Site icon BosstvKannada

ಶಾಸಕ ಬೈರತಿ ಬಸವರಾಜ್ ಗೆ ಸಂಕಷ್ಟ: ತೀರ್ಪು ಕಾಯ್ದಿರಿಸಿದ ಕೋರ್ಟ್

ಬೆಂಗಳೂರು: ಬಿಕ್ಲು ಶಿವ (Biklu Shiva) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬೈರತಿ ಬಸವರಾಜ್ (Byrati Basavaraj) ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಈ ಪ್ರಕರಣ ದಾಖಲಾಗಿ 5 ತಿಂಗಳು ಕಳೆದು ಹೋಗಿವೆ. 18 ಆರೋಪಿಗಳ ವಿರುದ್ಧ ಚಾರ್ಜ ಶೀಟ್ ಸಲ್ಲಿಕೆಯಾಗಿದೆ. ಏಳರಿಂದ ಎಂಟು ಆರೋಪಿಗಳು ಕೊಲೆ ಸಂದರ್ಭದಲ್ಲಿ ಅಪರಿಚಿತರರು ಇದ್ದಾರೆ. ಆದರೆ, ಬೈರತಿ ಬಸವರಾಜ್‌ರನ್ನ ಎ-5 ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಪೊಲೀಸರು ಅನುಮಾನದ ಮೇರೆಗೆ ಎಫ್‌ಐಆರ್‌ನಲ್ಲಿ ಹೆಸರು ಸೇರಿಸಿದ್ದಾರೆ. ಸಿಐಡಿಗೆ ಪ್ರಕರಣ ವರ್ಗಾವಣೆ ಆದ ನಂತರ ನಿನ್ನೆಯವರೆಗೂ ಸಿಐಡಿ ನೋಟಿಸ್ ನೀಡಿಲ್ಲ. ಸಮನ್ಸ್ ಕೊಟ್ಟಿಲ್ಲ. ಹೇಗೆ ವಿಚಾರಣೆಗೆ ಹಾಜರಾಗುವುದು? ಎಫ್‌ಐಆರ್‌ನಲ್ಲಿ ಹೆಸರು ಸೇರಿಸುವುದು ಬಿಟ್ಟು ಬೇರೆ ಏನ್ ಮಾಡಿದ್ದಾರೆ? ಎಫ್‌ಐಆರ್ ದಾಖಲಾದ ನಂತರ ಕೋಕಾ ಕಾಯ್ದೆ ಜಾರಿ ಮಾಡುತ್ತಾರೆ. ಬೈರತಿ ಬಸವರಾಜ್ ಯಾವುದೇ ತನಿಖೆಗೂ ಸಿದ್ಧ, ಯಾವತ್ತು ಕರೆದರೂ ತನಿಖೆಗೆ ಬರುತ್ತಾರೆ ಎಂದು ವಕೀಲರು ವಾದಿಸಿದರು.

ಎ1 ರಿಂದ ಎ5 ತನಕ ಇರುವ ಆರೋಪಿಗಳು ಒಳಸಂಚು ರೂಪಿಸಿ ಹತ್ಯೆ ಮಾಡಿದ್ದಾರೆ. ಎ1 ಜಗದೀಶ್ ಎ5 ಬೈರತಿ ಬಸವರಾಜ್ ಸಂಪರ್ಕದಲ್ಲಿದ್ದಾರೆ. ಎ1, ಎ5 ಕುಂಭಮೇಳಕ್ಕೆ ಹೋಗಿದ್ದಾರೆ ಎಂದು ದಾಖಲೆ ಸಲ್ಲಿಕೆಯಾಗಿದೆ. ಬೈರತಿಗೂ ಕೊಲೆಯಾದವನಿಗೆ ದೇವಸ್ಥಾನದ ಜಾಗದ ವಿಚಾರವಾಗಿ ಗಲಾಟೆ ಆಗಿದೆ. ಎ5 ಕೊಲೆಯಾದ ವ್ಯಕ್ತಿಯ ಮೇಲೆ ದೂರು ದಾಖಲಿಸಿದ್ದ. ಎ1 ಬೈರತಿಗೆ ವಿಷಯ ತಿಳಿಸಿ ವಿದೇಶಕ್ಕೆ ಹೋಗಿದ್ದಾರೆ. ಇದು ಟವರ್ ಲೊಕೇಷನ್‌ನಲ್ಲಿ ತಿಳಿದಿದೆ. ಎ1 ವಿದೇಶಕ್ಕೆ ಎಸ್ಕೇಪ್ ಆಗಲು ಎ5 ಸಹಾಯ ಮಾಡಿದ್ದಾರೆ. ಎ5, ಇತರೆ ಆರೋಪಿಗಳಿಗೆ ಹೋಗಿ ಸರೆಂಡರ್ ಆಗಿ ಅನ್ನೋ ಕಾಲ್ ರೆಕಾರ್ಡ್ಸ್ ಇದೆ ಎಂದು ವಕೀಲ ಅಶೋಕ್ ನಾಯ್ಕ್ ವಾದಿಸಿದ್ದಾರೆ.

Exit mobile version