BosstvKannada

ಮುಖ್ಯ ಕಾರ್ಯದರ್ಶಿ ವಿರುದ್ಧ ಅಸಂಸದೀಯ ಪದ ಬಳಕೆ : ಬಿಜೆಪಿ ಎಂಎಲ್‌ಸಿ ರವಿಕುಮಾರ್ ವಿರುದ್ಧ ದೂರು

ಬಿಜೆಪಿ ಎಂಎಲ್‌ಸಿ ರವಿಕುಮಾರ್‌ ವಿರುದ್ಧ ಕಾಂಗ್ರೆಸ್‌ ಮುಖಂಡ ಮನೋಹರ್‌ ದೂರು ಸಲ್ಲಿಸಿದ್ದಾರೆ. ಕಾಂಗ್ರೆಸ್‌ ಮುಖಂಡ ಮನೋಹರ್ ನೇತೃತ್ವದ ನಿಯೋಗದಿಂದ ಎಮ್‌ಎಲ್ಸಿ ರವಿಕುಮಾರ್‌ ಸಿಎಸ್‌ ವಿರುದ್ಧ ಅವ್ಯಾಚ್ಛ ಪದ ಬಳಸಿದ್ದಾರೆಂದು ಆರೋಪಿಸಿ ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರು ನೀಡಿದ್ದಾರೆ. ಎಂಎಲ್‌ಸಿ ಸ್ಥಾನದಿಂದ ವಜಾಗೊಳಿಸುವಂತೆ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ವಿರುದ್ದ ಎಮ್‌ಎಲ್‌ಸಿ ರವಿಕುಮಾರ್‌ ಅಸಂಸದೀಯ ಪದ ಬಳಸಿ ಕೀಳಾಗಿ‌ ಮಾತನಾಡಿದ್ದಾರೆ. ಅಸಂವಿಧಾನ ಪದ ಬಳಕೆ ಮಾಡಿದ್ದಾರೆ. ಹಿಂದೆ ಸಚಿವೆಯ ವಿರುದ್ಧವೂ ಇದೇ ರೀತಿ ಮಾಡಿದ್ರು. ಅಂಸವಿಧಾನಿಕ ಪದ ಬಳಸಿ ಅವಹೇಳನ ಮಾಡಿದ್ರು. ಹಾಗಾಗಿ ಎಂಎಲ್ ಸಿ ಸ್ಥಾನದಿಂದ ವಜಾಗೊಳಿಸಬೇಕು ಎಂದು ಮೇಲ್ಮನೆ ಸಭಾಪತಿಗೆ ಕಾಂಗ್ರೆಸ್‌ನಿಂದ ದೂರು ನೀಡಲಾಗಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅಸಂಸದೀಯ ಪದ ಬಳಕೆ ಮಾಡಿದ ಆರೋಪ ಮೇಲೆ ಬಿಜೆಪಿ ಪರಿಷತ್ ಸದಸ್ಯ ಎನ್​. ರವಿಕುಮಾರ್ ವಿರುದ್ಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್​ ವಿಧಾನಸೌಧ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ.

ಬಿಜೆಪಿ ಎಮ್‌ಎಲ್‌ಸಿ ರವಿಕುಮಾರ್‌ ಹೇಳಿದ್ದೇನು?

ಶಾಲಿನಿ ರಜನೀಶ್ ಅವರು ರಾತ್ರಿಯಿಡೀ ರಾಜ್ಯ ಸರ್ಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದ್ದರು.

Exit mobile version