Site icon BosstvKannada

ತಮಿಳಿನಲ್ಲಿ ಹೆಚ್ಚು ಮಾರ್ಕ್ಸ್ ಪಡೆದ ಮಾರ್ಕ್!

ಕಿಚ್ಚ ಸುದೀಪ್ ಅಭಿನಯದ ಮಾರ್ಕ್ (Mark) ಸಿನಿಮಾ ತೆರೆಯ ಮೇಲೆ ದೊಡ್ಡ ಸದ್ದು ಮಾಡುತ್ತಿದೆ. ಕನ್ನಡದಲ್ಲಿ ಈಗಾಗಲೇ ಅಬ್ಬರಿಸುತ್ತಿರುವ ಮಾರ್ಕ್ ಚಿತ್ರ ತಮಿಳುನಾಡಿನಲ್ಲಿ ಜ. 1ರಂದು ಬಿಡುಗಡೆಯಾಗಿತ್ತು. ಈಗ ಅಲ್ಲಿ ಕೂಡ ಭಾರೀ ಸದ್ದು ಮಾಡುತ್ತಿದೆ.

ತಮಿಳಿಗರು ಕಿಚ್ಚನ ಅಭಿನಯವನ್ನು ಭಾರೀ ಇಷ್ಟಪಡುತ್ತಿದ್ದಾರೆ. ತಮಿಳು ಸಿನಿಮಾ ರೀತಿಯೇ ಫೀಲ್ ಆಗುತ್ತಿದೆ ಅಂತಿದ್ದಾರೆ. ಈ ನಿಟ್ಟಿನಲ್ಲಿ ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮಾರ್ಕ್’ ಸಿನಿಮಾದಲ್ಲಿ ಅನೇಕ ತಮಿಳು ಕಲಾವಿದರು ಅಭಿನಯಿಸಿದ್ದಾರೆ. ನವೀನ್ ಚಂದ್ರ, ಯೋಗಿ ಬಾಬು ಸೇರಿದಂತೆ ಬಹುತೇಕರು ತಮಿಳಿಗರು. ನಿರ್ದೇಶಕ ವಿಜಯ್ ಕಾರ್ತಿಕೇಯ ಕೂಡ ತಮಿಳಿನವರೇ. ಸುದೀಪ್ ಕೂಡ ತಮ್ಮ ಪಾತ್ರ ತಮಿಳಿನಲ್ಲಿ ಡಬ್ ಮಾಡಿದ್ದಾರೆ. ಹೀಗಾಗಿ ಅಲ್ಲಿನ ಜನರು ಈ ಚಿತ್ರವನ್ನು ತುಂಬಾ ಇಷ್ಟ ಪಡುತ್ತಿದ್ದಾರೆ.

‘ಮಾರ್ಕ್’ ಚಿತ್ರಕ್ಕೆ ತಮಿಳಿನಲ್ಲಿ 60ಕ್ಕೂ ಹೆಚ್ಚು ಶೋಗಳನ್ನು ಕಂಡಿವೆ. ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಂಕ್ರಾಂತಿ ಪ್ರಯುಕ್ತ ಜನವರಿ 14ರಂದು ರಿಲೀಸ್ ಆಗಲಿದೆ. ಅಲ್ಲಿವರೆಗೆ ‘ಮಾರ್ಕ್’ ಚಿತ್ರ ಆ ಭಾಗದಲ್ಲಿ ಉತ್ತಮ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.

ಈಗಾಗಲೇ ಮಾರ್ಕ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 50 ಕೋಟಿ ರೂ. ಮೀರಿ ಕಲೆಕ್ಷನ್ ಮಾಡಿ ಸಾಗುತ್ತಿದೆ.

Exit mobile version