ಬಳ್ಳಾರಿ: ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಗನ ವಿರುದ್ಧವೂ ಭೂ ಕಬಳಿಕೆಯ ಆರೋಪ ಕೇಳಿ ಬಂದಿದ್ದು, ಮತ್ತೆ ರೆಡ್ಡಿ ಮನೆಯಲ್ಲಿ ಆತಂಕ ಶುರುವಾಗಿದೆ.
ಕಿರೀಟಿ ರೆಡ್ಡಿ ವಿರುದ್ಧ ಭೂಕಬಳಿಕೆ ಆರೋಪ ಕೇಳಿ ಬಂದಿದೆ. ಗಂಗಾವತಿ (Gangavathi) ಶಾಸಕ ಜನಾರ್ದನ ರೆಡ್ಡಿ (Janardhan Reddy) ಪುತ್ರನ ಮೇಲೆ ಬಹುಕೋಟಿ ಮೌಲ್ಯದ ಭೂ ಕಬಳಿಕೆ (Land grabbing)ಯ ಆರೋಪ ಕೇಳಿ ಬಂದಿದೆ. 100 ಕೋಟಿ ರೂ. ಮೌಲ್ಯದ ಸುಮಾರು 9 ಎಕರೆ ಭೂಮಿ ಕಬಳಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿಯ ಗೋವರ್ಧನ ಎಂಬುವವರು ಧಾರವಾಡ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಸಿಐಡಿ ಅಥವಾ ಎಸ್ ಐಟಿ ತನಿಖೆಗೆ ವಹಿಸಿದ್ದಾರೆ. ಕಿರೀಟಿ ರೆಡ್ಡಿ ಹಾಗೂ ಕೆಲವರ ವಿರುದ್ಧ ಈ ಆರೋಪ ಕೇಳಿ ಬಂದಿದೆ.
ಈ ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. 2005ರಲ್ಲಿ ಕಿರಿಟಿ ಸೇರಿದಂತೆ ಮಂಜುನಾಥ್ ಹಾಗೂ ಬಿ. ಸೀನ ಎಂಬವರು ಭೂಮಿ ಪಡೆದಿದ್ದಾರೆ. ಗೋವರ್ಧನ ಬಳಿ ಜಿಪಿಎಸ್ ಹಾಗೂ ಕರಾರು ಪತ್ರ ಮಾಡಿಸಿಕೊಂಡು ಅದನ್ನು ತಿರುಚಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್ ಐಆರ್ ದಾಖಲಾಗಿದೆ ಎನ್ನಲಾಗಿದೆ.

