Site icon BosstvKannada

ಮೆಯೋನೀಸ್‌ನಲ್ಲಿದೆ ವಿಷಕಾರಿ ಅಂಶಗಳು : ತಿಂದ್ರೆ ಏನೆಲ್ಲಾ ಆಗುತ್ತೆ ಗೊತ್ತಾ..?

ಬರ್ಗರ್‌, ಸ್ಯಾಂಡ್‌ವಿಚ್‌, ರೋಲ್‌ಗಳಲ್ಲಿ ಮೆಯೋನೀಸ್‌ ಎಂಬ ಸ್ಪ್ರೆಡ್‌ಅನ್ನ ಬಳಸಲಾಗುತ್ತೆ. ನೀವಿದನ್ನ ಗೊತ್ತಿದ್ದೋ ಗೊತ್ತಿಲ್ಲದೆಯೋ ಸಾಕಷ್ಟು ಬಾರಿ ಟೇಸ್ಟ್‌ ಮಾಡಿರ್ತೀರಾ.. ಅದ್ರಲ್ಲೂ ಮಕ್ಕಳಿಗಂತೂ ಮೆಯೋನೀಸ್‌ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಇದನ್ನ ಹೆಲ್ದಿ ಅಂತಾ ಅನ್ಕೊಂಡು ನೀವೇನಾದ್ರೂ ಪ್ರತಿದಿನ ಬಳಸ್ತಾ ಇದ್ದಿರಾ ಹಾಗಿದ್ರೆ ಎಚ್ಚರ. ತುಂಬಾ ಜನರಿಗೆ ಗೊತ್ತಿರ್ಲಿಕ್ಕಿಲ್ಲ ಮೆಯೋನೀಸ್‌ಅನ್ನ ಟ್ರೆಡೀಷನಲ್‌ ಆಗಿ ಮೊಟ್ಟೆ ಬಳಸಿ ತಯಾರಿಸಲಾಗುತ್ತೆ. ಸೋ ನೀವು ವೆಜಿಟೇರಿಯನ್‌ ಆಗಿದ್ರೆ ಈ ಮೆಯೋನೀಸ್‌ ಬಳಸಿರುವ ಆಹಾರಗಳನ್ನ ಅವಾಯ್ಡ್‌ ಮಾಡೋದು ಒಳ್ಳೇದು. ಸಪೋಸ್‌ ನೀವು ನಾನ್‌ವೆಜಿಟೇರಿಯನ್‌ ಆಗಿದ್ರೂ ಕೂಡ ಇದು ಆರೋಗ್ಯಕ್ಕೆ ಒಳ್ಳೇದಲ್ಲ. ಯಾಕಂದ್ರೆ ಮೆಯೋನೀಸ್‌ನಲ್ಲಿ ಹಸಿ ಮೊಟ್ಟೆಯನ್ನ ಬಳಸಲಾಗುತ್ತೆ. ಹಸಿ ಮೊಟ್ಟೆಯಲ್ಲಿ ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾವಿರುತ್ತೆ. ಇದರ ಸೇವನೆಯಿಂದ ಹೊಟ್ಟೆ ನೋವು, ವಾಂತಿ, ಅಜೀರ್ಣ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಬಹುದು. ಅಲ್ಲದೇ, ಇದು ಕ್ಯಾಲೊರಿಯಲ್ಲಿ ಕೂಡ ಅಧಿಕವಾಗಿದ್ದು, ತೂಕ ಇಳಿಕೆಗೆ ಸಹಾಯಕವಾಗಿರೋದಿಲ್ಲ. ಇನ್ನು ಮೆಯೋನೀಸ್‌ ಟ್ರ್ಯಾನ್ಸ್‌ಫ್ಯಾಟ್‌ಅನ್ನ ಹೊಂದಿರುತ್ತೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೇದಲ್ಲ. ಮೆಯೋನೀಸ್‌ನ ಶೆಲ್ಫ್‌ಲೈಫ್‌ ಹೆಚ್ಚಿಸೋದಿಕ್ಕೆ ಪ್ರಿಸರ್ವೇಟಿವ್ಸ್‌ ಬಳಸಲಾಗುತ್ತೆ. ಇದ್ರಿಂದ ಅಲರ್ಜಿ, ತುರಿಕೆ ಸಮಸ್ಯೆಗಳು ಕಾಣಿಸಿಕೊಳ್ಳುತ್ವೆ. ಈ ಎಲ್ಲಾ ಕಾರಣಗಳಿಂದಾಗಿ ಮೆಯೋನೀಸ್‌ ಬಳಕೆ ಆರೋಗ್ಯಕ್ಕೆ ಒಳ್ಳೇದಲ್ಲ.

Read Also : ಬೊಜ್ಜು ಕರಗಿಸಲು ಇಲ್ಲಿದೆ ಬೆಸ್ಟ್‌ ಪ್ಲ್ಯಾನ್‌ : ಗ್ರೀನ್‌ ಟೀ ಕುಡಿಯುವ ಮುಂಚೆ ಇದನ್ನು ಪಾಲಿಸಿ

Exit mobile version