IPL ಇಂಡೋ ಪಾಕ್ ಸಂಘರ್ಷದ ಕಾರಣದಿಂದ ಸ್ಥಗಿತಗೊಂಡ ಐಪಿಎಲ್ ಮೇ.17ರಿಂದ ಆರಂಭಗೊಳ್ಳುತ್ತಿದೆ. ಆದರೆ ಇನ್ನುಳಿದ ಪಂದ್ಯಗಳಿಗೆ ಬಿಸಿಸಿಐ ಹೊಸ ನಿಯಮ ಜಾರಿಗೆ ತಂದಿದೆ. ಪ್ಲೇಯರ್ ರಿಪ್ಲೇಸ್‌ಮೆಂಟ್ ನಿಯಮದಲ್ಲಿ ಮಹತ್ತರ ಬದಲಾವಣೆ ಮಾಡಿದೆ.
ಐಪಿಎಲ್ ಟೂರ್ನಿಯ ಹೊಸ ವೇಳಾಪಟ್ಟಿ ಪ್ರಕಾರ ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ. ಮೊದಲ ವೇಳಾಪಟ್ಟಿ ಪ್ರಕಾರ ಮೇ 25ಕ್ಕೆ ಅಂತ್ಯಗೊಳ್ಳಬೇಕಿತ್ತು. ಅಂತಾರಾಷ್ಟ್ರೀಯ ಆಟಗಾರರ ಲಭ್ಯತೆ ಹಾಗೂ ಇತರ ಟೂರ್ನಿಗಳ ಕಾರಣಗಳಿಂದ ಮೇ.25 ರಿಂದ 30 ರೊಳಗೆ ಐಪಿಎಲ್ ಮುಗಿಸಬೇಕು. ಆದರೆ ಟೂರ್ನಿ ಸ್ಥಗಿತಗೊಂಡ ಕಾರಣ ಟೂರ್ನಿ ವಿಳಂಬವಾಗಿದೆ. ಇದರಿಂದ ಹಲವು ಅಂತಾರಾಷ್ಟ್ರೀಯ ಆಟಗಾರರು 2025ರ ಇನ್ನುಳಿದ ಐಪಿಎಲ್ ಟೂರ್ನಿಗೆ ಲಭ್ಯರಿಲ್ಲ. ಮತ್ತೆ ಕೆಲ ಆಟಾಗರರ ವೈಯುಕ್ತಿಕ ಕಾರಣ ನೀಡಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಪ್ಲೇಯರ್ ರಿಪ್ಲೇಸ್‌ಮೆಂಟ್ ನಿಯಮದಲ್ಲಿ ಬದಲಾವಣೆ ಅನಿವಾರ್ಯವಾಗಿತ್ತು.
ಅಂತಾರಾಷ್ಟ್ರೀಯ ಆಟಗಾರರ ರಾಷ್ಟ್ರೀಯ ಕಮಿಟ್‌ಮೆಂಟ್, ಇಂಜುರಿ, ವೈಯುಕ್ತಿ ಕಾರಣಗಳಿಂದ ಐಪಿಎಲ್ ಪಂದ್ಯಕ್ಕೆ ಅಲಭ್ಯರಾಗಿದ್ದರೆ, ಅವರ ಸ್ಥಾನಕ್ಕೆ ಬದಲಿ ಆಟಗಾರರನ್ನು ನೇಮಕ ಮಾಡಲು ಬಿಸಿಸಿಐ ಅವಕಾಶ ನೀಡಿದೆ. ಹೀಗಾಗಿ ಫ್ರಾಂಚೈಸಿ ತಮ್ಮ ತಮ್ಮ ತಂಡದಲ್ಲಿ ಯಾವ ಆಟಗಾರರು ಲಭ್ಯರಿಲ್ಲವೋ ಅವರ ಸ್ಥಾನಕ್ಕೆ ಸೂಕ್ತ ಆಟಗಾರರನ್ನು ಟೂರ್ನಿಯ ಅಂತ್ಯದ ವರೆಗೆ ಬದಲಿಸಲು ಅವಕಾಶ ನೀಡಿದೆ. ಆದರೆ ತಾತ್ಕಾಲಿಕವಾಗಿ ಆಯ್ಕೆ ಮಾಡಿದ ಆಟಗಾರರನ್ನು ಮುಂದಿನ ಆವೃತ್ತಿಗೆ ಉಳಿಸಲು ಸಾಧ್ಯವಿಲ್ಲ. ಈ ಆಟಾಗಾರರು 2026ರ ಐಪಿಎಲ್ ಹರಾಜಿನಲ್ಲಿ ನೋಂದಣಿ ಮಾಡಿಕೊಳ್ಳಬೇಕು.
Also Read: Boycott Turkey ; ಪಾಕ್ ಬೆನ್ನಿಗೆ ನಿಂತ ಟರ್ಕಿಗೆ ಮರ್ಮಾಘಾತ : ಭಾರತದಿಂದ ಬಾಯ್ಕಾಟ್ ಅಭಿಯಾನ
ಐಪಿಎಲ್ ಮೊದಲಿನ ನಿಮಯ ಪ್ರಕಾರ ಪ್ಲೇಯರ್ ರಿಪ್ಲೇಸ್‌ಮೆಂಟ್ ಮಾಡಲು ಕಾಲಾವಕಾಶವಿದೆ. ಅಂದರೆ ಗಾಯ ಅಥವಾ ಅನಾರೋಗ್ಯ ಕಾರಣದಿಂದ ಆಟಗಾರರ ಅಲಭ್ಯರಾಗಿದ್ದರೆ ಅವರ ಸ್ಥಾನಕ್ಕೆ ಬದಲಿ ಆಟಗಾರರ ನೇಮಕಕ್ಕೆ ಅವಕಾಶವಿದೆ. ಆದರೆ ತಂಡ ತನ್ನ 12ನೇ ಪಂದ್ಯಕ್ಕೂ ಮೊದಲು ಈ ಬದಲಾವಣೆ ಮಾಡಬೇಕು. 12ನೇ ಪಂದ್ಯದ ಬಳಿಕ ಆಟಗಾರರ ಬದಲಾವಣೆಗೆ ಅವಕಾಶವಿಲ್ಲ. ಆದರೆ ಈ ಬಾರಿ ಪರಿಸ್ಥಿತಿ ಬೇರೆಯಾಗಿರುವ ಕಾರಣ ಟೂರ್ನಿ ಅಂತ್ಯದವರೆಗೆ ಅವಕಾಶ ನೀಡಲಾಗಿದೆ.
ಬಿಸಿಸಿಐ ಪ್ಲೇಯರ್ ರಿಪ್ಲೇಸ್‌ಮೆಂಟ್ ನಿಯಮ ಬದಲಾವಣೆಯಿಂದ ಫ್ರಾಂಚೈಸಿ ಖುಷಿಯಾಗಿದೆ. ಕಾರಣ ಬಹುತೇಕ ಎಲ್ಲಾ ತಂಡದಿಂದ ಕೆಲ ವಿದೇಶಿ ಆಟಗಾರರು ಅಲಭ್ಯರಾಗಿದ್ದಾರೆ. ತಮ್ಮ ರಾಷ್ಟ್ರೀಯ ತಂಡದ ಟೂರ್ನಿಗಾಗಿ ಮರಳಿದ್ದಾರೆ. ಮತ್ತೆ ಕೆಲವರು ಗಡಿ ಸಂಘರ್ಷದ ಕಾರಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ತಂಡದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಕಠಿಣ ಸವಾಲಾಗಿತ್ತು. ಇದೀಗ ಬಿಸಿಸಿಐ ಆಟಗಾರರ ರಿಪ್ಲೇಸ್ ಮಾಡಲು ಅವಕಾಶ ನೀಡಿರುವ ಕಾರಣ ಫ್ರಾಂಚೈಸಿ ಇದೀಗ ಸಮಾಧಾನಗೊಂಡಿದೆ.

