Site icon BosstvKannada

kamal haasan controversy : ಕ್ಷಮೆ ಕೇಳಿದ್ರೆ ಏನಾಗುತ್ತೆ..? ಕಮಲ್‌ ಹಾಸನ್‌ಗೆ ಹೈಕೋರ್ಟ್‌ ಕ್ಲಾಸ್!

ಕನ್ನಡ ಭಾಷೆ ಬಗ್ಗೆ ಉದ್ಧಟತನ ಮೆರೆದಿದ್ದ ಬಹುಭಾಷಾ ನಟ ಕಮಲ್‌ ಹಾಸನ್‌ಗೆ (kamal haasan controversy) ಕರ್ನಾಟಕ ಹೈಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಕ್ಷಮೆಯಾಚನೆ ಮಾಡದೆ ಪೊಲೀಸ್ ರಕ್ಷಣೆ ಕೋರಿರುವುದನ್ನು ಕೋರ್ಟ್ ಖಂಡಿಸಿದೆ.

ವಾದ ಪ್ರತಿವಾದ ಆಲಿಸಿ ನ್ಯಾಯಮೂರ್ತಿಗಳಾದ ನಾಗಪ್ರಸನ್ನ ಅವರು, ಕಮಲ್‌ ಹಾಸನ್‌ ಕ್ಷಮೆ ಕೇಳಬೇಕು ಅಂತಾ ತಾಕೀತು ಮಾಡಿದರು. ಭಾಷೆ, ನೆಲ, ಜಲ ಅನ್ನೋದು ಒಂದು ಭಾವನೆ. ಜನರ ಭಾವನೆ ಕೆರಳಿಸುವಂತಹ ಕೆಲಸ ಮಾಡಬಾರದು ಅಂತಾ ನ್ಯಾಯಮೂರ್ತಿಗಳು, ಕಮಲ್‌ ಹಾಸನ್‌ಗೆ ಕ್ಲಾಸ್ ತೆಗೆದುಕೊಂಡರು.

ಭಾಷೆ ಬಗ್ಗೆ ಮಾತಾಡಲು ನೀವೇನು ಭಾಷಾ ತಜ್ಣರೇ, ಇತಿಹಾಸಕಾರರೇ, ದಾಖಲೆ ಇದ್ದರೆ ತನ್ನಿ ಚರ್ಚೆ ಮಾಡೋಣ ಅಂತ ಜಡ್ಜ್‌ ಪ್ರಶ್ನಿಸಿದರು. ನೀವೇ ಈ ಪರಿಸ್ಥಿತಿ ನಿರ್ಮಾಣ ಮಾಡಿದ್ದೀರಿ. ಜನರು ಬಯಸುತ್ತಿರುವುದು ಕ್ಷಮೆ.. ಅದನ್ನು ಕೇಳಿದ್ರೆ ಏನಾಗುತ್ತದೆ ಅಂತಾ ಜಡ್ಜ್‌ ಪ್ರಶ್ನಿಸಿದರು.. ನಿಮ್ಮ ಹೇಳಿಕೆಯಿಂದ ನಟ ಶಿವಕುಮಾರ್‌ಗೆ ಸಮಸ್ಯೆಯಾಗಿದೆ..

ಅಷ್ಟೇ ಅಲ್ಲ, ಕ್ಷಮೇ ಕೇಳದಿದ್ರೆ ಕರ್ನಾಟಕದಲ್ಲಿ ಥಗ್‌ ಲೈಫ್‌ ಸಿನಿಮಾ ರಿಲೀಸ್‌ ಯಾಕೆ ಮಾಡಬೇಕು ಅಂತಾ ಪ್ರಶ್ನಿ ಸಿರೋ ಜಡ್ಜ್‌, ನಾನೂ ಈ ಸಿನಿಮಾ ನೋಡಬೇಕು ಅಂದುಕೊಂಡಿದ್ದೆ. ಆದ್ರೆ, ಇಷ್ಟೆಲ್ಲಾ ವಿವಾದ ಆದ ಮೇಲೆ ಯಾಕೆ ಸಿನಿಮಾ ನೋಡಬೇಕು ಅಂದರು.. ಮೊದಲ ಆದ್ಯತೆಯೇ ಕ್ಷಮೆ.. ಅದರ ಬಗ್ಗೆ ಯೋಚಿಸಿ, ಆ ಮೇಲೆ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಅಂತಾ ನ್ಯಾಯಮೂರ್ತಿಗಳು ಹೇಳಿ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿದರು.

ತಮಿಳಿನಿಂದ ಕನ್ನಡ ಹುಟ್ಟಿದ್ದು ಅಂಥಾ ಕಮಲ್‌ ಹಾಸನ್‌ ಶಿವರಾಜ್‌ಕುಮಾರ್‌ ಎದುರೇ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಥಗ್‌ ಲೈಫ್‌ ಸಿನಿಮಾ ಕರ್ನಾಟಕದಲ್ಲಿ ಬ್ಯಾನ್‌ ಮಾಡದಂತೆ ಕನ್ನಡಪರ ಹೋರಾಟಗಾರರು ಆಗ್ರಹಿ ಸಿದ್ದರು. ಈ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಫಿಲಂ ಚೇಂಬರ್‌ ಹಾಗೂ ಪೊಲೀಸ್‌ ಇಲಾಖೆಗೆ ನಿರ್ದೇಶನ ನೀಡುವಂತೆ ಕಮಲ್‌ ಹಾಸನ್‌ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Exit mobile version