Site icon BosstvKannada

ಹಳದಿ ಮೆಟ್ರೋ ಪರಿಶೀಲಿಸಿದ ಡಿಸಿಎಂ ಡಿಕೆಶಿ ಬಗ್ಗೆ ಸಂಸದ ತೇಜಸ್ವಿ ಸೂರ್ಯ ವ್ಯಂಗ್ಯ

ಬೆಂಗಳೂರಿನ ಯಲ್ಲೋ ಲೈನ್ ಮೆಟ್ರೋ ಉದ್ಘಾಟನೆ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜಕೀಯ ಜಟಾಪಟಿ ಜೋರಾಗಿದೆ. ಈ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ಡಿಸಿಎಂ ಡಿಕೆ ಶಿವಕುಮಾ‌ರ್‌ಗೆ ಟಾಂಗ್ ಕೊಟ್ಟಿದ್ದಾರೆ.

ನಾನು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ವಿನಯಪೂರ್ವಕವಾಗಿ ಹೇಳಲು ಇಚ್ಚೆಪಡುತ್ತೇನೆ. ನಾನು ಹೊಸತಲೆ ಮಾರಿನವ ಹಾಗಾಗಿ ಬೇಗ ಕೆಲಸ ಆಗಬೇಕು ಎನ್ನುವ ಮನಸ್ಥಿತಿ ನನ್ನದು. ಆದ್ರೆ ಈ ಕಾಂಗ್ರೆಸ್ ಪಕ್ಷ.. ಡಿಲೇ ಮಾಡೋದೆ ಅವರ ಕಥೆ. ಆಲಮಟ್ಟಿ ಕಥೆ ನೋಡಿ.. ಶಾಸ್ತ್ರೀಯವರು ಅಡಿಗಲ್ಲು ಹಾಕಿ, ಮನಮೋಹನ್ ಸಿಂಗ್ ಉದ್ಘಾಟನೆ ಮಾಡಿದರು, ಕಾಂಗ್ರೆಸ್ ನವರು ಈ ಸ್ಪೀಡಿನಲ್ಲಿ ದೇಶ ನಡೆಸಿದ್ದು ಎಂದು ಟೀಕಿಸಿದ್ದಾರೆ.

ಈಗ ಯಲ್ಲೋ ಲೈನ್ ಯಾಕೆ ಅರ್ಜಂಟ್ ಆಗಿ ಮಾಡಿದ್ರು ಅಂಥ ಬೈಯ್ತಾ ಇರೋರನ್ನು ನಾನು ಪ್ರಶ್ನೆ ಮಾಡಲು ಬಯಸುತ್ತೇನೆ. ಯಲ್ಲೋ ಲೈನ್ ಮೆಟ್ರೋಗೆ ಇವರ ಕೊಡುಗೆ ಏನು..?ಸಮಸ್ಯೆಗಳು ಇದ್ದಾಗ ಎಲ್ಲಿ ಹೋಗಿದ್ರು ಇವರು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಮೆಟ್ರೋಗೆ ನಾಲ್ಕು ವರ್ಷ ಎಮ್.ಡಿ ಇರಲಿಲ್ಲ. ಎರಡು ವರ್ಷದಲ್ಲಿ ಅರ್ಧ ಡಜೆನ್ ಟೈಮ್ ಮುಹೂರ್ತ ಫಿಕ್ಸ್ ಮಾಡಿ BMRCL ಪ್ರತಿಬಾರಿ ಮುಂದೂಡಿಕೆ ಮಾಡಿದೆ. ಈಗ ಸ್ಪೀಡ್ ಆಗಿ ಕೆಲಸ ಮಾಡುವ ಸಮಯ ಬಂದಿದೆ. ಇಂದಿರಾಗಾಂಧಿ ಶಂಕುಸ್ಥಾಪನೆ, ಸೋನಿಯಾ ಗಾಂಧಿ ಉದ್ಘಾಟನೆ ಮಾಡುವ ಸಮಯ ಮುಗಿದಿದೆ. ಇದು ಮೋದಿ ಕಾಲ, ಎಲ್ಲವೂ ಸ್ಪೀಡ್ ಆಗಿ ನಡೆಯುತ್ತವೆ ಎಂದಿದ್ದಾರೆ.

Exit mobile version