ವಿಜಯಪುರ: ಮುಖ ಮುಚ್ಚಿಕೊಂಡು ಬಂದು ಮಹಿಳೆಯನ್ನು ಥಳಿಸಿ, ಅವರ ಕಿವಿಯೋಲೆ ಹಾಗೂ ಮಾಂಗಲ್ಯ ಸರ ಕದ್ದಿರುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಡಿವಟಗೇರಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಸರಗಳ್ಳತನ ಹಾಗೂ ಕಿವಿಯೋಲೆ ಕದ್ದು ಆರೋಪಿಗಳಿಬ್ಬರು ಪರಾರಿಯಾಗಿದ್ದರು. ಆಸೀಫ್ ಜಮಾದಾರ್ ಹಾಗೂ ರಿಹಾನ್ ಮಣಿಯಾರ್ ಬಂಧಿತ ಆರೋಪಿಗಳು. ಹಾಲು ತರುವುದಕ್ಕಾಗಿ ಮಹಿಳೆಯು ಅಂಗಡಿಗೆ ಹೋಗಿದ್ದ ಸಂದರ್ಭದಲ್ಲಿ ದಾಳಿ ಮಾಡಿರುವ ಖದೀಮರು, ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಕಲಾವತಿ ಗಾಯಗೊಂಡಿದ್ದರು.
ಅಲ್ಲದೇ, ಕಲಾವತಿ ಮೇಲೆ ಹಲ್ಲೆ ಮಾಡಿ ಕಿವಿ ಕತ್ತರಿಸಿದ್ದರು. ಬಳಿಕ ಕಿವಿಯಲ್ಲಿದ್ದ ಓಲೆ ಹಾಗೂ ಕತ್ತಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಸದ್ಯ ಪೊಲೀಸರು ರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಕರಿತು ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

