರ್ಡ್ ಮಾಡಿಕೊಂಡರು.. ಈ ಕುರಿತಾಗಿ ಮಾತನಾಡಿದ ಮುಲ್ಡರ್ ಲಾರಾ ಈಸ್ ಲೆಜೆಂಡ್ ಅವರ ದಾಖಲೆ ಮುರಿಯಲು ನಾನು ಇಷ್ಟ ಪಡಲ್ಲ ಎಂದಿದ್ದಾರೆ. 2004ರಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 400ರನ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದ ಬ್ರಿಯಾನ್ ಲಾರಾರ ದಾಖಲೆ ಮುರಿಯುವ ಅವಕಾಶ ಇದ್ದರೂ ಕೈಚಲ್ಲಿ ಲಾರಾಗೆ ಗೌರವ ಸಲ್ಲಿಸಿದ್ದಕ್ಕೆ ಕ್ರಿಕೆಟ್ ಪ್ರೇಮಿಗಳು ಭೇಷ್ ಎಂದಿದ್ದಾರೆ.