ರಾಜ್ಯ ಉಸ್ತುವಾರಿ ಸಚಿವರಾದ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ಒನ್ ಟು ಒನ್ ಸಭೆಗೆ ಇಂದು ಶಾಸಕ ರಾಜು ಕಾಗೆ ಹಾಜರಾಗಿದ್ದಾರೆ. ಸುರ್ಜೇವಾಲಾ ಜೊತೆ ಮೀಟಿಂಗ್ ಮುಗಿಸಿದ ಬಳಿಕ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ನಾನು ನೆನ್ನೆಯೇ ಬರಬೇಕಿತ್ತು ಆದ್ರೆ ಬರಕ್ಕಾಗಿಲ್ಲ. ವಾಯವ್ಯ ಸಾರಿಗೆ ಸಭೆ ಇತ್ತು ಅದಕ್ಕೆ ಬರಕ್ಕಾಗಿಲ್ಲ, ಅದಕ್ಕೆ ನಾನು ಇವತ್ತು ಬಂದಿದ್ದೇನೆ ಎಂದು ತಿಳಿಸಿದರು.
ಮಧ್ಯಾಹ್ನ ೨ ಗಂಟೆಗೆ ಬನ್ನಿ ಅಂತಾ ಹೇಳಿದ್ರು. ನಾನು ಎಲ್ಲ ವಿಷಯ ಸುರ್ಜೇವಾಲಾ ಅವರ ಬಳಿ ಪ್ರಸ್ತಾಪ ಮಾಡಿದ್ದೇನೆ. ಪ್ರತಿಯೊಂದು ವಿಷಯವನ್ನ ಸವಿಸ್ತಾರವಾಗಿ ಹೇಳಿದ್ದೇನೆ ಎಂದರು. ಅದಕ್ಕೆ ಅವರು ಏನೇ ಸಮಸ್ಯೆ ಇದ್ರು ಈಡೇರಿಸುತ್ತೇವೆ ಎಂದ್ರು. ಅನುದಾನ ಕೊರತೆ ಬಗ್ಗೆ ಮಾತನಾಡಿ,ಅದರ ಸಮಸ್ಯೆ ಬಗೆಹರಿಸ್ತೇವೆ ಎಂದ್ರು ಅಂತಾ ಹೇಳಿದರು.
ಇನ್ನು ನಾನು ಅಸಮಾಧಾನ ಇರೋದು ಯಾಕಂದ್ರೆ.. ವ್ಯವಸ್ಥೆ ಬಗ್ಗೆ ನಮ್ಮ ಅಸಮಾಧಾನವಿದೆ. ಕ್ಷೇತ್ರದ ಕಾರ್ಯ ಕೆಲಸಗಳ ಫೈಲ್ ಸರಿಯಾಗಿ ಮೂವ್ ಆಗ್ತಿಲ್ಲ. ಕೆಲವೊಂದು ಆಶ್ವಾಸನೆ ಕೊಟ್ಟಿದ್ರು, ಅದನ್ನ ಈಡೇರಿಸೋದಕ್ಕೆ ಆಗ್ತಾಯಿಲ್ಲ. ಹೀಗಾಗಿ ಅದರ ಬಗ್ಗೆ ಸುರ್ಜೆವಾಲಾ ಅವರ ಬಳಿ ಹೇಳಿದ್ದೇವೆ. ಅದರ ಬಗ್ಗೆ ಗಮನ ಹರಿಸಿ ಇತ್ಯರ್ಥ ಮಾಡ್ತೀವಿ ಎಂದರು. ಇನ್ನು ಸಿಎಂ, ಸಚಿವರ ಬದಲಾವಣೆಗೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದೆಲ್ಲಾ ಸಭೆಯಲ್ಲಿ ಯಾವುದು ಚರ್ಚೆ ಆಗಿಲ್ಲ ಅಂತಾ ಹೇಳಿದರು.

