Site icon BosstvKannada

ಫೈರಸಿ ಯುದ್ಧಕ್ಕೆ ಉತ್ತರ ನೀಡಿದ ಕಿಚ್ಚ ಸುದೀಪ್

‘ಮಾರ್ಕ್’ ಚಿತ್ರದ (Mark Kannada Movie) ಪ್ರೀ-ರಿಲೀಸ್ ಇವೆಂಟ್ ನಲ್ಲಿ ಸುದೀಪ್ ಹೇಳಿದ ಯುದ್ಧಕ್ಕೆ ಸಿದ್ಧ ಮಾತು ಈಗ ದರ್ಶನ್ ಅಭಿಮಾನಿಗಳನ್ನು ರೊಚ್ಚಿಗೆಬಿಸಿದೆ. ಹೀಗಾಗಿ ಸ್ಟಾರ್ ವಾರ್ ಹಾಗೂ ಅಭಿಮಾನಿಗಳ ವಾರ್ ಜೋರು ಶುರುವಾಗಿದೆ. ಈ ಮಧ್ಯೆ ತಮ್ಮ ಮಾತಿಗೆ ಕಿಚ್ಚ ಉತ್ತರ ನೀಡಿದ್ದಾರೆ.

ನಾನು ಮಾತನಾಡಿದ್ದು ಪೈರಸಿ ಬಗ್ಗೆ ಎಂದು ಸುದೀಪ್ (Kichcha Sudeep) ಹೇಳಿದ್ದಾರೆ. ‘ನಾನು ಆ ವೇದಿಕೆಯಲ್ಲಿ ಪೈರಸಿ ಎಂಬ ಪದ ಬಳಕೆ ಮಾಡಿಲ್ಲ. ಹೀಗಾಗಿ ಚಿತ್ರರಂಗ ರಿಯಾಕ್ಟ್ ಮಾಡಬೇಕಿತ್ತಲ್ಲ. ಮೊದಲು ‘45’ ಚಿತ್ರತಂಡದವರು ರಿಯಾಕ್ಟ್ ಮಾಡಬೇಕಿತ್ತು. ಉಪ್ಪಿ ಸರ್, ಧ್ರುವ ಸರ್ಜಾ, ರಕ್ಷಿತ್ ಶೆಟ್ಟಿ, ಗಣೇಶ್, ರಿಷಬ್ ಶೆಟ್ಟಿ, ಯಶ್ ಮುಂತಾದವರೆಲ್ಲ ರಿಯಾಕ್ಟ್ ಮಾಡಬೇಕಿತ್ತು. ಆದರೆ ನಾನು ಮಾತನಾಡಿದ್ದೇನೆ. ಚಿತ್ರರಂಗದಲ್ಲಿ ಒಂದು ಲಕ್ಷ ಜನರು ಇದ್ದಾರೆ. ಯಾರೂ ನಮ್ಮ ಮಾತಿಗೆ ಪ್ರತಿಕ್ರಿಯೆ ನೀಡಿಲ್ಲ. ಪ್ರತಿಕ್ರಿಯೆ ನೀಡಿದವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬಾರದು. ಅಲ್ಲಿ ಮಾತನಾಡಿದ ನನಗೆ ಘನತೆ ಇಲ್ಲವಾ? 30 ವರ್ಷದಿಂದ ಜನರು ನನ್ನನ್ನು ನೋಡಿಲ್ಲವೇ? ಯಾವತ್ತಾದರೂ ನಾನು ತಪ್ಪಾದ ಹೇಳಿಕೆ ನೀಡಿದ್ದೇನಾ? ಯಾವುದಾದರೂ ಕಲಾವಿದರ ಬಗ್ಗೆ ತಪ್ಪಾಗಿ ಮಾತನಾಡಿದ್ದೇನಾ?’ ಎಂದು ಪ್ರಶ್ನಿಸಿದ್ದಾರೆ.

ದುಡ್ಡಿಗಾಗಿ ನಿಮ್ಮ ಸಿನಿಮಾವನ್ನು ಪೈರಸಿ ಮಾಡುತ್ತಿಲ್ಲ. ನಿಮ್ಮ ಸಿನಿಮಾವನ್ನು ಹಾಳು ಮಾಡಬೇಕು ಎಂಬ ಕಾರಣಕ್ಕೆ ಪೈರಸಿ ಮಾಡಲಿದ್ದಾರೆ ಎಂಬ ಮಾಹಿತಿ ಬಂತು. ಅದರ ವಿರುದ್ಧ ನಾನು ನಿಂತುಕೊಳ್ಳದೇ ಮತ್ತೆ ಯಾರು ಬರಬೇಕು? ಅಂದು ನಾನು ನನ್ನ ಸಂಭ್ರಮವನ್ನು ನಿಲ್ಲಿಸಿ, ಆ ಮಾತನ್ನು ಹೇಳಿದೆ ಎಂದಿದ್ದಾರೆ.

ಬೇರೆಯವರ ಸಿನಿಮಾದಲ್ಲಿ ತಲೆ ಹಾಕುವ ಉದ್ದೇಶ ನನಗೆ ಇಲ್ಲ. ಇಂಥವರಿಗೆ ಹೇಳಿದ್ದು ಅಂತ ನಾನು ಹೇಳಿಲ್ಲ. ಬೇರೆ ಯಾರದ್ದೂ ಮಾತಿಗೆ ನಾನು ಯಾಕೆ ಪ್ರತಿಕ್ರಿಯೆ ನೀಡಬೇಕು? ನನ್ನ ಹೆಸರು ಹೇಳಿ ಮಾತನಾಡಿದರೆ ನಾನು ಪ್ರತಿಕ್ರಿಯೆ ಕೊಡುತ್ತೇನೆ. ನಮ್ಮ ಸಿನಿಮಾ ಕಾಪಾಡಿಕೊಳ್ಳುವುದು ನಮಗೆ ಮುಖ್ಯ. ನನಗೆ ಅಹಂ ಇಲ್ಲ. ಅದರ ಅವಶ್ಯಕತೆ ನನಗೆ ಇಲ್ಲ. ಸಿನಿಮಾ ಬಿಟ್ಟು ಬೇರೆ ವಿಚಾರಗಳ ಬಗ್ಗೆ ನಾನು ಕೇರ್ ಮಾಡಲ್ಲ ಎಂದಿದ್ದಾರೆ.

Exit mobile version