ಬಿಗ್ಬಾಸ್ (Bigg boss)ರಿಯಾಲಿಟಿ ಶೋ.. ಕನ್ನಡದ ಅತಿ ಜನಪ್ರಿಯ ಕಾರ್ಯಕ್ರಮ.. 10 ಸೀಸನ್ ಪೂರೈಸಿ, 11ನೇ ಸೀಸನ್ನ ಫೈನಲ್ ಹಂತಕ್ಕೆ ಬಂದಿರುವ ಬಿಗ್ಬಾಸ್(Bigg boss)ಶೋವನ್ನು ಅಭಿಮಾನಿಗಳು ಸಖತ್ ಎಂಜಾಯ್ ಮಾಡ್ತಿದ್ದಾರೆ. ಇದೆಲ್ಲದಕ್ಕಿಂತ ಮೇಲಾಗಿ ಕಿಚ್ಚು ಸುದೀಪ್ರ ನಿರೂಪಣೆ ಅದ್ಭುತವಾದುದು.. ತಪ್ಪು ಮಾಡಿದವರಿಗೆಲ್ಲಾ ಸರಿಯಾಗಿ ಕ್ಲಾಸ್ ತೆಗೆದುಕೊಂಡು ತಿದ್ದಿ ಬುದ್ದಿ ಹೇಳುವ ಕಿಚ್ಚನ ಜಾಣ್ಮೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ರಿಯಾಲಿಟಿ ಶೋಗೆ ಈಗ ಕಿಚ್ಚ ಸುದೀಪ್ ವಿದಾಯ ಹೇಳಿದ್ದು, ಅಭಿಮಾನಿಗಳಿಗೆ ತೀವ್ರ ಬೇಸರ ತರಿಸಿದೆ.
ಸೀಸನ್ 1ರಿಂದಲೇ ಕಮಾಲ್ ಮಾಡಿದ್ದ ಕಿಚ್ಚ ಸುದೀಪ್..!
ಕರ್ನಾಟಕದ ಜನಮಾನಸದಲ್ಲಿ ಹೆಸರುವಾಸಿಯಾಗಿರುವ ಬಿಗ್ಬಾಸ್ ಶುರುವಾಗಿದ್ದು 2013ರಲ್ಲಿ.. ಆ ಸೀಸನ್ನಲ್ಲಿ ಸ್ಯಾಂಡಲ್ವುಡ್ ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ (Vijay Raghavendra)ವಿಜೇತರಾಗಿದ್ರೆ, ಅರುಣ್ ಸಾಗರ್ ರನ್ನರ್ ಅಪ್ ಆಗಿದ್ರು. ಸೀಸನ್ ಒಂದರಿಂದಲೇ ಕಿಚ್ಚ ಸುದೀಪ್(Kiccha Sudeep) ಭರ್ಜರಿಯಾಗಿ ನಿರೂಪಣೆ ಮಾಡಿದ್ರು. ಆ ಮೂಲಕ ಅವರ ಗತ್ತು, ಗೈರತ್ತು ಇಡೀ ಕನ್ನಡ ಇಂಡಸ್ಟ್ರಿಗೆ ಗೊತ್ತಾಗಿತ್ತು.. ಅಲ್ಲಿಂದ ಈ ಸೀಸನ್ವರೆಗೂ ಸುದೀಪ್ ನಿರೂಪಣೆ ಹೇಗಿದೆ ಅಂತಾ ಹೇಳಬೇಕಾಗಿಲ್ಲ. ಅಭಿಮಾನಿಗಳಿಗೆ ಎಲ್ಲಾ ಗೊತ್ತಿರುವ ವಿಚಾರ.. ಆದ್ರೆ, ಈ ಬಾರಿಯ ಸೀಸನ್ ಸುದೀಪ್ಗೆ ತೀರಾ ಕಷ್ಟವಾದ ಸೀಸನ್.. ಯಾಕಂದ್ರೆ ಈ ಸೀಸನ್ನಲ್ಲೇ ಕಿಚ್ಚ ಸುದೀಪ್ ತಾಯಿ ಅಗಲಿದ್ದು…
ಕಿಚ್ಚನ ತಾಯಿಗೆ ಅಚ್ಚುಮೆಚ್ಚು ಈ ಬಿಗ್ಬಾಸ್ ಶೋ..!
ವೇದಿಕೆ ಮೇಲೆಯೇ ಅಮ್ಮನ ನೆನೆದು ಕಣ್ಣೀರಿಟ್ಟಿದ್ದ ಸುದೀಪ್!
ಕಿಚ್ಚ ಸುದೀಪ್ಗೆ ಸೀಸನ್ 11 ತುಂಬಾ ಕಷ್ಟಕರವಾಗಿತ್ತು.. ಎಂದೆಂದಿಗೂ ಮರೆಯಲಾರದ ಸೀಸನ್ ಆಗಿತ್ತು.. ಯಾಕಂದ್ರೆ, ಇದೇ ಸೀಸನ್ನಲ್ಲೇ ಕಿಚ್ಚು ಸುದೀಪ್ ತಾಯಿ ಸರೋಜಾ ವಿಧಿವಶರಾಗಿದ್ರು.. ಅಕ್ಟೋಬರ್ 20ರಂದು ಸರೋಜಾ ಅವರು ಬಾರದ ಲೋಕಕ್ಕೆ ಪಯಣಿಸಿದ್ದು, 2 ವಾರದ ನಂತರ ಅಮ್ಮನ ಅಗಲಿಕೆ ನೋವಿನಲ್ಲೇ ಕಿಚ್ಚ ಸುದೀಪ್ ಬಿಗ್ಬಾಸ್ ಶೋ ಹೋಸ್ಟ್ ಮಾಡಿದ್ದು ಎಲ್ಲರಿಗೂ ಕಣ್ಣೀರು ತರಿಸಿತ್ತು..
ಶೇರ್ವಾನಿ ಧರಿಸಿದ್ದೀನಿ, ಬರಿಗಾಲಲ್ಲಿ ಇದ್ದೀನಿ, ಓಕೆ ನಾ
ವೇದಿಕೆ ಮೇಲೆ ನಿಂತು ನೋಡಮ್ಮ ಎಂದಿದ್ದ ಸುದೀಪ್!

ಹೌದು.. ಅಮ್ಮನ ನಿಧನರಾದ ಎರಡು ವಾರದ ನಂತರ ಕಿಚ್ಚ ಸುದೀಪ್(Kiccha Sudeep), ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ನಡೆಸಲು ತಮ್ಮ ಕರ್ತವ್ಯ ನಿರ್ವಹಿಸಲು ಬಂದರು. ಮೊದಲು ಬಂದವರೇ 2 ವಾರದಿಂದ ನಾನು ಬಂದಿಲ್ಲ ಕ್ಷಮೆ ಇರಲಿ ಎಂದಿದ್ದರು. ಈ ಶೋ ಪ್ರಾರಂಭವಾದ ದಿನ, ನೋಡಮ್ಮ ಶೇರ್ವಾನಿ ಧರಿಸಿದ್ದೀನಿ, ಬರಿಗಾಲಲ್ಲಿ ಇದ್ದೀನಿ, ಓಕೆ ನಾ ಎಂದು ತಮ್ಮ ತಾಯಿಯನ್ನು ಬಿಗ್ಬಾಸ್(Bigg boss) ವೇದಿಕೆ ಮೂಲಕ ಮಾತನಾಡಿಸಿ ಶೋ ಪ್ರಾರಂಭ ಮಾಡಿದ್ದರು ಸುದೀಪ್. ಇದೇ ವಿಷಯವನ್ನು ಬಿಗ್ಬಾಸ್ ನೆನಪು ಮಾಡಿಸಿದ್ದರು… ಅಲ್ಲದೇ, ಆ ದಿನ ತಾಯಿಯನ್ನು ನೆನೆದು ಕಿಚ್ಚ ವೇದಿಕೆಯಲ್ಲಿ ಕಣ್ಣೀರು ಹಾಕಿದ್ದರು. ಕಿಚ್ಚನ ಕೋಟಿಗೊಬ್ಬ 2 ಚಿತ್ರದ ಹಾಡು ಪರಪಂಚ ನೀನೇ ನನ್ನ ಪರಪಂಚ ನೀನೆ ಎಂದು ಹಾಡುತ್ತಾ ಮಾಜಿ ಬಿಗ್ಬಾಸ್ ಸ್ಪರ್ಧಿ, ಸಿಂಗರ್ ವಾಸುಕಿ ವೈಭವ್ ಸ್ಟೇಜ್ಗೆ ಬಂದಿದ್ದರು. ಹಾಡಿನ ಮೂಲಕ ಕಿಚ್ಚನ ತಾಯಿಗೆ ಮ್ಯೂಸಿಕ್ ಟ್ರಿಬ್ಯೂಟ್ ನೀಡಲಾಗಿತ್ತು. ಟ್ರಿಬ್ಯೂಟ್ ಮುಗಿದ ಬಳಿಕ ವಾಸುಕಿ ವೈಭವ್ ನಿಮ್ಮ ತಾಯಿಯಿಂದ ನಾನು ಆಶೀರ್ವಾದ ಪಡೆದಿದ್ದೇನೆ. ಊಟ ಹಾಕಿದ್ದಾರೆ. ನಿಮ್ಮ ನೋವಲ್ಲಿ ನಾವು ಇದ್ದೀವಿ ಅಂದಿದ್ದರು. ಇದಕ್ಕೆ ಕಿಚ್ಚ ನಾನೇನು ಹೇಳಲಿ ತಾಯಿಗೆ ಬಿಗ್ಬಾಸ್ ತುಂಬಾ ಇಷ್ಟ ಅಂದು, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಸಲ್ಲಿಸಿ ಶೋ ಆರಂಭಿಸಿದ್ದರು..
ತಾಯಿ ಅಗಲಿಕೆ ನೋವಲ್ಲೂ ಕರ್ತವ್ಯ ಮೆರೆದಿದ್ದ ಸುದೀಪ್!
ಕಿಚ್ಚನ ಸ್ಥಾನ ತುಂಬುವ ನಿರೂಪಕರು ಯಾರಾಗ್ತಾರೆ..?
ಅಂದು ತಾಯಿ ಅಗಲಿಕೆ ನೋವಿನಲ್ಲೂ ಕಿಚ್ಚ ಸುದೀಪ್ (Kiccha Sudeep)ಬಿಗ್ಬಾಸ್ ಶೋ ನಡೆಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅಷ್ಟೊಂದು ಡೆಡಿಕೇಟಿವ್ ಆಗಿದ್ದ ಸುದೀಪ್ ಸ್ಥಾನವನ್ನು ಯಾರು ತುಂಬ್ತಾರೆ ಅನ್ನೋ ಪ್ರಶ್ನೆಯೂ ಈಗ ಕಾಡುತ್ತಿದೆ.. ಅದು ನಿಜ ಕೂಡ.. ಯಾಕಂದ್ರೆ, ಹೇಳಿಕೇಳಿ ಸುದೀಪ್ ಟ್ಯಾಲೆಂಟ್.. ಅವರ ಮಾತಿನ ಶೈಲಿ, ಸ್ಪರ್ಧಿಗಳನ್ನು ಮಣಿಸುತ್ತಿದ್ದ ಮಾತಿನ ಜಾಣ್ಮೆ ನಿರೀಕ್ಷಿಸಲು ಸಾಧ್ಯವಿಲ್ಲ. ಅಂತವ ವಾಕ್ಚಾತುರ್ಯ ಇರುವ ಜನಪ್ರಿಯ ನಟರ ಕೊರತೆ ಇದೆ. ಹೀಗಾಗಿ, ಕಿಚ್ಚನ ಸ್ಥಾನವನ್ನು ತುಂಬುವವರು ಯಾರು ಅನ್ನೋ ಪ್ರಶ್ನೆಯೂ ಅಭಿಮಾನಿಗಳಲ್ಲಿ ಕಾಡುತ್ತಿದೆ.
ಒಟ್ನಲ್ಲಿ, ಹತ್ತು ಸೀಸನ್ ಮುಗಿಸಿ ಹನ್ನೊಂದನೇ ಸೀಸನ್ ಫೈನಲ್ ಹಂತದಲ್ಲಿರುವಾಗ್ಲೇ ಕಿಚ್ಚ ಸುದೀಪ್(Kiccha Sudeep) ವಿದಾಯ ಹೇಳಿದ್ದಾರೆ. ಅಮ್ಮನ ಅಗಲಿಗೆ ನೋವಿನ ನಡುವೆಯೂ ಬಿಗ್ಬಾಸ್ ಶೋ ನಡೆಸಿ ಎಲ್ಲರ ಮನಗೆದ್ದಿದ್ದರು. ಆದ್ರೀಗ ಆ ಸ್ಥಾನ ತುಂಬೋದು ಯಾರು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಬ್ಯೂರೋ ರಿಪೋರ್ಟ್ ಬಾಸ್ ಟಿವಿ ಕನ್ನಡ.