ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಡಿಸಿಎಂ ಡಿಕೆಶಿ ಭೇಟಿಗೆ ಅವಕಾಶ ಕೇಳಿದ್ದ ಎಂ.ಬಿ ಪಾಟೀಲ್ ಇಂದು ಡಿಕೆಶಿ ನಿವಾಸದಲ್ಲಿ ಭೇಟಿಯಾಗಿದ್ದಾರೆ.
ಇನ್ನು ಭೇಟಿಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಎಂಬಿ ಪಾಟೀಲ್, ಡಿಕೆ ಶಿವಕುಮಾರ್ ಅವರು ರಾಜ್ಯ ಸರ್ಕಾರದ ಡಿಸಿಎಂ ಆಗಿದ್ದಾರೆ. ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಒಬ್ಬ ಮಂತ್ರಿಯಾಗಿ ನಾನು ಅವರನ್ನ ಭೇಟಿ ಮಾಡ್ತಿದ್ದೇನೆ. ಇದ್ರಲ್ಲಿ ಬೇರೆ ವಿಚಾರವಿಲ್ಲ ಎಂದ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

