Site icon BosstvKannada

King ನಡಾಲ್‌ಗೆ ರಾಜ ಗೌರವ.. ಕೊಹ್ಲಿಗೂ ಹೀಗೆ ಇರುತ್ತಾ?

king

ಟೆನ್ನಿಸ್‌ ಕೋರ್ಟ್‌ ಮೇಲೆ ತಮ್ಮ ಅಪ್ರತಿಮ ಪ್ರಾಬಲ್ಯ ತೋರಿ 14 ಬಾರಿ ಫ್ರೆಂಚ್ ಓಪನ್ ಚಾಂಪಿಯನ್ ಆಗಿದ್ದ ದಿಗ್ಗಜ ಆಟಗಾರ ರಾಫೆಲ್‌ ನಡಾಲ್‌ಗೆ ಪ್ಯಾರಿಸ್‌ನ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ವಿದಾಯದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಟೆನ್ನಿಸ್‌ನ ದಿಗ್ಗಜರ ಸಮಾಗಮ ಆಗಿತ್ತು. ಇದಕ್ಕೆ ಆರ್‌ಸಿಬಿ ದಿಗ್ಗಜರ ಫೋಟೋ ಶೇರ್‌ ಮಾಡಿ ವಿಶ್‌ ಕೂಡ ಮಾಡಿತ್ತು. ಇದಕ್ಕೆ ಕೊಹ್ಲಿ ಅಭಿಮಾನಿಗಳು ಟೆಸ್ಟ್‌ ನಿಂದ ನಿವೃತ್ತಿಯಾಗಿರುವ King ವಿರಾಟ್‌ ಕೊಹ್ಲಿಗೂ ಇದೇ ರೀತಿ ಬೀಳ್ಕೊಡುಗೆ ನೀಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸುತ್ತಿದ್ದಾರೆ.

ಭಾನುವಾರ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ನಡೆದ ಭಾವನಾತ್ಮಕ ವಿದಾಯ ಸಮಾರಂಭದಲ್ಲಿ ರಾಫೆಲ್ ನಡಾಲ್ ಕಣ್ಣೀರು ಸುರಿಸುತ್ತಾ ಭಾವುಕರಾಗಿದ್ದರು. 14 ಬಾರಿ ಫ್ರೆಂಚ್ ಓಪನ್ ಚಾಂಪಿಯನ್ ಆಗಿದ್ದ ನಡಾಲ್ ಅವರನ್ನು ಅವರ ವೃತ್ತಿಜೀವನದ ಪ್ರಮುಖ ಕ್ರೀಡಾಂಗಣದಲ್ಲಿ ತುಂಬಿ ತುಳುಕುತ್ತಿದ್ದ ಪ್ರೇಕ್ಷಕರ ಮುಂದೆ ಸನ್ಮಾನಿಸಲಾಯಿತು.

ಟೆನಿಸ್ ಇತಿಹಾಸದಲ್ಲಿ ಸಾಟಿಯಿಲ್ಲದ ‌ಆಟಗಾರ ನಡಾಲ್‌ಗೆ ಗೌರವ ಸಲ್ಲಿಸಿದರು. ಇದರಲ್ಲಿ ರಾಫೆಲ್ ನಡಾಲ್ ಅವರ ಶ್ರೇಷ್ಠ ಪ್ರತಿಸ್ಪರ್ಧಿಗಳಾದ ರೋಜರ್ ಫೆಡರರ್, ನೊವಾಕ್ ಜೊಕೊವಿಕ್ ಮತ್ತು ಆಂಡಿ ಮುರ್ರೆ ಅವರು ಕೂಡ ಭಾಗಿಯಾಗಿದ್ದರು. ನಡಾಲ್ ಪ್ಯಾರಿಸ್‌ನಲ್ಲಿ 112 ಗೆಲುವುಗಳನ್ನು ದಾಖಲಿಸಿದ್ದು, ಕೇವಲ ನಾಲ್ಕು ಸೋಲುಗಳನ್ನ ಕಂಡಿದ್ದಾರೆ. ಹೃದಯಸ್ಪರ್ಶಿ ಸಮಾರಂಭದ ಭಾಗವಾಗಿ ಕೋರ್ಟ್ ಫಿಲಿಪ್ ಚಾಟ್ರಿಯರ್ ಕೆಂಪುಮಣ್ಣಿನಲ್ಲಿ ನಡಾಲ್ ಅವರ ಹೆಜ್ಜೆಗುರುತನ್ನ ಶಾಶ್ವತವಾಗಿ ಅನಾವರಣಗೊಳಿಸಿದರು.

Also Read: RCB ಫ್ಯಾನ್ಸ್‌ಗೆ ಗುಡ್‌ನ್ಯೂಸ್‌, ಒಂದೇ ವಾರದಲ್ಲಿ 4 ಮ್ಯಾಚ್!

ಸದ್ಯ ಆರ್‌ಸಿಬಿ ಮತ್ತು ಕೊಹ್ಲಿ ಫ್ಯಾನ್ಸ್‌ ಕೂಡ ಇದೇ ರೀತಿ ಕಿಂಗ್‌ ಕೊಹ್ಲಿಗೆ ವಿದಾಯವನ್ನ ಕೊಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ. ವಿಶ್ವ ಕ್ರೀಡಾ ಆಟಗಾರರಲ್ಲೇ ಅತಿ ಹೆಚ್ಚು ಫ್ಯಾನ್ಸ್‌ ಫಾಲೋ ಹೊಂದಿರುವ ಕೊಹ್ಲಿಗೆ ಇದೇ ರೀತಿ ದೊಡ್ಡ ಕಾರ್ಯಕ್ರಮ ಆಯೋಜಿಸಿ ವಿದಾಯ ಹೇಳಬೇಕು, ಅದರಲ್ಲೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಈ ವಿದಾಯದ ಕಾರ್ಯಕ್ರಮವನ್ನ ಆಯೋಜಿಸುವಂತೆ ಫ್ಯಾನ್ಸ್‌ ಆಗ್ರಹಿಸಿದ್ದಾರೆ.

Exit mobile version