Site icon BosstvKannada

ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಹಾಲು ಸಂಗ್ರಹಿಸಿದ ಕೆಎಂಎಫ್!

ರಾಜ್ಯದಲ್ಲಿ ಕಳೆದ ಒಂದು 1 ತಿಂಗಳಿಂದ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದ್ದು, ಈ ಮೂಲಕ ಕೆಎಂಎಫ್ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಹಾಲು ಸಂಗ್ರಹವಾಗುತ್ತಿದೆ. ಕಳೆದ ವರ್ಷ ಜೂನ್ ಹಾಗೂ ಜುಲೈ ತಿಂಗಳಲ್ಲಿ 90 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಆದರೆ ಈ ವರ್ಷದ ಮೇ ತಿಂಗಳಾಂತ್ಯದಿಂದ ನಿತ್ಯ ಕೋಟಿಗಿಂತಲೂ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದ್ದು, ಪ್ರಸ್ತುತ ರಾಜ್ಯದಲ್ಲಿ ಕೆಎಂಎಫ್‌ನಲ್ಲಿ ದಿನನಿತ್ಯ 1.05 ಕೋಟಿ ಲೀಟ‌ರ್ ಹಾಲು ಸಂಗ್ರಹವಾಗುತ್ತಿದೆ.

ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ವಾತಾವರಣ ತಂಪಾದ ಕಾರಣ ಹಸಿರು ಮೇವು ಸಿಗುತ್ತಿದೆ. ಹೀಗಾಗಿ ಹಾಲು ಸಂಗ್ರಹದಲ್ಲಿ ಹೆಚ್ಚಳವಾಗಿದೆ. ನಿತ್ಯ ಸಂಗ್ರಹವಾದ ಒಂದು ಕೋಟಿ ಹಾಲಿನಲ್ಲಿ 80 ಲಕ್ಷ ಲೀಟರ್ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಸಂಗ್ರಹವಾದ ಹೆಚ್ಚುವರಿ ಹಾಲಿನಿಂದ ಹಾಲಿನ ಪುಡಿ, ಮೊಸರು ವಿವಿಧ ಮೌಲ್ಯವರ್ಧಿತ ಉತ್ಪನ್ನ ತಯಾರಿಸಲಾಗುತ್ತಿದೆ ಎಂದು ಕೆಎಂಎಫ್ ತಿಳಿಸಿದೆ.

Exit mobile version