Site icon BosstvKannada

Masood Azhar: ಆಪರೇಷನ್‌ ಸಿಂಧೂರದಲ್ಲಿ ಮಸೂದ್ ಅಜರ್ ಸಾವು?

ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತವು ಆಪರೇಷನ್ ಸಿಂಧೂರ್ (Operation Sindoor) ಹೆಸರಿನಲ್ಲಿ ಪಾಕಿಸ್ತಾನದ 9 ಕಡೆಗಳಲ್ಲಿ ದಾಳಿ ನಡೆಸಿ ಪಾಕಿಸ್ತಾನಕ್ಕೆ ಶಾಕ್‌ ನೀಡಿದೆ. ಇದರ ಜೊತೆಗೆ ಭಾರತಕ್ಕೆ ಬೇಕಿದ್ದ ಮೋಸ್ಟ್‌ ವಾಂಟೆಡ್‌ ಉಗ್ರ ಮಸೂದ್ ಅಜರ್ (terrorist Masood Azhar) ಹಾಗೂ ಇತರೆ ಮೋಸ್ಟ್‌ ವಾಂಟೆಡ್‌ ಉಗ್ರರನ್ನ ಭಾರತೀಯ ಸೈನೆ (Indian Army ) ಉಡೀಸ್‌ ಮಾಡಿದೆ ಎನ್ನಲಾಗಿದೆ.

ಭಾರತವು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ವಾಯುದಾಳಿ (Airstrikes on terrorist bases) ನಡೆಸಿದೆ. ಉಗ್ರರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ(pahalgam attack) ನಡೆಸಿದ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗಿತ್ತು. ಉಗ್ರರು ಅಳಿಸಿದ್ದ ಹಿಂದೂ ಮಹಿಳೆಯರ ಕುಂಕುಮಕ್ಕೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದು, 2001ರಲ್ಲಿ ಭಾರತದ ಸಂಸತ್ತಿನ ಮೇಲೆ ನಡೆದ ದಾಳಿಯ ಮಾಸ್ಟರ್‌ಮೈಂಡ್ ಮಸೂದ್ ಅಜರ್‌ ಉಗ್ರ ಮಸೂದ್ ಅಜರ್ ಕೂಡ ಸತ್ತಿದ್ದಾನೆ ಎನ್ನಲಾಗಿದೆ. ಹೌದು.. ಭಾರತವು ಬಹಾವಲ್ಪುರದಲ್ಲಿರುವ ಮಸೂದ್ ಅಜರ್‌ನ ಪ್ರಧಾನ ಕಚೇರಿ ಮತ್ತು ಮದರಸಾ ನಾಶ ಮಾಡಿದೆ ಅಂತಾ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಭಾರತವು ಮುರಿಡ್ಕೆಯಲ್ಲಿರುವ ಲಷ್ಕರೆ ಅಡಗುತಾಣವನ್ನು ನಾಶಪಡಿಸಿದ್ದು, ಲಷ್ಕರ್ ಮತ್ತು ಜೈಶ್‌ನ ಅನೇಕ ಉನ್ನತ ಕಮಾಂಡರ್‌ಗಳು ಹಾಗೂ ಮಸೂದ್ ಅಜರ್ ಹತ್ಯೆಯಾಗಿದ್ದಾನೆ ಎನ್ನಲಾಗಿದೆ.

ಬಹಾವಲ್ಪುರದಲ್ಲಿರುವ ತರಬೇತಿ ಕೇಂದ್ರಕ್ಕೆ ಮಸೂದ್ ಅಜರ್‌ ಮಗನ ಜೊತೆಗೆ ಬರುತ್ತಿದ್ದ ಎನ್ನಲಾಗಿದ್ದು, ಇಲ್ಲಿ ಹಲವು ಭಯೋತ್ಪಾದಕರಿಗೆ ತರಬೇತಿ ನೀಡುತ್ತಿದ್ದರು ಎಂದು ಹೇಳಲಾಗಿದೆ. ಇನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ಅವನನ್ನು ವರ್ಷಗಳಿಂದ ಹುಡುಕುತ್ತಿದ್ದು, ಪಹಲ್ಗಾಮ್ನಲ್ಲಿ‌ ನಡೆದ ಭಯೋತ್ಪಾದಕ ದಾಳಿಯ ಹಿಂದೆ ಇವನ ಪಾತ್ರವಿರುವ ಬಗ್ಗೆ ಪುರಾವೆಗಳಿವೆ ದೊರಕಿದೆ ಅಂತಾ ಹೇಳಲಾಗ್ತಿದ್ದು, ಮುಂಜಾನೆ ಭಾರತ ನಡೆಸಿದ್ದ ದಾಳಿಯಲ್ಲಿ ಉಗ್ರ ಮಸೂದ್ ಅಜರ್‌ ಸತ್ತಿದ್ದಾನೆ ಎನ್ನಲಾಗಿದೆ.

Exit mobile version