Mehbooba Mufti: ಇಡೀ ದೇಶಕ್ಕೆ ದೇಶವೇ ನರಿಬುದ್ಧಿಯ ಪಾಕ್‌ಗೆ ಪಾಠ ಕಲಿಸಬೇಕು ಅಂತಾ ಒತ್ತಾಯ ಮಾಡ್ತಿದ್ರೆ, ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೊಬ್ಬರು ಪಾಕ್ ಸೇನಾಧಿಕಾರಿಯನ್ನು ಹಾಡಿ ಹೊಗಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಹೌದು.. ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪಾಕ್ ಸೇನಾಧಿಕಾರಿ ನಡೆಯನ್ನು ಶ್ಲಾಘಿಸಿದ್ದಾರೆ.. ಪಾಕಿಸ್ತಾನದ ವಾಯುಪಡೆಯ ಸಾರ್ವಜನಿಕ ಸಂಪರ್ಕದ ಮಹಾನಿರ್ದೇಶಕ ಏರ್ ವೈಸ್ ಮಾರ್ಷಲ್ ಔರಂಗಜೇಬ್ ಅಹ್ಮದ್ ನಡೆ ಬಗ್ಗೆ ಹೊಗಳಿ, ಭಾರತೀಯರ ಕೆಂಗಣ್ಣಿಗೆ ಮುಫ್ತಿ ಗುರಿಯಾಗಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಮುಫ್ತಿ, ವಿಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.. ನಮ್ಮ ದೇಶದಲ್ಲಿ ಮತಾಂಧ ಗುಂಪುಗಳು ಅಂಗಡಿಗಳನ್ನು ಧ್ವಂಸ ಮಾಡುತ್ತಿದ್ರೆ, ಮಸೀದಿಗಳನ್ನು ಕೆಡವುತ್ತಿವೆ ಮತ್ತು ಸತ್ತಿರುವ ಮೊಘಲ್ ಚಕ್ರವರ್ತಿ ಔರಂಗಜೇಬನನ್ನು ಶಿಕ್ಷಿಸಲು ಸಮಾಧಿಗಳನ್ನು ಅಗೆಯುತ್ತಿವೆ.. ಗಡಿಯುದ್ದಕ್ಕೂ ಅವನ ಹೆಸರಿನ ಏರ್ ವೈಸ್ ಮಾರ್ಷಲ್ ಔರಂಗಜೇಬ್ ಅಹ್ಮದ್ ತನ್ನ ಪಡೆಗಳಿಗೆ ಯುದ್ಧಕ್ಕಾಗಿ ತರಬೇತಿ ನೀಡುತ್ತಿದ್ದಾರೆ ಅಂತಾ ಮುಫ್ತಿ ಬರೆದುಕೊಂಡಿದ್ದಾರೆ..
While fanatic mobs in our country are vandalising shops, bulldozing mosques & digging up graves to punish the long dead Mughal emperor Aurangzeb – across the border his namesake Air Vice Marshal Aurangzeb Ahmed is training his forces for modern air warfare. High time that India… pic.twitter.com/Iu9lvqvacx
— Mehbooba Mufti (@MehboobaMufti) May 13, 2025
ನಮ್ಮ ದೇಶದಲ್ಲೇ ಇದ್ದು, ಪಾಕಿಸ್ತಾನವನ್ನು ಹೊಗಳಿದ್ದು ಯಾಕೆ? ನೀವು ಭಾರತದ ಮುಕುಟ ಮಣಿ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಆದವರು.. ಯುದ್ಧದ ಸಮಯದಲ್ಲಿ ಹೇಗೆ ವರ್ತಿಸಬೇಕೆಂದು ಗೊತ್ತಿಲ್ಲವೇ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ..

