ಬೆಂಗಳೂರು, ಏ.09: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ‘ಮಸ್ತ್ ಮಲೈಕಾ’ ಹಾಡು ಈಗ ದಾಖಲೆ ಬರೆದಿದೆ. ಬಿಡುಗಡೆಯಾದ ಬಳಿಕ ಈ ಪಾರ್ಟಿ ಸಾಂಗ್ ಸಖತ್ ಕ್ರೇಜ್ ಕ್ರಿಯೇಟ್ ಮಾಡಿತ್ತು. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ಬಾಯಲ್ಲಿ ನೋಡಿದ್ರೂ ಮಲೈಕಾಳದ್ದೇ ಮಸ್ತ್ ಮಸ್ತ್ ಗುನುಗು. ಅಷ್ಟರಮಟ್ಟಿಗೆ ‘ಮಸ್ತ್ ಮಲೈಕಾ’ ಹಾಡು ಭರ್ಜರಿ ಹಿಟ್ ಆಗಿತ್ತು. ಇದೀಗ ಯೂಟ್ಯೂಬ್‌ನಲ್ಲಿ ‘ಮಸ್ತ್ ಮಲೈಕಾ’ ಹಾಡು ದಾಖಲೆ ಬರೆದಿದೆ.
ಸರೆಗಮ ಕನ್ನಡ ಯೂಟ್ಯೂಬ್‌ನಲ್ಲಿ ಮಸ್ತ್ ಮಲೈಕಾ ಗೀತೆ ಐದು ಮಿಲಿಯನ್ ಗಟ್ಟಲೇ ವ್ಯೂಸ್ ಕಂಡಿದೆ. ಈ ಮೂಲಕ ಕಿಚ್ಚನ ಮಾರ್ಕ್ ಚಿತ್ರದ ಹಾಡು ರೆಕಾರ್ಡ್ ಕ್ರಿಯೇಟ್ ಮಾಡಿದೆ. ಅಂದಹಾಗೇ ಮಸ್ತ್ ಮಲೈಕಾ ಹಾಡಿಗೆ ಕಂಠ ಕುಣಿಸಿದವರು ಸಾನ್ವಿ ಸುದೀಪ್. ಅವರ ಜೊತೆ ನಕಾಶ್ ಅಜೀಜ್ ಹಾಡಿದ್ದಾರೆ. ಮಗಳ ಧ್ವನಿಗೆ ಕಿಚ್ಚ ಮಸ್ತ್ ಹೆಜ್ಜೆ ಹಾಕಿದ್ದರು. ಈ ಸಿನಿಮಾಗೆ ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ಅನೂಪ್ ಭಂಡಾರಿ ಅವರು ಈ ಹಾಡನ್ನು ಬರೆದಿದ್ದಾರೆ.

ಸಾನ್ವಿ ಚೊಚ್ಚಲ ಸಾಂಗ್ ರೆಕಾರ್ಡ್ ಕ್ರಿಯೇಟ್ :
ಮಸ್ತ್ ಮಲೈಕಾ ಹಾಡಿಗೆ ಧ್ವನಿಯಾಗುವ ಮೂಲಕ ಸಾನ್ವಿ ಸುದೀಪ್ ಸ್ಯಾಂಡಲ್ ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸಾನ್ವಿ ಹಾಡಿರುವ ಚೊಚ್ಚಲ ಹಾಡು 50 ಮಿಲಿಯನ್ ವೀವ್ಸ್ ಕಂಡಿರುವುದು ದಾಖಲೆಯೇ ಸರಿ. ಇನ್ನೊಂದು ವಿಶೇಷ ಏನೆಂದರೆ ಸರೆಗಮ ಯೂಟ್ಯೂಬ್‌ನಲ್ಲಿ 50 ಮಿಲಿಯನ್ ವೀಕ್ಷಣೆ ಕಂಡ ಮೊದಲ ಕನ್ನಡ ಹಾಡು ಕೂಡ ಮಸ್ತ್ ಮಲೈಕಾ ಆಗಿದೆ.
ಯೂಟ್ಯೂಬ್ ಮಾತ್ರವಲ್ಲದೆ ರೀಲ್ಸ್‌ನಲ್ಲಿಯೂ ಕಮಾಲ್ ಮಾಡಿದ ಮಸ್ತ್ ಮಲೈಕಾ ಸಾಂಗ್ 50 ಮಿಲಿಯನ್ ವೀಕ್ಷಣೆ ಕಂಡು ಮುಂದೆ ಸಾಗ್ತಿದೆ. ಈ ಹಾಡಿನಲ್ಲಿ ಮಲೈಕಾ ಆಗಿ ನಿಶ್ವಿಕಾ ನಾಯ್ಡು ಅವರು ಕಾಣಿಸಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿಯಲ್ಲಿ ಈ ಹಾಡು ಬಿಡುಗಡೆಯಾಗಿತ್ತು. ಅದರಲ್ಲಿಯೂ ಕನ್ನಡ ಗೀತೆ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದೆ.