Site icon BosstvKannada

Montepadavu landslide case: ಮೊಂಟೆಪದವಿನ ಬಳಿ ಗುಡ್ಡ ಕುಸಿತ ಕುಟುಂಬವೇ ಸರ್ವನಾಶ

Montepadavu landslide case: ರಾಜ್ಯದಲ್ಲಿ ಸುಮಾರು ದಿನಗಳಿಂದ ಮುಂಗಾರು ಪೂರ್ವವೇ ಮಳೆ ಆರಂಭವಾಗಿದೆ. ವರುಣನ ಅಬ್ಬರಕ್ಕೆ ಕರ್ನಾಟಕ ಜನತೆ ತತ್ತರಿಸಿ ಹೋಗಿದೆ. ಎಡಬಿಡದೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು, ಸಾಕಷ್ಟು ಅವಾಂತರಗಳನ್ನೇ ಸೃಷ್ಟಿಸಿದೆ..

ಭಾರೀ ಮಳೆಯ ಪರಿಣಾಮ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಅನಾಹುತಗಳು ಸಂಭವಿಸಿವೆ. ಜಿಲ್ಲೆಯಲ್ಲಿ ರಾತ್ರಿಯಿಡೀ ಸುರಿದ ಮಳೆ ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಉಳ್ಳಾಲದ ದೇರಳಕಟ್ಟೆ ಮೊಂಟೆದ ಪಂಬದ ಹಿತ್ಲುವಿನಲ್ಲಿ ಘೋರ ದುರಂತ ಸಂಭವಿಸಿದ್ದು, ಮನೆ ಮೇಲೆ ಗುಡ್ಡ ಕುಸಿದು ಐವರು ಸಿಲುಕಿಕೊಂಡಿದ್ದಾರೆ. ಉಳ್ಳಾಲ ತಾಲೂಕಿನ ಎರಡು ಕಡೆ ಭಾರೀ ಮಳೆಗೆ ಮನೆಗಳ ಮೇಲೆ ಗುಡ್ಡ ಕುಸಿದಿದೆ. ಪೈಕಿ ಇಬ್ಬರನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ. ಮತ್ತೊಂದೆಡೆ, ದೇರಳೆಕಟ್ಟೆಯಲ್ಲಿ ಮೊಂಟೆಪದವು ಕೋಡಿ ಎಂಬಲ್ಲಿ ಗುಡ್ಡ ಕುಸಿದು,  ಕಂಪೌಂಡ್ ಗೋಡೆ ಮನೆ ಮೇಲೆ ಕುಸಿದು ಬಿದ್ದು ಫಾತಿಮಾ ನಯೀಮ (6) ಎನ್ನುವ ಮಗು ಮೃತಪಟ್ಟಿದೆ. 

Also Read: ಗಿಗ್ ಕಾರ್ಮಿಕರ ಕಲ್ಯಾಣ ಮಸೂದೆಗೆ ಅಂಕಿತ : ರಾಜ್ಯಪಾಲರಿಗೆ Minister Lad ಅಭಿನಂದನೆ

ಕಾಂತಪ್ಪ ಪೂಜಾರಿ ಎಂಬವರ ಮನೆ ಮೇಲೆ ಗುಡ್ಡ ಬಿದ್ದಿದೆ. ದುರ್ಘಟನೆಯಲ್ಲಿ ಕಾಂತಪ್ಪ ಪೂಜಾರಿ ಪತ್ನಿ ಪ್ರೇಮಾ ಪೂಜಾರಿ ಜೀವ ಕಳೆದುಕೊಂಡಿದ್ದಾರೆ. ಆ ಮನೆ ಒಳಗಡೆ ಪ್ರೇಮಾ, ಅಶ್ವಿನಿ, ಆರ್ಯನ್, ಅನುಶ್ 4 ಜನ ಇದ್ದಾರೆ. ಆ ಮನೆಯಡಿ ಸಿಲುಕಿರುವ ಮಹಿಳೆ ಮತ್ತು ಇಬ್ಬರು ಮಕ್ಕಳ ರಕ್ಷಣಾಕಾರ್ಯ ನಡೆಯುತ್ತಿದೆ. ಸ್ಥಳದಲ್ಲಿ NDRF, SDRF ನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಶ್ವಿನಿ ಎಂಬ ಮಹಿಳೆ ಆಕೆಯ ಮಗು ಆರುಷ್​ನೊಂದಿಗೆ ಮನೆಯೊಳಗೆ ಸಿಲುಕಿದ್ದಾರೆ. ತಾಯಿ ಮಗುವಿನ ಜೊತೆ ರಕ್ಷಣಾ ತಂಡದ ಸಂಪರ್ಕಿಸಿದ್ದು. ಆಕ್ಸಿಜನ್ ಪೂರೈಕೆ ಮಾಡಿದೆ. ಇನ್ನು ಆರುಷ್‌ನನ್ನ ರಕ್ಷಣೆ ಮಾಡಿದ ಎನ್‌ಡಿಆರ್‌ಎಫ್‌, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದೆ ತಿಳಿದು ಬಂದಿದೆ. ಇನ್ನು ಅಶ್ವಿನಿಯನ್ನು ಕೂಡ ರಕ್ಷಿಸಿದ ತಂಡವು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

Exit mobile version